Mushrooms : ಅಣಬೆ ಮಾಂಸಹಾರವೇ? ಅಥವಾ ಸಸ್ಯಹಾರವೇ?

ಆಹಾರ ಬಗೆಗಳು ಹಲವಾರು ಇವೆ. ಅದರಲ್ಲಿ ಅಣಬೆ ಕೂಡ ಹೌದು ಆದರೆ ಅಣಬೆ ಸಸ್ಯಾಹಾರವೋ? ಮಾಂಸಹಾರವೋ? ಎಂಬ ಗೊಂದಲಗಳು ಇವೆ. ಅಣಬೆಯನ್ನು ತಿನ್ನದ ಜನರಿಲ್ಲ. ತುಂಬಾ ಜನರು ಇಷ್ಟಪಟ್ಟು ಹೊಟೇಲ್ ಗಳಲ್ಲಿ ತಂದೂರಿ ರೋಟಿಯೊಂದಿಗೆ ತಿನ್ನಲು ಇಷ್ಟಪಡುವ ಮಶ್ರೂಮ್ ಮಂಚೂರಿ, ಮಶ್ರೂಮ್ ಮಸಾಲಾ ಮತ್ತು ಮಶ್ರೂಮ್ ನಿಂದ ತಯಾರಿಸಿದ ಇತರೆ ಪದಾರ್ಥಗಳು ಅಣಬೆಯಿಂದ ಮಾಡಿರುವುದಂತ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಅಲ್ಲದೆ ಪ್ರಸ್ತುತ ಅಣಬೆ ಕೃಷಿ ಹೆಚ್ಚು ಲಾಭದಾಯಕ ಕೃಷಿ ಆಗಿದೆ ಯಾಕೆಂದರೆ ಅಣಬೆಗೆ ಹೆಚ್ಚಿನ ಬೇಡಿಕೆ ಸಹ ಇದೆ. ಈ ಅಣಬೆಗಳು ಸಸ್ಯಾಹಾರದ ಪಟ್ಟಿಯಲ್ಲಿ ಬರುತ್ತದೆಯೋ ಅಥವಾ ಮಾಂಸಾಹಾರದ ಪಟ್ಟಿಯಲ್ಲಿ ಬರುತ್ತದೆಯೋ ಎನ್ನುವುದೇ ಸದ್ಯದ ಗೊಂದಲ.

 

ಅಣಬೆಗಳಲ್ಲಿ ವಿಭಿನ್ನ ಪ್ರಕಾರಗಳು ಸಹ ಇವೆ.

ಈ ಅಣಬೆಗಳಲ್ಲಿ ಎರಡು ರೀತಿಯ ಅಣಬೆಗಳಿವೆ. * ಖಾದ್ಯ ಅಣಬೆಗಳು. * ವಿಷ ಅಣಬೆಗಳು.

ಈ ವಿಷ ಅಣಬೆಗಳು ತಿನ್ನಲು ಬರುವುದಿಲ್ಲ ಮತ್ತು ಅನೇಕ ಜಾತಿಯ ವಿಷ ಅಣಬೆಗಳು ಜೀವಕ್ಕೆ ಮಾರಕ ಸಹ ಆಗುತ್ತವೆ ಅಂತ ಹೇಳಬಹುದು. ಆದರೆ, ತಿನ್ನಲು ಬರುವ ಅಣಬೆಗಳು ಪೋಷಕಾಂಶಗಳನ್ನು ಹೊಂದಿದ್ದು, ರುಚಿಕರ ಮತ್ತು ಆರೋಗ್ಯಕರ ಭೋಜನಕ್ಕೆ ಅಣಬೆ ಶ್ರೇಷ್ಠ ಎನ್ನಬಹುದು. ಹಾಗಾದರೆ ಇದನ್ನು ಸಸ್ಯಾಹಾರದ ಪಟ್ಟಿಗೆ ಸೇರಿಸಬಹುದೇ ಅನ್ನೋ ಪ್ರಶ್ನೆ ಉಳಿದಿದೆ.ಅಣಬೆಗಳು ಸಾಮಾನ್ಯವಾಗಿ ಕೊಳೆತ ಸಸ್ಯಗಳ ಮಧ್ಯೆ ಬೆಳೆಯುತ್ತವೆ ಮತ್ತು ಹೀಗೆ ನೋಡಿದರೆ ಇದನ್ನು ಸಸ್ಯಾಹಾರ ಅಂತ ಹೇಳಬಹುದು.

ಕಾರ್ಡಿಸೆಪ್ಸ್ ಪ್ರಭೇದಗಳು ಜೀವಂತ ಕಂಬಳಿಹುಳುಗಳ ಮೇಲೆ ದಾಳಿ ಮಾಡುತ್ತವೆ ಮತ್ತು ಅವುಗಳೊಳಗೆ ಬೆಳೆಯುತ್ತವೆ. ಹಾಗೆ ನೋಡಿದರೆ ಅಣಬೆ ಮಾಂಸಹಾರದ ಪಟ್ಟಿಗೆ ಸೇರುತ್ತದೆ ಅನ್ನಿಸುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ಇದು ಕೀಟಗಳು ಮತ್ತು ಸಸ್ಯಗಳನ್ನು ತಿನ್ನುತ್ತದೆ ಎಂದು ಸಹ ಹೇಳಬಹುದು.ಒಂದು ರೀತಿಯಲ್ಲಿ ನೋಡಿದರೆ ಇದು ಮನುಷ್ಯನ ಆಹಾರಕ್ಕೆ ಸಂಬಂಧಪಟ್ಟಂತೆ ಸಸ್ಯಾಹಾರ ಮತ್ತು ಮಾಂಸಹಾರ ಎರಡರ ಪಟ್ಟಿಯಲ್ಲೂ ಸೇರುವುದಿಲ್ಲ ಅಂತ ಹೇಳಲಾಗುತ್ತಿದೆ.

ಇದು ಒಂದು ಶಿಲೀಂಧ್ರ ಮಾಹಿತಿ ಪ್ರಕಾರವಾಗಿ

ಇದು ಜೀವನ ವ್ಯವಸ್ಥೆಯಲ್ಲಿ ಅದರ ಒಂದು ವಿಶಿಷ್ಟವಾದ ವರ್ಗವನ್ನು ಹೊಂದಿದೆ. ಅದನ್ನೇ ಶಿಲೀಂಧ್ರಗಳು ಎಂದು ಕರೆಯುತ್ತಾರೆ. ಆದರೂ ಇದು ಡಿಎನ್‌ಎ ಅನುಕ್ರಮದಲ್ಲಿ ಮಾನವರೊಂದಿಗೆ ಸುಮಾರು 40 ರಿಂದ 50 ಪ್ರತಿಶತವನ್ನು ಹೋಲುತ್ತದೆ, ಅಲ್ಲಿ ಸಸ್ಯಗಳು ಮನುಷ್ಯರೊಂದಿಗೆ ಕೇವಲ 10 ಪ್ರತಿಶತವನ್ನು ಮಾತ್ರ ಹೋಲುತ್ತವೆ. ಆದ್ದರಿಂದ ಸಸ್ಯಗಳಿಗಿಂತ ಹೆಚ್ಚು ಅಣಬೆಗಳನ್ನು ತಿನ್ನುವುದು ಬುದ್ಧಿವಂತಿಕೆಯಾಗಿದೆ.ಡಯಾಬಿಟಿಸ್​ ರೋಗಿಗಳಲ್ಲಿ ವಿಟಮಿನ್ ಬಿ 12 ಕಡಿಮೆಯಾಗೋಕೆ ಇದೇ ಕಾರಣವಾಗಿದೆ. ಅರೋಗ್ಯ ದೃಷ್ಟಿಯಲ್ಲಿ ಉತ್ತಮವಾಗಿದೆ.

ಮೇಲಿನ ಅಂಶಗಳ ಪ್ರಕಾರ ಈಗ ಸಸ್ಯಾಹಾರಿ ಮತ್ತು ಮಾಂಸಹಾರಿ ಜನರು ಇಬ್ಬರೂ ಅಣಬೆಗಳನ್ನು ಸೇವಿಸಬಹುದು. ಇನ್ನು ತಿನ್ನುವುದು ಬಿಡುವುದು ಅವರವರಿಗೆ ಬಿಟ್ಟಿದ್ದು. ಆದರೆ ಅಣಬೆ ಸಸ್ಯಾಹಾರ ಅಥವಾ ಮಾಂಸಾಹಾರವೊ ಎನ್ನುವುದಕ್ಕಿಂತ ಇದು ಒಂದು ಶಿಲೀಂಧ್ರ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಅಣಬೆ ಒಂದು ಉತ್ತಮ ಆಹಾರ ಆಗಿದೆ ಎನ್ನಬಹುದು.

2 Comments
  1. MichaelLiemo says

    ventolin price us: Ventolin inhaler best price – ventolin 2.5
    ventolin inhalador

  2. Josephquees says

    rybelsus generic: Buy compounded semaglutide online – buy semaglutide online

Leave A Reply

Your email address will not be published.