ಡಯಾಬಿಟೀಸ್ ಎದುರಿಸುತ್ತಿರುವವರಿಗೆ ಒಂದಷ್ಟು ಟಿಪ್ಸ್

ಶುಗರ್, ಬಿಪಿ ಗಳೆಲ್ಲ ಇಂದಿನ ಕಾಲದಲ್ಲಿ ಹೇಳಿ ಕೇಳಿ ಬರಲ್ಲ. ಯಾವ ವಯಸ್ಸಿನಲ್ಲಿ ಬಂದ್ರೂ ಆಶ್ಚರ್ಯವೇನಿಲ್ಲ ಬಿಡಿ. ಯಾಕೆಂದರೆ ಇಂದಿನ ಕಾಲವೇ ಹಾಗಿದೆ. ರೋಗ ರುಜಿನಗಳು ಬಂದಾಗ ಅದನ್ನು ಕೇರ್ ಲೆಸ್ ಮಾಡಲೇ ಬಾರದು. ಡಯಾಬಿಟೀಸ್ ಇದ್ದವರಂತು ತುಂಬಾ ಹುಷಾರಾಗಿ ಇರ್ಬೇಕು.ಆಗಾಗ ಚೆಕ್ ಅಪ್ ಗಳನ್ನು ಮಾಡಿ ಕೊಳ್ತ, ವೈದ್ಯರ ಸಲಹೆಗಳ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಇನ್ನು ವಾಕಿಂಗ್ ಮಾಡುವ ಮೂಲಕ ಯಾವ ರೀತಿಯಾಗಿ ಡಯಾಬಿಟೀಸ್ ಕಂಟ್ರೋಲ್ ಗೆ ತರೋದು ಹೇಗೆ ಗೊತ್ತಾ?ವಾರದಲ್ಲಿ 30 ನಿಮಿಷಗಳ ಕಾಲ ವೇಗವಾಗಿ ನಡೆಯಲು ಅಭ್ಯಾಸ ಮಾಡಿಕೊಳ್ಳಿ. ಒಮ್ಮೆಗೇ ಈ ರೀತಿಯಾಗಿ ಹೋಗೋಕೆ ಕಷ್ಟ ಆಗ್ಬಹುದು. ಆದರೆ ನಿಧಾನವಾಗಿ ಹೀಗೆ ವಾಕಿಂಗ್ ಅಭ್ಯಾಸ ಮಾಡುವುದರಿಂದ ಒಳಿತು.

ಅವಕಾಶ ಸಿಕ್ಕಲ್ಲಿ ಆದಷ್ಟು ಮೆಟ್ಟಿಲುಗಳನ್ನು ಉಪಯೋಗಿಸಿ. ಯಾಕೆಂದ್ರೆ ದೇಹದ ಸ್ನಾಯುಗಳಿಗೆ ವ್ಯಾಯಾಮ ಆಗುತ್ತದೆ ಮತ್ತು ಸಡಿಲುಗೊಳಿಸುತ್ತದೆ. ಇದರಿಂದ ಶುಗರ್ ಇದ್ದವರಿಗೆ ಆಯಸ್ಸು ಆಗುವುದು ಕಮ್ಮಿ ಆಗುತ್ತದೆ.

ನಿಮ್ಮ ದೇಹದಲ್ಲಿನ ರಕ್ತದ ಸಕ್ಕರೆ ಮಟ್ಟವನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ. ಯಾಕೆಂದರೆ ಅವರು ಜಾಸ್ತಿ ವ್ಯಾಯಾಮಗಳನ್ನು ಮಾಡಬಾರದು. ಇನ್ಸುಲಿನ್ ಅಥವಾ ರಕ್ತದಲ್ಲಿನ ಗ್ಲುಕೋಸ್ ಕಡಿಮೆಗೊಳಿಸುವ ಔಷಧಿ ತೆಗೆದುಕೊಳ್ಳುವ ಟೈಪ್ 2 ಜನರಿಗೆ, ವ್ಯಾಯಾಮ ಮಾಡುವ ಮೊದಲು ರಕ್ತದ ಟೆಸ್ಟ್ ಮಾಡಲೇಬೇಕು.

ಬೆವರನ್ನು ತಡೆಯುವ ಸಾಂಗ್ಸ್ ಅಥವಾ ಡಯಾಬಿಟಿಸ್ ಸಾಕ್ಸ್ ಅನ್ನು ಹೆಚ್ಚಾಗಿ ಬಳಸಿ. ಶಿವಗಳನ್ನು ಧರಿಸುವವರು ಸರಿಯಾದ ನೋಡಿ ಆಯ್ಕೆ ಮಾಡಿ. ಯಾಕೆಂದರೆ ಅದರಿಂದ ನೀರು ಗುಳ್ಳೆಗಳು ಮತ್ತು ಇನ್ನಿತರ ಗಾಯಗಳು ಆಗಬಾರದು. ಶುಗರ್ ಇದ್ದವರು ಆದಷ್ಟು ದೇಹದಲ್ಲಿ ಗಾಯ ಆಗದಂತೆ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಿ.

ವಾಕಿಂಗ್ ಬಂದ ನಂತರ 10 ನಿಮಿಷಗಳ ಕಾಲ ವಿಶ್ರಮಿಸಿ. ಇದರಿಂದ ರಕ್ತ ಸಂಚಾರ ಸಡಿಲವಾಗುತ್ತದೆ. ಡಯಾಬಿಟಿಸ್ ಇದ್ದವರು ಈ ರೀತಿಯಾಗಿ ಫಾಲೋ ಮಾಡುವುದರಿಂದ ಜೀವನದಲ್ಲಿ ಉತ್ತಮ ಆರೋಗ್ಯವನ್ನು ನಡೆಸಬಹುದಾಗಿದೆ.

Leave A Reply

Your email address will not be published.