ಪುಟ್ಬಾಲ್ ಸ್ಟೇಡಿಯಂನಲ್ಲಿ ಅಭಿಮಾನಿಗಳ ದಾಂಧಲೆ | 129 ಮಂದಿ ಸಾವು
ಇಂಡೋನೇಷ್ಯಾ; ಫುಟ್ಬಾಲ್ ಪಂದ್ಯದ ವೇಳೆ ಪೂರ್ವ ಜಾವಾ ಪ್ರಾಂತ್ಯದ ಫುಟ್ಬಾಲ್ ಸ್ಟೇಡಿಯಂನಲ್ಲಿ ಅಭಿಮಾನಿಗಳು ದಾಂಧಲೆ ನಡೆಸಿದ್ದು, ಕಾಲ್ತುಳಿತದಲ್ಲಿ 129 ಮಂದಿ ಮೃತಪಟ್ಟು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಪರ್ಸೆಬಯಾ ಸುರಬಯಾ ವಿರುದ್ಧ 3-2 ಗೋಲುಗಳಿಂದ ಸೋತ ನಂತರ ಅರೆಮಾ ಎಫ್‌ಸಿ ಬೆಂಬಲಿಗರು ಪೂರ್ವ ನಗರದ ಮಲಾಂಗ್‌ನ ಕಂಜುರುಹಾನ್ ಕ್ರೀಡಾಂಗಣದಲ್ಲಿ ಪಿಚ್‌ಗೆ ನುಗ್ಗಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಶಾಂತಿಗಾಗಿ ಅಭಿಮಾನಿಗಳನ್ನು ಮನವೊಲಿಸಲು ಅವರು ಪ್ರಯತ್ನಿಸಿದರು.ಈ ವೇಳೆ ಇಬ್ಬರು ಅಧಿಕಾರಿಗಳ ಕೊಲೆಯಾಗಿದೆ. ನಂತರ “ಗಲಭೆಗಳನ್ನು” ನಿಯಂತ್ರಿಸಲು ಅಶ್ರುವಾಯು ಹಾರಿಸಿದರು ಎಂದು ಪೊಲೀಸರು ಹೇಳಿದರು.
ನಂತರ ನೂರಾರು ಅಭಿಮಾನಿಗಳು ಅಶ್ರುವಾಯು ತಪ್ಪಿಸುವ ಪ್ರಯತ್ನದಲ್ಲಿ ನಿರ್ಗಮನ ಗೇಟ್ ಬಳಿ ಓಡಿದರು. ಗೊಂದಲದಲ್ಲಿ ಕೆಲವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಇನ್ನು ಕೆಲವರು ಕಾಲ್ತುಳಿತಕ್ಕೆ ಒಳಗಾಗಿದ್ದಾರೆ.
ಅರೇಮಾ ಎಫ್‍ಸಿ ಮತ್ತು ಪೆರ್ಸೆಬಯ ಸುರಬಯ ಕ್ಲಬ್‍ಗಳ ನಡುವಿನ ಪಂದ್ಯ ರಾತ್ರಿ ಮುಕ್ತಾಯದ ಬಳಿಕ ಸೋತ ತಂಡದ ಬೆಂಬಲಿಗರು ಪಿಚ್ ಮಾಲೆ ದಾಳಿ ನಡೆಸಿದ್ದಾರೆ.
ಈ ವೇಳೆ ಪೊಲೀಸರು ಅಶ್ರುವಾಯು ಸಿಡಿಸಿದರು. ಇದು ಕಾಲ್ತುಳಿತ ಮತ್ತು ಉಸಿರುಗಟ್ಟುವ ವಾತಾವರಣಕ್ಕೆ ಕಾರಣವಾಯಿತು ಎಂದು ಪೂರ್ವ ಜಾವಾ ಪೊಲೀಸ್ ಮುಖ್ಯಸ್ಥ ನಿಕೊ ಅಫಿಂಟಾ ತಿಳಿಸಿದರು.
ಮಲಂಗ್ ಸ್ಟೇಡಿಯಂನಲ್ಲಿ ಜನ ಪಿಚ್‍ನತ್ತ ನುಗ್ಗುತ್ತಿರುವ ಮತ್ತು ಮೃತದೇಹಗಳನ್ನು ಒಯ್ಯುವ ವೀಡಿಯೊ ದೃಶ್ಯಾವಳಿಗಳು ಸ್ಥಳೀಯ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿವೆ.