ಊರಿನ ಅಂಗನವಾಡಿ ಕಾರ್ಯಕರ್ತೆ ಮಾಡಿರುವ ಕೆಲಸ ನೋಡಿ

18 ವರ್ಷದ ನಂತರ ಬಾಲಕಿಯರಿಗೆ ಮದುವೆ ಮಾಡಬೇಕು ಎಂಬುದು ಸಂವಿಧಾನದ ಪ್ರಕಾರ ಉಲ್ಲೇಖಿಸಲಾಗಿದೆ. ಅದನ್ನು ಬಿಟ್ಟು ಮೊದಲೇ ಮದುವೆ ಮಾಡಿದರೆ ಅದನ್ನು ಬಾಲ್ಯ ವಿವಾಹ ಎಂದು ಪರಿಗಣಿಸಿ ಅವರಿಗೆ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ. ಇದೀಗ ಇಂತಹದ್ದೇ ಕೆಲಸಕ್ಕೆ ಮುಂದಾಗಿ ಏನಾಗಿದೆ ಎಂದು ನೋಡಿ.

 

ಚನ್ನಪಟ್ಟಣ ತಾಲೂಕಿನ ಸರಗೂರು ಗ್ರಾಮದ ಅಂಗನವಾಡಿ ಕಾರ‍್ಯಕರ್ತೆಯೊಬ್ಬಳು ತನ್ನ ಸಹೋದರಿಯ ಅಪ್ರಾಪ್ತ ಮಗಳ ಮದುವೆ ಮಾಡಿಸಿ, ಉದ್ಯೋಗ ಕಳೆದುಕೊಂಡಿದ್ದಾಳೆ. ಇದಕ್ಕೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಈ ಕ್ರಮ ಜರುಗಿಸಿದ್ದಾರೆ. ಕೆಂಪಮ್ಮ ತಂಗಿಯ ಮಗಳ ವಿವಾಹವು ತಾಲೂಕಿನ ಗರಕಹಳ್ಳಿ ಗ್ರಾಮದ ಸಿದ್ದೇಶ್ವರ ಬೆಟ್ಟದಲ್ಲಿ ಸೆ.2 ರಂದು ಮಾಡಲಾಯಿತು.

ಮದುವೆಯಾದ ಹುಡುಗಿಗೆ 18 ವರ್ಷ ತುಂಬಿರಬೇಕು. ಆದರೆ ಈ ಬಾಲಕಿಗೆ ಅಷ್ಟು ವಯಸ್ಸು ಆಗಿರಲಿಲ್ಲ. ಅಂಗನವಾಡಿ ಕಾರ‍್ಯಕರ್ತೆಯೇ ಮುಂದೆ ನಿಂತು ಮದುವೆ ಮಾಡಿಸಿರುವುದಾಗಿ ವ್ಯಕ್ತಿಯೊಬ್ಬರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ನೀಡಿದ್ದರು.

ಇದನ್ನೆಲ್ಲ ಕಂಡು ಈ ಪ್ರಕರಣದ ವಿಚಾರಣೆ ಗಂಭೀರವಾಗಿ ನಡೆಸುವಂತೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಸಂದೇಶ ನೀಡಿದ್ದರು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಮಾಡಲಾಯಿತು. ಸಿಡಿಪಿಒ ಸಿದ್ದಲಿಂಗಯ್ಯ ಅವರಿಗೆ ಅಂಗನವಾಡಿ ಕಾರ‍್ಯಕರ್ತೆ ಸೋದರಿಯ ಮಗಳಿಗೆ ಇನ್ನೂ 17 ವರ್ಷ 6 ತಿಂಗಳಷ್ಟೇ ವಯಸ್ಸಾಗಿದ್ದು, ಅಪ್ರಾಪ್ತೆಗೆ ವಿವಾಹ ನಡೆದಿರುವುದು ಖಚಿತವಾಯಿತು. ಅಪ್ರಾಪ್ತ ಬಾಲಕಿಯರ ವಿವಾಹವನ್ನು ತಡೆಯಬೇಕಾದ ಅಂಗನವಾಡಿ ಕಾರ‍್ಯಕರ್ತೆಯೇ ಮುಂದೆ ನಿಂತು ಮದುವೆ ಮಾಡಿಸಿರುವ ಬಗ್ಗೆ ಸಿಡಿಪಿಒ ವರದಿ ನೀಡಿದ ಹಿನ್ನೆಲೆಯಲ್ಲಿ, ಕಾರ‍್ಯಕರ್ತೆ ಕೆಂಪಮ್ಮಳನ್ನು ಸೇವೆಯಿಂದ ವಜಾಗೊಳಿಸಿ ಜಿಲ್ಲಾ ಉಪನಿರ್ದೇಶಕ ನಾರಾಯಣಸ್ವಾಮಿ ಆದೇಶಿಸಿದ್ದಾರೆ. ಇದಲ್ಲದೆ, ಅಪ್ರಾಪ್ತ ಬಾಲಕಿಯ ಮದುವೆ ಮಾಡಿರುವ ಪೋಷಕರು, ಮದುಮಗನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇಂತಹ ಕೇಸ್ ಗಳು ದೇಶದಲ್ಲಿ ಇನ್ನು ನಡೆಯುತ್ತಲೇ ಇರುತ್ತವೆ. ಅದನ್ನು ತಡೆಯುವ ಕ್ರಮ ನಾಗರಿಕರಿಗೆ ಇರಬೇಕು. ಇಲ್ಲೊಂದು ಬಾಲಕಿಯ ಜೀವನ ಉಳಿದಿದೆ.

Leave A Reply

Your email address will not be published.