ವೈರಲ್ ಆಯ್ತು ಮದುವೆಯ ವೀಡಿಯೋ – ‘ಒಂಚೂರು ತಿರುಗಿ ನೋಡೋ’ ಎಂದ ನೆಟ್ಟಿಗರು | ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಮುಖ್ಯವಾದ ಘಟ್ಟ. ಆದ್ದರಿಂದ ಪ್ರತಿಯೊಂದು ಜೋಡಿಯೂ ತಮ್ಮ ವಿವಾಹ, ಜೀವನ ಪರಿಯಂತ ಪ್ರತಿಯೊಂದು ಹೆಜ್ಜೆಯೂ ನೆನಪು ಉಳಿಯುವಂತೆ ಇರಬೇಕೆಂದು ಬಯಸುತ್ತಾರೆ. ಮದುವೆ ಅಂದ್ರೆ ಅಲ್ಲಿ ಖುಷಿ ಸಂಭ್ರಮ ಮನೆ ಮಾಡಿರುತ್ತದೆ. ಹೊಸ ಪರಿಚಯದ ಜನರೊಂದಿಗೆ ಹೊಸಜೀವನವನ್ನು ಪ್ರಾರಂಭಿಸುವ ನವಜೋಡಿಗೆ ಇದೊಂದು ಸಂತೋಷದ ದಿನವಾಗಿರುತ್ತದೆ. ಇದು ಹೇಳಲು ಆಡಂಬರವಾದರೂ ಇದು ಬಹಳ ಸೂಕ್ಷ್ಮವಾದ ವಿಷಯವಾಗಿದೆ.

 

ಹೌದು. ಸ್ವಲ್ಪ ಯಾಮಾರಿದರು ಸಿಗಬೇಕಾಗಿರೋದು ಸಿಗದೇ ಹೋಗಬಹುದು. ಇದಕ್ಕೆ ಉದಾಹರಣೆಯೇ ಈ ಮಧುಮಗ. ಇಂತಹದೊಂದು ಮದುವೆಯ ವೀಡಿಯೋ ಇದೀಗ ವೈರಲ್ ಆಗಿದ್ದು, ನೋಡಿದವರು ಅಂತೂ ಅಯ್ಯೋ ‘ಒಂಚೂರು ಅತ್ತ ತಿರುಗಿ ನೋಡೋ’ ಎಂದು ಮನಸೊಳಗೆ ಗೊಣಗದೆ ಇರಲು ಸಾಧ್ಯವಿಲ್ಲ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂದು ನೀವೇ ನೋಡಿ.

ವೀಡಿಯೋದಲ್ಲಿ ಇರುವಂತೆ, ವರ ವಧು ವೇದಿಕೆಯಲ್ಲಿ ಕುಳಿತಿರುವುದನ್ನು ಕಾಣಬಹುದು. ಆದರೆ ವರ ತನ್ನ ಪಕ್ಕದಲ್ಲಿ ಕುಳಿತುರುವ ಮಹಿಳೆಯ ಜೊತೆ ಮಾತಿನಲ್ಲಿಯೇ ಮುಳುಗಿ ಹೋಗಿದ್ದಾನೆ. ಆತನಿಗೆ ಏನೂ ಮಾತುಕತೆನೋ ಏನೋ, ಪಕ್ಕದಲ್ಲಿ ಕೂತ ವಧುವಿನೊಂದಿಗೆ ಮಾತನಾಡುವುದನ್ನು ಬಿಟ್ಟು ಆ ಮಹಿಳೆಯೊಂದಿಗೆ ಚಕ್ಕಂದ ಹೊಡೆಯುತ್ತಿದ್ದಾನೆ. ಆಗ, ಸಿಕ್ಕಿದ್ದೇ ಚಾನ್ಸ್ ಅಂದುಕೊಂಡು, ಹಿಂದಿನಿಂದ ಬಂದ ಆ ವಧುವಿನ ಪ್ರೇಮಿ ವಧುವಿನ ಹಣೆಗೆ ಐದು ಬಾರಿ ಸಿಂಧೂರ ಹಚ್ಚುತ್ತಾನೆ.

ಅಷ್ಟೇ ಅಲ್ಲದೆ, ಸಿಂಧೂರ ಹಚ್ಚುತ್ತಿದ್ದಂತೆಯೇ ವಧುವನ್ನು ಅಲ್ಲಿಂದ ಕರೆದುಕೊಂಡು ಹಿಂಬಾಗಿಲಿನ ಮೂಲಕ ತೆರಳುತ್ತಾನೆ. ವಧು ಕೂಡಾ ಬಹಳ ಆರಾಮಾಗಿಯೇ ಆ ವ್ಯಕ್ತಿಯ ಜೊತೆ ತೆರಳಿದ್ದಾಳೆ. ಅಂದ ಹಾಗೆ ಉತ್ತರ ಭಾರತದ ಮದುವೆಯಲ್ಲಿ ಸಿಂಧೂರಕ್ಕೆ ಬಹಳ ಪ್ರಾಶಸ್ತ್ಯವಿದೆ. ಹಣೆಗೆ ಸಿಂಧೂರ ಹಚ್ಚಿದರೆಂದರೆ ಮದುವೆ ನಡೆದೇ ಹೋಯಿತು ಎನ್ನುವ ಲೆಕ್ಕಾಚಾರವಂತೆ.

ಈ ವೀಡಿಯೊವನ್ನು Instagram ನಲ್ಲಿ shitty.humours ಹೆಸರಿನ ಐಡಿಯೊಂದಿಗೆ ಹಂಚಿಕೊಳ್ಳಲಾಗಿದೆ. ಆದ್ರೆ, ಈ ವೀಡಿಯೊದಲ್ಲಿರುವಂತೆ ನಿಜವಾಗಿಯೂ ನಡೆದಿದೆಯೋ, ಅಥವಾ ತಮಾಷೆಯ ವಿಡಿಯೋವಾ ಎನ್ನುವುದು ಮಾತ್ರ ತಿಳಿದು ಬಂದಿಲ್ಲ. ಒಟ್ಟಾರೆ, ವಧು ಮಾತ್ರ ಕೊಂಚ ಪ್ರಿಯಕರನ ಮೇಲೆ ಪ್ರೀತಿ ತೋರಿದ್ದು ಮಾತ್ರ ನಿಜ. ಯಾಕಂದ್ರೆ, ಸಿಂಧೂರ ಹಚ್ಚುವಾಗ ಒಂದು ಸಣ್ಣ ಪ್ರತಿರೋಧ ಕೂಡಾ ವಧುವಿನಿಂದ ವ್ಯಕ್ತವಾಗುವುದಿಲ್ಲ. ಹೀಗಾಗಿ, ಈ ಪ್ಲಾನ್ ಮೊದಲೇ ಆಗಿರೋದಂತೂ ಪಕ್ಕಾ. ಒಟ್ಟಾರೆ, ಈ ವೀಡಿಯೋ ನೆಟ್ಟಿಗರ ಗಮನವನ್ನು ತನ್ನತ್ತ ಸೆಳೆದಿದ್ದು ಅಂತೂ ಸತ್ಯ…

https://www.instagram.com/reel/CgClYuEJnoZ/?igshid=NDRkN2NkYzU=

Leave A Reply

Your email address will not be published.