World Heart day | ನಾನು ನಿಮಗಾಗಿ ಇಷ್ಟು ದಿನ ಬಡಿದಾಡಿದ್ದೇನೆ, ನನಗಾಗಿ ನೀವು ಇಂತಿಷ್ಟು ನಡೆದಾಡಿ !!

ಅವತ್ತು ಅಪ್ಪ ಅಮ್ಮನ ಸಮ್ಮಿಲನದ ನಂತರ ಅಂಡ ವೀರ್ಯಾಣುಗಳ ಸಮ್ಮೇಳನ. ಅದಾಗಿ ಅವೆರಡೂ ತಮ್ಮ ತಮ್ಮ ಪ್ರೀತಿಯ ಹೃದಯಗಳನ್ನು ಪರಸ್ಪರರಿಗಾಗಿ ಮಿಡಿದುಕೊಂಡ ಕೇವಲ 5 ರಿಂದ 6 ವಾರಕ್ಕೆ ಹೊಸ ಹೃದಯ ಹಠಾತ್ ಆಗಿ ಬಡಿದುಕೊಳ್ಳಲು ಶುರುಮಾಡುತ್ತದೆ. ಅದೇ ಪ್ರಾರಂಭ. ಆತ ಕೊನೆಯ ಕ್ಷಣದ ವರೆಗೂ ನಮ್ಮನ್ನು ಈ ಬದುಕಿನಲ್ಲಿ ಸುಖಿಸಲು, ಬದುಕಿಸಲು ನಿರಂತರವಾಗಿ ಮಿಡಿಯುತ್ತಲೇ ಇರುತ್ತಾನೆ. ಋತುಮಾನಗಳು ಬದಲಾಗಬಹುದು. ಸಂವತ್ಸರಗಳು ಮುಂದಕ್ಕೆ ಹೋಗಬಹುದು. ಆತ ನಿಯತ್ತು ಬದಲಿಸಲ್ಲ.

 

ಸ್ನೇಹಿತರು ಬದಲಾಗ್ತಾರೆ. ಗೆಳತಿಯರು ಪದೇ ಪದೇ ಕೈ ಕೊಡ್ತಾರೆ. ಹಿರಿಯರು ಕಾಲದ ಸುಳಿಗೆ ಸಿಕ್ಕು ಕಣ್ಮರೆ ಆಗ್ತಾರೆ. ಆದರೆ ಈತನೊಬ್ಬ ಎಂತಹ ಕಷ್ಟದಲ್ಲೂ ಸಂಕಷ್ಟದಲ್ಲೂ ನಮ್ಮ ಜತೆಗೆ ನಿಲ್ಲುತ್ತಾನೆ. ಕಟ್ಟ ಕಡೆ ಕಾಲದವರೆಗೆ ನಮ್ಮ ಜತೆ ನಿಲ್ಲುವವನೊಬ್ಬನೆ ಈ ಕಟ್ಟಪ್ಪ! ಇವತ್ತು ಆತನನ್ನು ನೆನಪಿಸಿಕೊಳ್ಳುವ ಸಂದರ್ಭ. ಗಮನಿಸಿಕೊಳ್ಳುವ ಸಂದರ್ಭ. ನಮಗಾಗಿ ಮಿಡಿಯುವ ಆತನಿಗಾಗಿ ಒಂಚೂರು ನಾವು ಮಿಡಿಯುವ ಸಂದರ್ಭ! ‘ ಹ್ಯಾಪಿ ಹಾರ್ಟ್ ಡೇ ‘!!

ಹೃದಯವು ನಮ್ಮ ದೇಹದ ಅತ್ಯಂತ ಸೂಕ್ಷ್ಮವಾದ ಭಾಗ. ಇದು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದರೆ ವ್ಯಕ್ತಿಗೆ ಆ ಕ್ಷಣಕ್ಕೆ ಹೆಸರಿನ ಅಸ್ತಿತ್ವ ಇರೋದಿಲ್ಲ. ಎಂತಹಾ ದೊಡ್ಡ ವ್ಯಕ್ತಿ ಕೂಡಾ ಆ ಕ್ಷಣದಿಂದ ತನ್ನ ಹೆಸರು ಮತ್ತು ವಿಳಾಸ ಕಳೆದುಕೊಂಡು ಡೆಡ್ ಬಾಡಿ ಅಂತ ಕರೆಸಿಕೊಳ್ಳುತ್ತಾನೆ. ಆದಕಾರಣ ಹೃದಯದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಹೆಚ್ಚಾಗಿ ಹೃದಯಾಘಾತದ ಸಮಸ್ಯೆ 45 ವರ್ಷದ ನಂತರ ಕಂಡು ಬರುತ್ತದೆ. ಆದರೆ ಅದಕ್ಕೆ ಸಂಬಂಧಪಟ್ಟ ಲಕ್ಷಣಗಳು 30 ವರ್ಷದ ನಂತರ ಕಾಣಿಸಿಕೊಳ್ಳುತ್ತದೆ. ಅದು ಯಾವುದು ಎಂಬುದನ್ನು ತಿಳಿದು ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿ.

*ಎದೆ ನೋವಿನಲ್ಲಿ ಇದೆ ಮಾಹಿತಿ. ಕೆಲವರಿಗೆ ಎದೆ ನೋವು ಕಾಡಲು ಶುರುವಾಗುತ್ತದೆ. ಆದರೆ ಕೆಲವರು ಅದನ್ನು ಆಸಿಡಿಟಿ ಸಮಸ್ಯೆಯಿಂದ ಬರುತ್ತದೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಎದೆನೋವು ಕಾಣಿಸಿಕೊಂಡಾಗ ನೀವು ತುಂಬಾ ಬೆವರಲು ಶುರು ಮಾಡಿದರೆ ನಿಮ್ಮ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಿ.

*30ನೇ ವಯಸ್ಸಿನ ನಂತರ ಮೆಟ್ಟಿಲು ಹತ್ತುವಾಗ ಅಥವಾ ಭಾರವಾದ ಕೆಲಸಗಳನ್ನು ಮಾಡುವಾಗ ತುಂಬಾ ದಣಿವಾದರೆ, ಉಸಿರಾಡಲು ಕಷ್ಟಕರವಾದರೆ ಇದು ಹೃದಯದ ಸಮಸ್ಯೆಯ ಸೂಚನೆ.

*30-35ನೇ ವಯಸ್ಸಿಗೆ ನಿದ್ರೆ ಮಾಡುವಾಗ ಗೊರಕೆ ಸಮಸ್ಯೆ ಕಾಡುತ್ತಿದ್ದರೆ ಇದು ಉಸಿರಾಟದ ತೊಂದರೆ, ಇದರರ್ಥ ನಿಮ್ಮ ಹೃದಯ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಸೂಚನೆ ಇರಬಹುದು. ಆದರೆ ಗೊರಕೆ ಹೃದಯದ ಸಮಸ್ಯೆಯೇ ಎನ್ನಲು ಬರೋದಿಲ್ಲ!

*ಇನ್ನೂ ಕೆಲವರಿಗೆ ದವಡೆ ನೋವು, ದವಡೆ ಸೆಳೆತ ಕಾಡುತ್ತದೆ. ಅದನ್ನು ಹಲ್ಲಿನ ಸಮಸ್ಯೆ ಎಂದು ನಿರ್ಲಕ್ಷಿಸಲು ಆಗೋದಿಲ್ಲ. ಆದರೆ ಇದು ಕೂಡ ಹೃದಯದ ತೊಂದರೆಗಳಲ್ಲಿ ಒಂದಾಗಿದೆ.

*ಕೊಲೆಸ್ಟ್ರಾಲ್ ಕೂಡ ಹೃದಯದ ಸಮಸ್ಯೆಗೆ ಒಂದು ಕಾರಣವಾಗಿದೆ. ರಕ್ತದಲ್ಲಿ ಕೊಲೆಸ್ಟ್ರಾಲ್ ನಿಗದಿಗಿಂತ ಜಾಸ್ತಿ ಇದ್ದರೆ ಅದು ಹೃದಯ ಸಂಬಂಧಿ  ರೋಗಕ್ಕೆ ದಾರಿ ಮಾಡಿಕೊಡಬಹುದು. ಕೊಲೆಸ್ಟ್ರಾಲ್ ತುಂಬಾ ಹೆಚ್ಚಾಗಿದ್ದರೆ ರಕ್ತ ಸಂಚಾರಕ್ಕೆ ತಡೆಯಾಗಿ ದೇಹದ ಕೆಲವು ಭಾಗಗಳಲ್ಲಿ ನಿರಂತರವಾಗಿ ಜುಮ್ಮೆನಿಸುವಂತಹ ಸಮಸ್ಯೆ ಕಾಡುತ್ತದೆ. ಇದು ಕೂಡ ಹೃದಯದ ಸಮಸ್ಯೆಯ ಪೂರ್ವಭಾವಿ ಭಾಗ.

ಹೃದಯವೆನೋ ಪುಟ್ಟದ್ದೇ, ಅದರೆ ಅದು ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಕಾಡುವ ಸಮಸ್ಯೆಗಳು ಒಂದೆರಡಲ್ಲ. ಇದನ್ನು ಆರೋಗ್ಯಪೂರ್ಣವಾಗಿ ನೋಡಿಕೊಳ್ಳುವುದು ಬಹಳ ಮುಖ್ಯ.

ನಾನು ನಿನಗಾಗಿ ನಡೆಯುತ್ತೇನೆ. ನೀನು ನನಗಾಗಿ ನಡಿ ಅನ್ನುತ್ತಂತೆ ಹೃದಯ. ದಿನಕ್ಕೆ 30 ರಿಂದ 60 ನಿಮಿಷ ವ್ಯಾಯಾಮಕ್ಕಾಗಿ ಮೀಸಲಿಡವೇಕು. ಅದರಲ್ಲೂ ವಾಕಿಂಗ್ ಅತ್ಯುತ್ತಮ. ಇದು ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಹೆಚ್ಚಿನ ವ್ಯಾಯಾಮ ಮಾಡಬೇಕಿಲ್ಲ. ಸ್ವಲ್ಪ ವಾಕಿಂಗ್, ಕೈಕಾಲು ಮಡಿಚಿ ಬಿಡಿಸುವ ಉದ್ದಕ್ಕೆ ಚಾಚುವ ಕೆಲವು ಎಕ್ಸಸೈಸ್ ಮಾಡಿದರೆ ಸಾಕು.

ಸಾಕಷ್ಟು ಪ್ರಮಾಣದ ಹಣ್ಣು,

ಎಣ್ಣೆ ತಿಂಡಿ ತಿನ್ನಲು ವಾರದಲ್ಲಿ ಒಂದು ದಿನ ಮೀಸಲಿಡಿ. ಊಟದಲ್ಲಿ ತರಕಾರಿಗಳಿರಲಿ. ಎಣ್ಣೆ ಪದಾರ್ಥಗಳನ್ನು ದೂರವಿಡಿ. ಸೊಪ್ಪು ಧಾನ್ಯ ಮದ್ಯಪಾನದಿಂದ ದೂರವಿರಿ. ಸೇವಿಸಿ.

ವಯಸ್ಸಾದಂತೆ ತೂಕ ಹೆಚ್ಚುವುದು ಸಾಮಾನ್ಯ. ಹೃದಯದ ಆರೋಗ್ಯ ಕಾಪಾಡಲು ತೂಕ ಹೆಚ್ಚದಂತೆ ನೋಡಿಕೊಳ್ಳಿ. ನಿದ್ದೆ ಕಡಿಮೆಯಾದಷ್ಟು ಆತಂಕ ಹೆಚ್ಚು. ಹಾಗಾಗಿ ಸಾಕಷ್ಟು ನಿದ್ದೆ ಮಾಡಿ.

Leave A Reply

Your email address will not be published.