Home ದಕ್ಷಿಣ ಕನ್ನಡ ಕಾಣಿಯೂರು : ಬೆಡ್‌ಶೀಟ್ ಮಾರಾಟಕ್ಕೆ ಬಂದು ಮಾನಭಂಗ ಯತ್ನ  ಪ್ರಕರಣಕ್ಕೆ ಟ್ವಿಸ್ಟ್ , ವ್ಯಾಪಾರಿಗಳಿಂದ ಹಲ್ಲೆ...

ಕಾಣಿಯೂರು : ಬೆಡ್‌ಶೀಟ್ ಮಾರಾಟಕ್ಕೆ ಬಂದು ಮಾನಭಂಗ ಯತ್ನ  ಪ್ರಕರಣಕ್ಕೆ ಟ್ವಿಸ್ಟ್ , ವ್ಯಾಪಾರಿಗಳಿಂದ ಹಲ್ಲೆ ಪ್ರಕರಣ ದಾಖಲು

Hindu neighbor gifts plot of land

Hindu neighbour gifts land to Muslim journalist

ಕಡಬ : ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದಲ್ಲಿ ಬೆಡ್ ಶೀಟ್ ಮಾರಾಟಕ್ಕೆ ಬಂದ ವ್ಯಕ್ತಿಗಳು ಮಹಿಳೆಯೊಬ್ಬರನ್ನು ಮಾನಭಂಗ ಮಾಡಿದ್ದಾರೆ ಎಂದು ಪ್ರಕರಣ ದಾಖಲಾದ ಬೆನ್ನಲ್ಲೇ ಶುಕ್ರವಾರ ದಾಖಲಿಸುತ್ತಿದ್ದಂತೆ ಮಾನಭಂಗ ಯತ್ನ ಪ್ರಕರಣದ ಆರೋಪಿಗಳಾಗಿರುವ ಬೆಡ್ ಶೀಟ್ ವ್ಯಾಪಾರಿಗಳು ಬೆಳ್ಳಾರೆ ಠಾಣೆಯಲ್ಲಿ ಅಪರಿಚಿತರ ವಿರುದ್ದ ಹಲ್ಲೆ ಪ್ರಕರಣ ದಾಖಲಿಸಿದ್ದಾರೆ.

ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ಕಟ್ಟ ಎಂಬಲ್ಲಿ ಬೆಡ್ ಶೀಟ್ ಕಂಬಳಿ ಮರಾಟ ನೆಪದಲ್ಲಿ ಕಿಟ್ಟ ಎಂಬವರ ಮನೆಗೆ ಮಂಗಳೂರು ಸಮೀಪದ ಪೊಳಿ ಸಮೀಪದ ಅಡ್ಡೂರು ನಿವಾಸಿಗಳಾದ ರಮೀಜುದ್ದೀನ್(30) ಹಾಗೂ ಮಹಮ್ಮದ್ ರಫೀಕ್(25) ಎಂಬವರು .ಬೆಡ್ ಶೀಟ್ ಮಾರಾಟ ಮಾಡಲು ಬಂದು ಸರಗಳ್ಳತನಕ್ಕೆ ಯತ್ನಿಸಲಾಗಿತ್ತು ಎನ್ನುವ ಮಾತು ಕೇಳಿ ಬಂದಿತ್ತು. ಬಳಿಕ ನೊಂದ ಮಹಿಳೆ ರಾತ್ರಿ ನ ಮಾನಭಂಗ ಯತ್ನ ಪ್ರಕರಣ ದಾಖಲಿಸಿದ್ದರು.

ಮನೆಗೆ ಬಂದ ಇಬ್ಬರು ಬೆಡ್‌ಶೀಟ್ ತೆಗದುಕೊಳ್ಳಲು ಒತ್ತಾಯಿಸಿ ನನ್ನಲ್ಲಿ ಹಣ ಇಲ್ಲ ನಿಮ್ಮ ಬಟ್ಟೆ ನನಗೆ ಬೇಡಾ ಎಂದು ಹೇಳಿದಾಗ ಹಣವಿಲ್ಲದಿದ್ದರೆ ನೀನು ನನ್ನ ಒಟ್ಟಿಗೆ ಮಲಗು ಎಂದು ಆರೋಪಿಗಳು ಒತ್ತಾಯಿಸಿದ್ದರು. ಅದಕ್ಕೆ ಒಪ್ಪದಿದ್ದಾಗ ಬಲವಂತವಾಗಿ ನನ್ನ ಮೇಲೆ ಕೈ ಹಾಕಿ ಮಾನಭಂಗಕ್ಕೆ ಮಾಡಿದ್ದರು. ನಾನು ಜೋರಾಗಿ ಕಿರುಚಿಕೊಂಡಾಗ ಸ್ಥಳೀಯರು ಬಂದು ಆರೋಪಿಗಳನ್ನು ಬೆನ್ನಟ್ಟಿಸಿದ್ದರು ಎಂದು ಮಹಿಳೆ ಕಡಬ ಠಾಣೆಗೆ ದೂರು ನೀಡಿದ್ದರು. ಅದರಂತೆ ಗುರುವಾರ ತಡ ರಾತ್ರಿ ಪ್ರಕರಣ ದಾಖಲಾಗಿತ್ತು,ಇದೀಗ ಶುಕ್ರವಾರ ಬೆಳ್ಳಾರೆ ಠಾಣೆಯಲ್ಲಿ ಸಾರ್ವಜನಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ರಮೀಜುದ್ದೀನ್ ಅವರು ದೂರು ನೀಡಿ ನಾವು ದೋಳ್ಪಾಡಿಯಲ್ಲಿ ಬೆಡ್ ಶೀಟ್ ಮಾರಾಟಕ್ಕೆ ಹೋಗಿ ಮನೆಯೊಂದರಲ್ಲಿ ವ್ಯಾಪಾರ ವಿಚಾರದಲ್ಲಿ ಮಹಿಳೆಯೊಬ್ಬರೊಂದಿಗೆ ತಕರಾರು ಉಂಟಾದ ಹಿನ್ನೆಲೆಯಲ್ಲಿ ನಾವು ವಾಪಾಸ್ಸು ಬರುವಾಗ ಕಾಣಿಯೂರು ಬಳಿಯ ಬೆದ್ರಾಜೆ ಎಂಬಲ್ಲಿ ಗುಂಪೊಂದು ಪಿಕ್‌ಅಪ್ ವಾಹನವನ್ನು ಅಡ್ಡಗಟ್ಟಿ ನಮ್ಮ ಕಾರಿನಿಂದ ಮಹಮ್ಮದ್ ರಫೀಕ್ ಅವರನ್ನು ಎಳೆದು ಹಾಕಿ ದೊಣ್ಣೆ ಹಾಗು ಕಬ್ಬಿಣದ ರಾಡ್‌ನಿಂದ ಹಿಗ್ಗಾಮುಗ್ಗ ತಳಿಸಿ ಗಾಯಗೊಳಿಸಿದ್ದಾರೆ. ಮಾತ್ರವಲ್ಲದೆ ನಮ್ಮ ಕಾರನ್ನು ಪುಡಿಗೈದು ಜಖಂಗೊಳಿಸಿದ್ದಾರೆ. ಇದರಿಂದ 1.5 ಲಕ್ಷ ರೂ ನಷ್ಟ ಉಂಟಾಗಿದೆ. ಸುಮಾರು 25 ಸಾವಿರ ರೂನ ಬೆಡ್‌ಶೀಟಗಳನನು ಬಿಸಾಡಿ ನಷ್ಟ ಮಾಡಿದ್ದಾರೆ ಎಂದು ತಿಳಿಸಿದ್ದಾರೆ ಅದರಂತೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.