Under Arm Black : ಕಂಕುಳ ಕಪ್ಪು ನಿವಾರಣೆ ಮಾಡಲು ಇಲ್ಲಿದೆ ಅತಿ ಸುಲಭದ ಮನೆಮದ್ದು!!!
ಹೊಸ ಸ್ಲೀವ್ ಲೆಸ್ ಅಥವಾ ಆಫ್-ಶೋಲ್ಡರ್ ಟಾಪ್ ಬಾರಿ ಖುಷಿಯಲ್ಲಿ ಖರೀದಿಸಿ, ಅದನ್ನು ಸಾರ್ವಜನಿಕವಾಗಿ ಧರಿಸಲು ಮುಜುಗರ ಪಡುವ ಜೊತೆಗೆ ಸಮಾರಂಭಗಳಿಗೆ ಧರಿಸುವ ಬಟ್ಟೆಯಿಂದ ಕಂಕುಳ ಕಪ್ಪು ಕಲೆ ಕಾಣುವ ಚಿಂತೆ ಹಲವರನ್ನು ಕಾಡುತ್ತಿರುತ್ತದೆ.
ಸಾಮಾನ್ಯವಾಗಿ ಕಂಕುಳಿನಲ್ಲಿ ಕಪ್ಪು ಕಲೆಗಳು ಸಾರ್ವಜನಿಕವಾಗಿ ಮುಜುಗರವನ್ನುಂಟು ಮಾಡುತ್ತದೆ. ಈ ಕಪ್ಪು ಕಲೆಗಳಿಂದ ಮುಕ್ತಿ ಪಡೆಯಲು ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು. ಇದು ಶೇವಿಂಗ್, ಅತಿಯಾದ ಬೆವರುವಿಕೆ, , ಕೆಲವು ಔಷಧಗಳು ಅಥವಾ ಡಿಯೋಡರೆಂಟ್‌ಗಳ ಬಳಕೆ ಹಾಗೂ ಇತ್ಯಾದಿಗಳಿಂದ ಉಂಟಾಗಬಹುದು.
ಇನ್ನು ಸ್ಲೀವ್ ಲೆಸ್ ಬಟ್ಟೆ ಇಷ್ಟಪಡುವವರು ಈ ಕಂಕುಳ ಭಾಗದ ಕಪ್ಪಿನಿಂದ ಕಿರಿಕಿರಿ ಅನುಭವಿಸುತ್ತಾರೆ. ಕೆಲವರ ಅಂಡರ್ ಆರ್ಮ್ಸ್ ತುಂಬಾ ಕಪ್ಪಾಗಿರುವುದರಿಂದ ಹೊಸ ಹೊಸ ವಿನ್ಯಾಸದ ಉಡುಪುಗಳನ್ನು ಧರಿಸಲು ಇರುಸು ಮುರುಸಿನ ಸ್ಥಿತಿ ಉಂಟಾಗುತ್ತದೆ.
ಮನೆಯಲ್ಲಿಯೇ ಸರಳ ಮನೆ ಮದ್ದು ತಯಾರಿಸಿ ಪರಿಹಾರ ಕಂಡುಕೊಳ್ಳಬಹುದು.
ಆಪಲ್ ಸೈಡರ್ ವಿನೆಗರ್ ನಲ್ಲಿ ಅಮೈನೋ ಮತ್ತು ಲ್ಯಾಕ್ಟಿಕ್ ಆಸಿಡ್ ಸಮೃದ್ಧವಾಗಿದ್ದು, ಇದು ಸತ್ತ ಚರ್ಮದ ಕೋಶಗಳನ್ನು ತೆರವುಗೊಳಿಸಲು ಮತ್ತು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸ್ವಲ್ಪ ಆಪಲ್ ಸೈಡರ್ ವಿನೆಗರ್ ನಲ್ಲಿ ಹತ್ತಿಯನ್ನು ಅದ್ದಿ, ಅದನ್ನು ಕಪ್ಪು ಕಲೆಗಳಿರುವ ಪ್ರದೇಶಕ್ಕೆ ಹಚ್ಚಬೇಕು. ಅದು ಪೂರ್ಣವಾಗಿ ಒಣಗಿದ ಮೇಲೆ ತೊಳೆಯಬೇಕು ಇದನ್ನು ನಿಯಮಿತವಾಗಿ ಬಳಕೆ ಮಾಡುವುದರಿಂದ ಪರಿಹಾರ ಕಂಡುಕೊಳ್ಳಬಹುದು.
ಒಂದು ಬೌಲ್ ತಗೆದುಕೊಂಡು ಅದಕ್ಕೆ 3 ದೊಡ್ಡ ಚಮಚ ಹಸಿಹಾಲು ಹಾಕಿ, ಅದಕ್ಕೆ 2 ಚಮಚ ಬೇಕಿಂಗ್ ಸೋಡಾ ಹಾಕಿದ ನಂತರ 2 ಚಮಚ ಅಲೋವೆರಾ ಜೆಲ್ ಹಾಗೂ ಒಂದು ಚಮಚ ತೆಂಗಿನೆಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಟ್ಟುಕೊಳ್ಳಬೇಕು. ಇನ್ನು ಕಂಕುಳ ಭಾಗವನ್ನು ಚೆನ್ನಾಗಿ ಕ್ಲೀನ್ ಮಾಡಿಕೊಂಡು ನೀರಿನ ಪಸೆ ಇರದಂತೆ ಒಂದು ಬಟ್ಟೆಯಿಂದ ಒರೆಸಿಕೊಳ್ಳಬೇಕು. ಈ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಕೈಯಿಂದ ತೆಗೆದುಕೊಂಡು ನಿಧಾನಕ್ಕೆ ಕಂಕುಳ ಭಾಗದಲ್ಲಿ ಮಸಾಜ್ ಮಾಡಿಕೊಂಡು 15 ನಿಮಿಷ ಈ ಪ್ಯಾಕ್ ಅನ್ನು ಹಾಗೇಯೇ ಬಿಟ್ಟು ಆಮೇಲೆ ತಣ್ಣಗಿನ ನೀರಿನಿಂದ ಚೆನ್ನಾಗಿ ತೊಳೆಯಿರಿ. ಇದನ್ನು ವಾರದಲ್ಲಿ ಎರಡು ಬಾರಿ ಮಾಡಿ ಬಳಸಬಹುದು.
ನೈಸರ್ಗಿಕ ಸನ್ಸ್ಕ್ರೀನ್ ಎಂದು ಕರೆಯಲ್ಪಡುವ ಅಲೋವೆರಾದ ಬ್ಯಾಕ್ಟೀರಿಯಾ ವಿರೋಧಿ ಸ್ವಭಾವವು ಕಪ್ಪು ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸ್ವಲ್ಪ ಅಲೋವೆರಾ ಜೆಲ್ ತೆಗೆದುಕೊಂಡು ಅದನ್ನು ಕಪ್ಪು ಕಲೆಗಳಿರುವ ಜಾಗಕ್ಕೆ ಹಚ್ಚಿ 10 ರಿಂದ 15 ನಿಮಿಷಗಳ ಕಾಲ ಬಿಟ್ಟು ಒಣಗಲು ಬಿಡಿ ನಂತರ ನೀರಿನಿಂದ ತೊಳೆಯಬೇಕು.
ಒಂದು ಬೌಲ್ ಗೆ ಅರ್ಧ ಚಮಚದಷ್ಟು ಬಿಳಿ ಬಣ್ಣದ ಟೂತ್ ಪೇಸ್ಟ್, ಅರ್ಧ ಚಮಚದ್ಟು ಬೇಕಿಂಗ್ ಸೋಡಾ, ಒಂದು ಚಮಚದಷ್ಟು ಅಲೋವೆರಾ ಜೆಲ್, ಒಂದು ಚಮಚದಷ್ಟು ತೆಂಗಿನೆಣ್ಣೆ, ಅರ್ಧ ಚಮಚದಷ್ಟು ಲಿಂಬೆ ಹಣ್ಣಿನ ರಸವನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಕಂಕುಳ ಭಾಗಕ್ಕೆ ಹಚ್ಚಬೇಕು. ಹತ್ತು ನಿಮಿಷ ಹಾಗೇಯೇ ಬಿಟ್ಟು ನಂತರ ಶುದ್ಧವಾದ ನೀರಿನಿಂದ ತೊಳೆದುಕೊಂಡು ಬಟ್ಟೆಯಿಂದ ಒರೆಸಿ ಅಲೋವೆರಾ ಜೆಲ್ ಹಚ್ಚಿಕೊಳ್ಳಬೇಕು.
1 ಚಮಚ ಅಡಿಗೆ ಸೋಡಾ ಮತ್ತು 1 ಚಮಚ ನಿಂಬೆ ರಸ ತೆಗೆದುಕೊಂಡು ಮಿಶ್ರಣ ಮಾಡಿಕೊಂಡು ನಂತರ ಅದನ್ನು ಕಪ್ಪು ಕಲೆಗಳಿರುವ ಕಂಕುಳು ಭಾಗಕ್ಕೆ ಹಚ್ಚಿ 5 ನಿಮಿಷಗಳ ಕಾಲ ಉಜ್ಜಿ ನಂತರ ಅದನ್ನು 15 ನಿಮಿಷಗಳ ಕಾಲ ಒಣಗಲು ಬಿಟ್ಟು ಉಗುರು ಬೆಚ್ಚಗಿನ ನೀರನ್ನು ಬಳಸಿ ತೊಳೆಯಬೇಕು. ಅಡಿಗೆ ಸೋಡಾ ಒಂದು ಎಕ್ಸ್‌ಫೋಲಿಯೇಟರ್ ಆಗಿದ್ದು ಅದು ರಂಧ್ರಗಳನ್ನು ಬಿಚ್ಚಿಡುತ್ತದೆ ಮತ್ತು ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. ಮತ್ತೊಂದೆಡೆ, ನಿಂಬೆ ಶಕ್ತಿಯುತ ನಂಜುನಿರೋಧಕ ಮತ್ತು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿರುವುದರಿಂದ ಈ ಎರಡರ ಮಿಶ್ರಣ ಉತ್ತಮ ಪ್ರಯೋಜನ ನೀಡುತ್ತದೆ.
ಒಂದು ಬಟ್ಟಲಿನಲ್ಲಿ ತಲಾ 2 ಚಮಚ ಆಲಿವ್ ಎಣ್ಣೆ ಮತ್ತು ಸಕ್ಕರೆ ಸೇರಿಸಿ ಮತ್ತು ಮಿಶ್ರಣ ಮಾಡಿಕೊಂಡು ಕಪ್ಪು ಕಲೆ ಇರುವ ಜಾಗಕ್ಕೆ ಹಚ್ಚಿ ಒಂದು ನಿಮಿಷ ಅಥವಾ ಎರಡು ನಿಮಿಷಗಳ ಕಾಲ ಸ್ಕ್ರಬ್ ಮಾಡಿ, ನಂತರ ಇನ್ನೊಂದು 5 -10 ನಿಮಿಷಗಳ ಕಾಲ ಬಿಟ್ಟು ನೀರಿನಿಂದ ತೊಳೆಯಿರಿ. ಮೇಲೆ ತಿಳಿಸಿದ ಸರಳ ವಿಧಾನಗಳನ್ನು ಅನುಸರಿಸಿದರೆ ಕಪ್ಪು ಕಲೆಗಳಿಂದ ಪರಿಹಾರ ಕಂಡುಕೊಳ್ಳಬಹುದು.