Home Interesting ಕುಡಿದು ಟೈಟಾಗಿ ಸ್ಕೂಟರ್ ನ ಹಿಂಬದಿಗೆ ಹಿಮ್ಮುಖವಾಗಿ ಕುಳಿತ ಯುವತಿ | ವೀಡಿಯೋ ವೈರಲ್

ಕುಡಿದು ಟೈಟಾಗಿ ಸ್ಕೂಟರ್ ನ ಹಿಂಬದಿಗೆ ಹಿಮ್ಮುಖವಾಗಿ ಕುಳಿತ ಯುವತಿ | ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿನ ಯುವಕ ಯುವತಿಯರು ಯಾವಾಗ ಯಾಕೆ ಏನು ಎಲ್ಲಿ ಹೇಗೆ ವರ್ತಿಸುತ್ತಾರೆ ಅನ್ನೋದು ತಿಳಿಯಲ್ಲ. ಕೆಲವೊಮ್ಮೆ ಅವರ ಅಸಭ್ಯ ವರ್ತನೆ, ಹುಚ್ಚಾಟಗಳಿಂದ ಸಮಾಜಕ್ಕೆ ತೊಂದರೆ ಆಗಬಹುದು ಅನ್ನುವ ಪರಿಜ್ಞಾನ ಕೂಡ ಇರುವುದಿಲ್ಲ ಅನ್ನಿಸುತ್ತೆ. ಇನ್ನೂ ಇಲೆಕ್ಟ್ರಾನಿಕ್​ ಸಿಟಿಯಲ್ಲಿ ಯುವಕರಿಗಿಂತ ಯುವತಿಯರು ಕಮ್ಮಿಯಿಲ್ಲ ಅನ್ನೋ ತರ ಅಸಭ್ಯ ವರ್ತನೆ ಮಾಡಿರುವುದು ಬೆಳಕಿಗೆ ಬಂದಿದೆ.

ಹೌದು ಇಲೆಕ್ಟ್ರಾನಿಕ್​ ಸಿಟಿಯಲ್ಲಿ ಯುವತಿಯೊಬ್ಬಳು ಸ್ಕೂಟರ್​​ನ ಹಿಂಬದಿಯಲ್ಲಿ, ಹಿಮ್ಮುಖವಾಗಿ ಕುಳಿತು ತೂರಾಡುತ್ತ, ಮೈಬಳುಕಿಸುತ್ತಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ.

ಅಕ್ಟೊಬರ್ 22ರಂದು ಶನಿವಾರ ರಾತ್ರಿ ಈ ದೃಶ್ಯ ಕಂಡುಬಂದಿದೆ. ಸ್ಕೂಟರ್ ಓಡಿಸುತ್ತಿದ್ದವಳೂ ಸಹ ಹೆಲ್ಮೆಟ್​ ಧರಿಸಿರಲಿಲ್ಲ. ಹಿಂಬದಿಯಲ್ಲಿ ಕುಳಿತವಳಂತೂ ಕೇಳಬೇಡಿ ಆಕೆಯದ್ದೇ ಲೋಕದಲ್ಲಿ ತೇಲಾಡುತ್ತಿದ್ದಂತೆ ಇದ್ದಳು. ಕೈ, ಕಾಲು ಅಲ್ಲಾಡಿಸುತ್ತ, ಕುಳಿತಲ್ಲೇ ಡ್ಯಾನ್ಸ್ ಕೂಡ ಮಾಡುತ್ತಿದ್ದಳು. ತುಂಬ ಅಪಾಯಕಾರಿ ರೀತಿಯಲ್ಲಿ ಆ ಸ್ಕೂಟರ್ ಓಡುತ್ತಿತ್ತು.

ಕೇರಳ ನೋಂದಣಿ ಸಂಖ್ಯೆ ಇರುವ ಸ್ಕೂಟರ್ ಇದಾಗಿದ್ದು, ವೀಕೆಂಡ್ ಹಿನ್ನೆಲೆಯಲ್ಲಿ ಈ ಯುವತಿಯರು ಅದ್ಯಾವುದೋ ಪಾರ್ಟಿಗೆ ಹೋಗಿ ವಾಪಸ್​ ಬರುತ್ತಿದ್ದರು ಎಂದು ಮಾಹಿತಿ ದೊರೆತಿದೆ. ಹಿಂಬದಿಯು ಯುವತಿ ತೂರಾಡುತ್ತಿದ್ದುದನ್ನು ನೋಡಿದರೆ ಆಕೆ ಮದ್ಯಪಾನ ಮಾಡಿರುವಂತೆ ಕಾಣುತ್ತಿತ್ತು. ಎಲೆಕ್ಟ್ರಾನಿಕ್​ ಸಿಟಿಯ ಪ್ರಮುಖ ರಸ್ತೆಗಳಲ್ಲಿ ಇವರ ಸ್ಕೂಟರ್​ ಬೇಕಾಬಿಟ್ಟಿ ಓಡಿದೆ.

ಇವರ ಈ ಹುಚ್ಚಾಟದಿಂದ ವಾಹನ ಸವಾರರಿಗೆ ತೊಂದರೆಯೂ ಆಗಿದೆ.ಅದಲ್ಲದೆ ಈ ಘಟನೆ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜನರು ಆಕ್ರೋಶ ಗೊಂಡಿರುವವುದು ಸೋಷಿಯಲ್ ಮೀಡಿಯಾ ಕಾಮೆಂಟ್ ಮೂಲಕ ತಿಳಿದು ಬಂದಿದೆ.