Home latest ಗೆಳತಿ ಮತ್ತು ಆಕೆಯ ತಾಯಿಯೊಂದಿಗೂ ಸಂಬಂಧ | ಕುಡಿದ ನಶೆಯಲ್ಲಿ ಹುಡುಗಿ ಮನೆಗೆ ಹೋದ ಯುವಕ...

ಗೆಳತಿ ಮತ್ತು ಆಕೆಯ ತಾಯಿಯೊಂದಿಗೂ ಸಂಬಂಧ | ಕುಡಿದ ನಶೆಯಲ್ಲಿ ಹುಡುಗಿ ಮನೆಗೆ ಹೋದ ಯುವಕ ಶವವಾದ

Hindu neighbor gifts plot of land

Hindu neighbour gifts land to Muslim journalist

ತಾನು ಪ್ರೀತಿಸುತ್ತಿದ್ದ ಯುವತಿ ಹಾಗೂ ಆಕೆಯ ತಾಯಿಯೊಂದಿಗೆ ಸಂಬಂಧ ಹೊಂದಿದ್ದ ಯುವಕನೋರ್ವ ಬರ್ಬರವಾಗಿ ಕೊಲೆಯಾದ ಘಟನೆಯೊಂದು ನಡೆದಿದೆ. 21 ವರ್ಷದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿ, ಮೃತದೇಹ ನಿರ್ಜನ ಪ್ರದೇಶದಲ್ಲಿ ಎಸೆಯಲಾಗಿದೆ. ಈ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ.

ಅಯಾನ್ ಮಂಡಲ್ ( 21 ವರ್ಷ) ಎಂಬಾತನೇ ಕೊಲೆಯಾದ ಯುವಕ. ಈ ಕೊಲೆ ಸಂಬಂಧ ಯುವತಿ, ಆಕೆಯ ತಾಯಿ, ತಂದೆ, ಸಹೋದರ ಮತ್ತು ಇಬ್ಬರು ಸಹಚರರು ಸೇರಿದಂತೆ ಒಟ್ಟು ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಕ್ಯಾಬ್ ಚಾಲಕನಾಗಿದ್ದ ಅಯಾನ್ ಮಂಡಲ್ ತನ್ನ ಗೆಳತಿಯ ಮನೆಗೆ ವಿಜಯ ದಶಮಿ ನಿಮಿತ್ತ ಬುಧವಾರ ಸಂಜೆ ತನ್ನ ಗೆಳತಿಗೆ ಕರೆ ಮಾಡಿದ್ದಾನೆನ್ನಲಾಗಿದೆ. ಆದರೆ, ಗೆಳತಿ ಪದೇ ಪದೇ ಕರೆಗಳನ್ನು ಕಟ್ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಮಂಡಲ್ ನಶೆಯಲ್ಲಿ ತನ್ನ ಗೆಳತಿ ಮನೆಗೆ ತೆರಳಿದ್ದ ಎಂದು ತಿಳಿದು ಬಂದಿದೆ.

ಮನೆಗೆ ತಲುಪಿದ ಆತ ಗೆಳತಿಯ ತಾಯಿಯೊಂದಿಗೆ ಜಗಳ ಮಾಡಿದ್ದಾರೆ. ಅಲ್ಲದೇ, ಆಕೆ ಮೇಲೆ ಹಲ್ಲೆ ಕೂಡ ನಡೆಸಿದ್ದಾನೆ. ಆಗ ತಕ್ಷಣವೇ ಗೆಳತಿ ಹಾಗೂ ಆಕೆಯ ಸಹೋದರ ಮತ್ತು ತಂದೆ ಬಂದಿದ್ದಾರೆ. ಇದರಿಂದ ಈ ಜಗಳವು ವಿಕೋಪಕ್ಕೆ ತಿರುಗಿದೆ. ಈ ವೇಳೆ ಮಂಡಲ್ ತಲೆಗೆ ಸಹೋದರ ಭಾರವಾದ ವಸ್ತುವಿನಿಂದ ಹೊಡೆದಿದ್ದಾರೆ. ಪರಿಣಾಮ ಮಂಡಲ್ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅನಂತರ ನಾಲ್ವರು ಸೇರಿಕೊಂಡು ಹೇಗಾದರೂ ಮಾಡಿ ಶವವನ್ನು ದೂರ ಎಸೆಯಲು ನಿರ್ಧರಿಸಿದ್ದಾರೆ. ಹುಡುಗಿಯ ಸಹೋದರ ತನ್ನ ಇಬ್ಬರು ಸ್ನೇಹಿತರನ್ನು ಸಂಪರ್ಕಿಸಿ, ಪಿಕ್ ಅಪ್ ವ್ಯಾನ್ ಬಾಡಿಗೆಗೆ ಪಡೆದು ಶವವನ್ನು ಮಗ್ರಾಹತ್‌ನ ಏಕಾಂತ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಎಸೆದಿದ್ದಾರೆ. ಗುರುವಾರ ಬೆಳಗ್ಗೆ ಮಂಡಲ್ ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿದ್ದಾರೆ. ತನಿಖೆ ಮಾಡಿದಾಗ ಕೊಲೆಯಾಗಿರುವುದು ಬಯಲಿಗೆ ಬಂದಿದೆ. ಶುಕ್ರವಾರ ರಾತ್ರಿ ಅಯಾನ್ ಮಂಡಲ್ ಮೃತದೇಹ ಪತ್ತೆಯಾಗಿದೆ.

ಆದರೆ ಈ ಪ್ರಕರಣಕ್ಕೆ ಪ್ರಮುಖವಾದ ಟ್ವಿಸ್ಟ್ ದೊರಕಿದೆ. ಅಯಾನ್ ಮನೆಗೆ ಬಂದಿದ್ದ ಗೆಳತಿಯು ತಾನು ಗರ್ಭಿಣಿ ಹಾಗೂ ತನ್ನ ಹೊಟ್ಟೆಯಲ್ಲಿ ಮಗುವಿದೆ ಅಂತಾ ಹೇಳಿಕೊಂಡಿರುವುದಾಗಿ ಅಯಾನ್‌ನ ತಾಯಿ ತಿಳಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಪೊಲೀಸರು ಈಗ ಹೆಚ್ಚಿನ ತನಿಖೆ ನಡೆಸಲು ಮುಂದಾಗಿದ್ದಾರೆ.