Reliance Jio : ಹಬ್ಬದ ಸಂದರ್ಭದಲ್ಲಿ ಜಿಯೋ ನೀಡಿದೆ 15 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಮತ್ತು ಹಲವು ಕೊಡುಗೆ!!!

ಟೆಲಿಕಾಂ ಜಗತ್ತಿನಲ್ಲಿ ತನ್ನದೇ ಪಾರುಪತ್ಯ ಕಾಯ್ದುಕೊಳ್ಳುತ್ತಿರುವ ರಿಲಾಯನ್ಸ್ ಒಡೆತನದ ಪ್ರಸಿದ್ಧ ಜಿಯೋ ಜನರನ್ನು ಸೆಳೆಯಲು ನಾನಾ ರೀತಿಯ ಸರ್ಕಸ್ ನಡೆಸುತ್ತಿದೆ.

ಜನರಿಗೆ ಮನರಂಜನೆಯ ಜೊತೆಗೆ ಉತ್ತಮ ಡೇಟಾ ಪ್ಯಾಕ್ ನೀಡುವ ಯೋಜನೆಯಲ್ಲಿದ್ದು ,5G ಸೇವೆ ನೀಡಲು ಸಕಲ ಸಿದ್ಧತೆ ಭರದಿಂದ ನಡೆಯತ್ತಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ಅಕ್ಟೋಬರ್ 1 ರಂದು ದೇಶದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ ವಾಣಿಜ್ಯ 5G ಸೇವೆಗಳನ್ನು ಆರಂಭಿಸಿದ್ದು, ಟೆಲಿಕಾಮ್ ಕಂಪೆನಿ ಏರ್‌ಟೆಲ್ 5G ಸೇವೆ ಪ್ರಾರಂಭಿಸಿದ ಬೆನ್ನಲ್ಲೇ, ರಿಲಯನ್ಸ್ ಜಿಯೋ ತಮ್ಮ 5G ಸೇವೆಗಳನ್ನು ನೀಡಲು ಸಜ್ಜಾಗುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ.

ಹಬ್ಬದ ಸಂಭ್ರಮಕ್ಕೆ ಜಿಯೋ ಭರ್ಜರಿ ಕೊಡುಗೆ ನೀಡಲು ಅಣಿಯಾಗುತ್ತಿದೆ. ಉಚಿತ 15 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಸೇರಿ ಹಲವು ಆಫರ್ ಗಳು ಗ್ರಾಹಕರ ಪಾಲಿಗೆ ಒಲಿಯಲಿದೆ. ಸಾಲು ಸಾಲು ಹಬ್ಬಗಳಿಗಾಗಿ ಜಿಯೋ ಹೊಸ ಆಫರ್ ಘೋಷಿಸಿದೆ. 100% ವಾಲ್ಯೂ ಬ್ಯಾಕ್ + ಉಚಿತ 15 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಸೇರಿದಂತೆ ಹಲವು ಕೂಡುಗೆಗಳನ್ನು ಘೋಷಿಸಿದೆ.

ಅತಿದೊಡ್ಡ ಟೆಲಿಕಾಂ ಮತ್ತು ಬ್ರಾಡ್‌ಬ್ಯಾಂಡ್ ಪೂರೈಕೆದಾರರಾದ ರಿಲಯನ್ಸ್ ಜಿಯೋ, ತನ್ನ ಗ್ರಾಹಕರಿಗೆ ಹೊಸ ಆಫರ್ ಗಳನ್ನು ನೀಡುತ್ತಿದ್ದು, ಅಕ್ಟೋಬರ್ 18 ಮತ್ತು ಅಕ್ಟೋಬರ್ 28, 2022 ರ ನಡುವೆ ಜಿಯೋಫೈಬರ್ ಡಬಲ್ ಫೆಸ್ಟಿವಲ್ ಬೋನಾಂಜಾ ಆಫರ್ (JioFiber Double Festival Bonanza) ಅನ್ನು ಲಾಂಚ್ ಮಾಡಿದೆ.

ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಾಗಲಿದ್ದು, ಕೊಡುಗೆಯ ಪ್ರಯೋಜನಗಳನ್ನು ಪಡೆಯಲು ಬಳಕೆದಾರರು ಹೊಸ ಸಂಪರ್ಕವನ್ನು ಖರೀದಿಸಬೇಕಾಗಿದ್ದು, ಇದರ ಜೊತೆಗೆ ಲಾಂಚ್ ಆಗಿರುವ ಯೋಜನೆಗಳಲ್ಲಿ ಒಂದಕ್ಕೆ ಚಂದಾದಾರರಾಗಬೇಕಾಗುತ್ತದೆ.

ಜಿಯೋ ಡಬಲ್ ಫೆಸ್ಟಿವಲ್ ಬೊನಾಂಜಾ ಆಫರ್‌ ನಲ್ಲಿ ಎರಡು ಯೋಜನೆಗಳನ್ನು ಪರಿಚಯಿಸಿದ್ದು, 599ರೂ. ಪ್ಲಾನ್‌ನ 6 ತಿಂಗಳ ರೀಚಾರ್ಜ್ ಮತ್ತು ರೂ 899 ಪ್ಲಾನ್‌ನ 6 ತಿಂಗಳ ರೀಚಾರ್ಜ್, ಈ ಎರಡು ಯೋಜನೆಗಳ ಜೊತೆಗೆ ರೂ. 899 x 3 ತಿಂಗಳ ಯೋಜನೆಯು 100% ಮೌಲ್ಯದ ಬ್ಯಾಕ್ ಆಫರ್‌ಗೆ ಅರ್ಹವಾಗಿದೆ.

ಆದರೆ 15 ದಿನಗಳ ಹೆಚ್ಚುವರಿ ಮಾನ್ಯತೆ ಇದರಲ್ಲಿ ದೊರೆಯುವುದಿಲ್ಲ.ಈ ಹೊಸ ಯೋಜನೆಗಳು ಹೊಸ ಸಂಪರ್ಕಗಳನ್ನು ಬುಕ್ ಮಾಡಿದಾಗ ಬಳಕೆದಾರರಿಗೆ ರೂ 6,500 ಮೌಲ್ಯದ ಪ್ರಯೋಜನಗಳನ್ನು ನೀಡುತ್ತದೆ. ಈ ಕೊಡುಗೆಯು ಆಯ್ದ ಯೋಜನೆಗಳ ಖರೀದಿಗೆ ಅನ್ವಯಿಸುತ್ತದೆ.

ರೂ. 899 X 6 ತಿಂಗಳ ಯೋಜನೆಯಲ್ಲಿ 100 Mbps, 14+ OTT ಅಪ್ಲಿಕೇಶನ್‌ಗಳು ಮತ್ತು 550+ ಬೇಡಿಕೆಯ ಚಾನೆಲ್‌ಗಳು ದೊರೆಯಲಿದೆ. ಒಟ್ಟು ರೂ 6,365 ಆಗಲಿದೆ. (ರೂ. 5,394 + ರೂ. 971 ಜಿಎಸ್‌ಟಿ). ಈ ಯೋಜನೆಯಲ್ಲಿ ಹೊಸ ಗ್ರಾಹಕರು ರೂ.6,500. ಮೌಲ್ಯದ ವೋಚರ್‌ಗಳನ್ನು ಪಡೆಯಬಹುದು.

ವೋಚರ್‌ಗಳು 4 ವಿಭಿನ್ನ ಬ್ರಾಂಡ್‌ಗಳಾಗಿದ್ದು: AJIO ನ ರೂ.2,000 ವೋಚರ್, ರಿಲಯನ್ಸ್ ಡಿಜಿಟಲ್‌ನ ರೂ. 1,000 ವೋಚರ್, NetMeds ನ ರೂ.500 ವೋಚರ್ & IXIGO ನ ರೂ. 3,000 ವೋಚರ್. ಹೆಚ್ಚುವರಿಯಾಗಿ, ಈ ಎಲ್ಲಾ ಗ್ರಾಹಕರು ಯೋಜನೆಯ ಭಾಗವಾಗಿರುವ 6 ತಿಂಗಳ ಮಾನ್ಯತೆಯ ಜೊತೆಗೆ 15 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ಪಡೆಯಬಹುದು.

899 ರೂ. X 3 ತಿಂಗಳ ಯೋಜನೆ: (100 Mbps, 14+ OTT ಅಪ್ಲಿಕೇಶನ್‌ಗಳು ಮತ್ತು 550+ ಬೇಡಿಕೆಯ ಚಾನೆಲ್‌ಗಳು): ಒಟ್ಟು ರೂ.2,697. ಈ ಯೋಜನೆಯಲ್ಲಿ ಹೊಸ ಗ್ರಾಹಕರು ರೂ.3,500 ಮೌಲ್ಯದ ವೋಚರ್‌ಗಳನ್ನು ಪಡೆಯಬಹುದು .

ವೋಚರ್‌ಗಳು 4 ವಿಭಿನ್ನ ಬ್ರಾಂಡ್‌ಗಳಾಗಿದ್ದು: AJIO ನ ರೂ.1,000 ವೋಚರ್, ರಿಲಯನ್ಸ್ ಡಿಜಿಟಲ್‌ನ ರೂ. 500 ವೋಚರ್, NetMeds ನ ರೂ.500 ವೋಚರ್ & IXIGO ನ ರೂ. 1,500 ವೋಚರ್. ಆದರೆ, ಈ ಯೋಜನೆಯಲ್ಲಿ ಹೆಚ್ಚುವರಿ ವ್ಯಾಲಿಡಿಟಿ ಪಡೆಯಲು ಸಾಧ್ಯವಿಲ್ಲ.

ರೂ. 599 x 6 ತಿಂಗಳುಗಳು & ರೂ. 899 x 6 ತಿಂಗಳುಗಳು. ಈ ಎರಡು ಯೋಜನೆಗಳು, ಡಬಲ್ ಫೆಸ್ಟಿವಲ್ ಬೊನಾಂಜಾ ಆಫರ್‌ನೊಂದಿಗೆ ಬರಲಿದ್ದು, ತಿಂಗಳಿಗೆ 599 ಮತ್ತು 899 ರೂ. ಈ ಎರಡೂ ಯೋಜನೆಗಳು ಹೊಸದಾಗಿದ್ದು ಅಕ್ಟೋಬರ್ 18 ರಿಂದ ಅಕ್ಟೋಬರ್ 28, 2022 ರವರೆಗೆ ಮಾತ್ರ ಇರುತ್ತವೆ.

ಈ ಯೋಜನೆಗಳನ್ನು ಖರೀದಿಸುವ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ರೂ. 6,000 ಮೌಲ್ಯದ 4K JioFiber ಸೆಟ್ ಟಾಪ್ ಬಾಕ್ಸ್ ಅನ್ನು ಸಹ ಪಡೆಯಬಹುದು.ರೂ. 599 X 6 ತಿಂಗಳ ಯೋಜನೆಯಲ್ಲಿ 30 Mbps, 14+ OTT ಅಪ್ಲಿಕೇಶನ್‌ಗಳು ಮತ್ತು 550+ ಬೇಡಿಕೆಯ ಚಾನೆಲ್‌ಗಳು ದೊರೆಯಲಿದೆ.

ಒಟ್ಟು ರೂ.4,241 ಆಗಲಿದೆ. (ರೂ. 3,594 + ರೂ. 647 ಜಿಎಸ್‌ಟಿ), ಈ ಯೋಜನೆಯಲ್ಲಿ ಹೊಸ ಗ್ರಾಹಕರು ರೂ. 4,500 ಮೌಲ್ಯದ ವೋಚರ್‌ಗಳನ್ನು ಪಡೆಯಬಹುದಾಗಿದೆ.

ವೋಚರ್‌ಗಳು 4 ವಿಭಿನ್ನ ಬ್ರಾಂಡ್‌ಗಳಾಗಿದ್ದು: ರೂ. AJIO ನ 1,000 ವೋಚರ್, ರಿಲಯನ್ಸ್ ಡಿಜಿಟಲ್‌ನ ರೂ. 1,000 ವೋಚರ್, ನೆಟ್‌ಮೆಡ್ಸ್‌ನ ರೂ. 1,000 ವೋಚರ್ ಮತ್ತು IXIGO ನ ರೂ. 1,500 ವೋಚರ್ ದೊರೆಯಲಿದೆ.

ಹೆಚ್ಚುವರಿಯಾಗಿ, ಈ ಎಲ್ಲಾ ಗ್ರಾಹಕರು ಯೋಜನೆಯ ಭಾಗವಾಗಿರುವ 6 ತಿಂಗಳ ಮಾನ್ಯತೆಯ ಜೊತೆಗೆ 15 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ಪಡೆಯಬಹುದು.

.

Leave A Reply

Your email address will not be published.