ಬಂಟ್ವಾಳ : ಯುವತಿಯರ ಮೇಲೆ ಯುವಕರಿಂದ ಹಲ್ಲೆ

Share the Article

ಬಂಟ್ವಾಳ: ಯುವತಿಯರಿಬ್ಬರ ಮೇಲೆ ವಿಟ್ಲ ಬಸ್ ನಿಲ್ದಾಣದಲ್ಲಿ ಯುವಕರ ತಂಡವೊಂದು ಹಲ್ಲೆ ಮಾಡಿದ ಘಟನೆಯೊಂದು ನಡೆದಿದೆ. ಕುದ್ದುಪದವು ಮೂಲದ ಇಬ್ಬರು ಯುವತಿಯರ ಮೇಲೆ ಯುವಕರ ತಂಡವೊಂದು ಥಳಿಸಿದ ಘಟನೆ ನಡೆದಿದ್ದು, ಅನಂತರ ಸಾರ್ವಜನಿಕರು ಹಲ್ಲೆ ನಡೆಸಿದವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇಬ್ಬರು ಮುಸ್ಲಿಂ ಸಮುದಾಯದ ಬಾಲಕಿಯರು ನಾಪತ್ತೆಯಾಗಿದ್ದಾರೆ. ಹಾಗಾಗಿ ಅವರನ್ನು ಹುಡುಕಿಕೊಂಡು ಅವರ ಊರಿನ ಯುವಕರು ದಾರಿಯಲ್ಲಿ ಸಿಕ್ಕ ಬೇರೆ ಅಮಾಯಕ ಬಾಲಕಿಯರ ಮೇಲೆ ಹಲ್ಲೆ ನಡೆಸಿದ್ದಾರೆ.

ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಸಾಲೆತ್ತೂರು ಮೂಲದ ಬಾಲಕಿಯೊಬ್ಬಳು ಮನೆಯಿಂದ ಸ್ನೇಹಿತೆಯೊಂದಿಗೆ ತೆರಳಿದ್ದು, ಆಕೆಯನ್ನು ಹುಡುಕುತ್ತಾ ವಿಟ್ಲಕ್ಕೆ ಬಂದಿದ್ದ ಯುವಕರು ಬಸ್ ನಿಲ್ದಾಣದಲ್ಲಿ ನಿಂತಿದ್ದ ಇಬ್ಬರು ಬುರ್ಖಾಧಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.

ಬಳಿಕ ಬುರ್ಖಾ ತೆರೆದಾಗ ಅವರು ಬೇರೆಯವರು ಎಂದು ಗೊತ್ತಾಗಿದೆ. ಸಾರ್ವಜನಿಕರು ಈ ನೈತಿಕ ಪೊಲೀಸ್ ಗಿರಿ ನಡೆಸಿದವರನ್ನು ಹಿಡಿದು ಠಾಣೆಗೆ ಒಪ್ಪಿಸಿದ್ದಾರೆ.

Leave A Reply