Home Breaking Entertainment News Kannada Transgender ಪಾತ್ರದಲ್ಲಿ ಸುಶ್ಮಿತಾ ಸೇನ್ ಫಸ್ಟ್ ಲುಕ್| ಹೇಗಿದೆ ವಿಶ್ವಸುಂದರಿಯ ಹೊಸ ಲುಕ್?

Transgender ಪಾತ್ರದಲ್ಲಿ ಸುಶ್ಮಿತಾ ಸೇನ್ ಫಸ್ಟ್ ಲುಕ್| ಹೇಗಿದೆ ವಿಶ್ವಸುಂದರಿಯ ಹೊಸ ಲುಕ್?

Hindu neighbor gifts plot of land

Hindu neighbour gifts land to Muslim journalist

ರಾಮ್ ಮಾಧ್ವನಿಯ ವೆಬ್ ಸೀರೀಸ್ ಆರ್ಯ ಮೂಲಕ ಸುಶ್ಮಿತಾ ಸೇನ್ ಓಟಿಟಿಯಲ್ಲಿ ಕಾಣಿಸಿಕೊಂಡಿದ್ದ ಭುವನ ಸುಂದರಿ ವೆಬ್ ಸೀರೀಸ್ ನ ಮೊದಲ ಸೀಸನ್ ನಲ್ಲಿಯೇ ಇಂಟರ್ನ್ಯಾಷನಲ್ ಎಮ್ಮಿ ಆವಾರ್ಡ್ಸ್ ಸಮಾರಂಭದಲ್ಲಿ ಅತ್ಯುತ್ತಮ ನಾಟಕ ಸರಣಿಗೆ ನಾಮನಿರ್ದೇಶನ ಪಡೆದುಕೊಂಡ ಹಿರಿಮೆಯ ಗರಿಯನ್ನು ಬೆಸೆದುಕೊಂಡಿದ್ದಾರೆ. ಭುವನ ಸುಂದರಿ ಸುಶ್ಮಿತಾ ಸೇನ್ ‘ಬೀವಿ ನಂ.1’, ‘ಸಿರ್ಫ್ ತುಮ್’, ‘ಫಿಲ್‌ಹಾಲ್’, ‘ಮೈ ಹೂ ನಾ’, ‘ನೋ ಪ್ರಾಬ್ಲಂ’ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಇದೀಗ, ಹೊಸ ವೆಬ್ ಸರಣಿ ತಾಲಿಯಲ್ಲಿಯೂ ನಟಿಸುತ್ತಿದ್ದು, ಇದರಲ್ಲಿ ಸುಶ್ಮಿತಾ ಸೇನ್, ಮೊದಲ ಬಾರಿಗೆ ಟ್ರಾನ್ಸ್ಜೆಂಡರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

ಸಾಮಾನ್ಯವಾಗಿ ಟ್ರಾನ್ಸ್ಜೆಂಡರ್ ಪಾತ್ರ ತುಂಬಾ ಆಳವಾದ ಭಾವನಾತ್ಮಕ ಸಂಬಂಧವನ್ನು ಒಳಗೊಂಡಿದ್ದು, ಅಸಹಾಯಕತೆ, ದೌರ್ಜನ್ಯ, ಶೋಷಣೆಯ ನಡುವೆ ಸಮಾಜ ನಡೆಸಿಕೊಳ್ಳುವ ದೃಷ್ಟಿಕೋನದ ಜೊತೆಗೆ ನಂಟು ಹೊಂದಿದ್ದು, ಈ ಪಾತ್ರವನ್ನು ಒಪ್ಪಿಕೊಂಡು ಸಮರ್ಥವಾಗಿ ನಿಭಾಯಿಸುವ ಪ್ರಯತ್ನ ಮಾಡಿದ್ದು ವಿಶೇಷ.

ಮರಾಠಿ ಚಿತ್ರ ನಿರ್ಮಾಪಕ ರವಿ ಜಾಧವ್ ವೆಬ್ ಸರಣಿಯ ನಿರ್ದೇಶಕರಾಗಿದ್ದಾರೆ.ಈ ವೆಬ್ ಸರಣಿಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ವೂಟ್‌ನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದ್ದು , ಟ್ರಾನ್ಸ್ಜೆಂಡರ್ ಕಾರ್ಯಕರ್ತೆ ಗೌರಿ ಸಾವಂತ್ ಅವರ ಜೀವನಚರಿತ್ರೆ ಈ ಕಥೆ ವೆಬ್ ಸೀರೀಸ್ 6 ಕಂತುಗಳಲ್ಲಿ ತಯಾರಾಗಲಿದ್ದು, ಈ ವೆಬ್ ಸರಣಿಯ ಕೆಲಸಗಳು ಸದ್ಯ ಪ್ರಗತಿಯಲ್ಲಿದೆ.

ಈ ವೆಬ್ ಸರಣಿಯನ್ನು ಗ್ಲೋಬಲ್ ಸ್ಪೋರ್ಟ್ಸ್ ಎಂಟರ್‌ಟೈನ್‌ಮೆಂಟ್ ಮತ್ತು ಮೀಡಿಯಾ ಸೊಲ್ಯೂಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದ್ದು ಇದನ್ನು ಅರ್ಜುನ್ ಸಿಂಗ್ ಬರನ್ ಮತ್ತು ಕಾರ್ತಿಕ್ ಡಿ ನಿಶಾಂದರ್ ನಿರ್ಮಿಸಿದ್ದಾರೆ.

ಈ ವೆಬ್ ಸರಣಿಯು ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆ ಗೌರಿ ಸಾವಂತ್ ಅವರ ಜೀವನವನ್ನು ಆಧರಿಸಿದ್ದು, ವೆಬ್ ಸೀರಿಸ್ ನಲ್ಲಿ ಸುಶ್ಮಿತಾ ಗೌರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಗೌರಿ ಅವರ ವೈಯಕ್ತಿಕ ಜೀವನದ ಬಗ್ಗೆ ಅರಿಯಲು ಉತ್ತಮ ಅವಕಾಶ ಎಲ್ಲರಿಗೂ ದೊರೆಯಲಿದೆ.

ಆರ್ಯ ವೆಬ್ ಸರಣಿಯ ಮೂಲಕ ಮತ್ತೆ ನಟನಾ ಜಗತ್ತಿಗೆ ಮರಳಿದ ಸುಶ್ಮಿತಾ ಸೇನ್, ಇದರ ಮೂರನೇ ಭಾಗವೂ ನಿರ್ಮಾಣವಾಗಲಿದ್ದು, ಜನರಲ್ಲಿ ಕುತೂಹಲ ಮೂಡಿಸಿದೆ.

ಸದ್ಯ ಸುಶ್ಮಿತಾ ತಮ್ಮ ಹೊಸ ವೆಬ್ ಸೀರೀಸ್ ತಾಲಿ ವೆಬ್ ಸೀರೀಸ್ ನಲ್ಲಿ ಬಿಝಿಯಾಗಿದ್ದು, ಈ ವೆಬ್ ಸಿರೀಸ್‌ಗೆ ಸಂಬಂಧಿಸಿದ ಫಸ್ಟ್ ಲುಕ್ ಅನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಸುಶ್ಮಿತಾ ಸೇನ್ ಹಂಚಿಕೊಂಡಿದ್ದು, ಅವರು ಹಂಚಿಕೊಂಡ ಫೋಟೋದಲ್ಲಿ, ಕೆಂಪು-ಹಸಿರು ಸೀರೆ ಧರಿಸಿ ಚಪ್ಪಾಳೆ ತಟ್ಟುತ್ತಿರುವ ದೃಶ್ಯ ಹಣೆಯ ಮೇಲೆ ದೊಡ್ಡ ಬಿಂದಿ, ಕೆಂಪು ಲಿಪ್ ಸ್ಟಿಕ್ ಧರಿಸಿರುವ ಜೊತೆಗೆ ಮುಖದಲ್ಲಿ ಕೋಪದ ಛಾಯೆ ಎದ್ದು ಕಾಣುತ್ತಿದೆ.

‘ಸುಂದರ ವ್ಯಕ್ತಿಯ ಜೀವನವನ್ನು ಚಿತ್ರಿಸಲು ನನಗೆ ಅವಕಾಶ ಸಿಗುತ್ತಿದೆ ಮತ್ತು ಇದಕ್ಕಿಂತ ಹೆಚ್ಚಿನ ಅದೃಷ್ಟ ಮತ್ತೊಂದಿಲ್ಲ. ಇದು ಜೀವನ ಮತ್ತು ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಹಕ್ಕಿದೆ, ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ವಿಶ್ವ ಸುಂದರಿ ಸುಶ್ಮಿತಾ ಸೇನ್ ಇನ್ಸ್ತಾಗ್ರಾಮ್ ನಲ್ಲಿ ತನ್ನ ಫೋಟೋಗೆ ಅಡಿ ಬರಹ ಬರೆದು ಅಭಿಮಾನಿಗಳಿಗೆ ವೆಬ್ ಸೀರೀಸ್ ನ ಬಗ್ಗೆ ಕುತೂಹಲ ಮೂಡಿಸಿದ್ದಾರೆ.