DCET : ಕರ್ನಾಟಕ ಡಿಪ್ಲೊಮ ಸಾಮಾನ್ಯ ಪ್ರವೇಶ ಪರೀಕ್ಷೆ – ವೇಳಾಪಟ್ಟಿ ಬಿಡುಗಡೆ
ಪ್ರಸ್ತುತ ಡಿಸಿಇಟಿ -2022 ಪ್ರವೇಶ ಪರೀಕ್ಷೆಯನ್ನು ದಿನಾಂಕ 20-11-2022 ರಂದು ವೇಳಾಪಟ್ಟಿಯಂತೆ ನಡೆಯಲಿದ್ದು, ಅರ್ಜಿಯನ್ನು ಸಲ್ಲಿಸಿರುವ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಪ್ರಾಧಿಕಾರದ ವೆಬ್ಸೈಟ್ನಿಂದ ದಿನಾಂಕ 08-11-2022 ರಿಂದ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಡಿಸಿಇಟಿ-2022 ಪರೀಕ್ಷೆಯ ಕುರಿತಾದ ವಿವರಗಳನ್ನು ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ಸೈಟ್ ನಿಂದ ಪಡೆಯಬಹುದಾಗಿದೆ.
2022-23 ನೇ ಸಾಲಿನ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಡಿಪ್ಲೊಮ ಸಾಮಾನ್ಯ ಪ್ರವೇಶ ಪರೀಕ್ಷೆ(ಡಿಸಿಇಟಿ-2022) ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ.
ಡಿಪ್ಲೊಮ ಸಾಮಾನ್ಯ ಪ್ರವೇಶ ಪರೀಕ್ಷೆ-2022 ವೇಳಾಪಟ್ಟಿಯನ್ನು ಪ್ರಕಟ ಮಾಡಿದೆ. 2022 ನೇ ಸಾಲಿನ ಎರಡನೇ ವರ್ಷದ / ಮೂರನೇ ಸೆಮಿಸ್ಟರ್ನ ಇಂಜಿನಿಯರಿಂಗ್ / ತಂತ್ರಜ್ಞಾನ, ಕೋರ್ಸುಗಳ ಪ್ರವೇಶಕ್ಕಾಗಿ ಅಧಿಸೂಚನೆಯನ್ನು ಈಗಾಗಲೆ ಹೊರಡಿಸಲಾಗಿದೆ.
ಇದಕ್ಕೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಇದಲ್ಲದೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ https://cetonline.karnataka.gov.in/kea/ ನಲ್ಲಿ ಡಿಸಿಇಟಿ-2022 ರ ಮಾಹಿತಿ ಪುಸ್ತಕವನ್ನು ಪ್ರಕಟಿಸಲಾಗಿದೆ.
ಡಿಸಿಇಟಿ-2022 ಪರೀಕ್ಷೆಯ ವಿವರಗಳನ್ನು ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ಸೈಟ್ ನಿಂದ ಪಡೆಯಬಹುದಾಗಿದ್ದು, ಇನ್ನು ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ದಿನಾಂಕ 21-10-2022 ರಿಂದ ನೋಂದಣಿ ಮಾಡಿ, ಶುಲ್ಕ ಪಾವತಿಸಿ ದಿನಾಂಕ 27-10-2022 ರಾತ್ರಿಯವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಡಿಸಿಇಟಿ – 2022 ಪರೀಕ್ಷೆ ವೇಳಾಪಟ್ಟಿ20-11-2022 ರವಿವಾರ – ಅಪ್ಲೈಡ್ ಸೈನ್ಸ್ ಮತ್ತು ಅಪ್ಲೈಡ್ ಗಣಿತ ಎಲ್ಲಾ ಪ್ರೋಗ್ರಾಂಗಳಿಗೆ 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ.
ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರೀಕ್ಷೆಯ ಅವಧಿ ನಿರ್ಣಯಿಸಲಾಗಿದೆ.
ಇದರ ಜೊತೆಗೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ದಿನಾಂಕ 20-11-2022 ರವಿವಾರ – ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ 50 ಅಂಕಗಳ ಪರೀಕ್ಷೆ ನಡೆಯಲಿದೆ.