Jio ಗ್ರಾಹಕರೇ ಗಮನಿಸಿ | ಇನ್ನು ಮುಂದೆ 2 ತಿಂಗಳು ರಿಚಾರ್ಜ್ ಮಾಡುವ ಚಿಂತೆ ಬಿಡಿ | ಈ ಪ್ಲ್ಯಾನ್ ತಿಳಿದುಕೊಳ್ಳಿ |

ಕೆಲ ಒಂದೆರಡು ವರ್ಷಗಳಿಂದ ಲಾಕ್ ಡೌನ್ ಬಳಿಕ ಇಂಟರ್ನೆಟ್ ಬಳಸುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ, ವರ್ಕ್ ಫ್ರಮ್ ಹೋಂ, ಮಕ್ಕಳಿಗೆ ಮನೆಯಲ್ಲೇ ಆನ್ಲೈನ್ ಕ್ಲಾಸ್ ಗಳು ಆರಂಭ ವಾಗಿದೆ ದಿನಕ್ಕೆ ಒಬ್ಬ ವ್ಯಕ್ತಿ 2.5 GB ಗಿಂತಲೂ ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಇದರ ಜೊತೆಗೆ ಮನರಂಜನೆಗೆ ಬಳಸುವ ಟಿವಿ, ಮೊಬೈಲ್ ರೀಚಾರ್ಜ್ ಮಾಡಲು ಮರೆತರೆ ತೊಂದರೆಯಾಗುವುದು ಸಹಜ.

ಪ್ರತಿ ತಿಂಗಳು ಮೊಬೈಲ್‌ ಪ್ಲಾನ್‌, ಇಂಟರ್ನೆಟ್‌ಗೆ ರೀಚಾರ್ಜ್ ಮಾಡುವುದು ಅಕಸ್ಮಾತ್ ರೀಚಾರ್ಜ್ ಮಾಡಲು ಮರೆತರೆ, ಬೇರೆಲ್ಲೂ ಅಂಗಡಿಗೆ ಹೋಗಿ ರೀಚಾರ್ಜ್ ಮಾಡಬೇಕಾದ ಅನಿವಾರ್ಯತೆ ಬರಬಹುದು. ಒಂದು ವೇಳೆ ವ್ಯಾಲಿಡಿಟಿ ಮುಕ್ತಾಯಕ್ಕೂ ಮುನ್ನ ಆಫೀಸ್ ಕೆಲಸದಲ್ಲಿ ತೊಡಗಿದವರಾದರೆ,ರೀಚಾರ್ಜ್‌ ಮಾಡಲು ಮರೆತರೆ ತೊಂದರೆಯಾಗುವುದು ಖಚಿತ.

ಹಾಗಾಗಿ ಹೆಚ್ಚಿನವರು ಸಮಸ್ಯೆಯಿಂದ ಪಾರಾಗಲು, 3ತಿಂಗಳ ,ಇಲ್ಲವೇ ವರ್ಷದ ರೀಚಾರ್ಜ್ ಪ್ಯಾಕೇಜ್ ಬಳಸುವುದು ಸಾಮಾನ್ಯ.
ರೀಚಾರ್ಜ್ ಮಾಡಲು ಮರೆತಾಗ ಯಾರಿಗಾದರೂ ತುರ್ತಾಗಿ ಕರೆ ಅಥವಾ ಸಂದೇಶ ರವಾನಿಸಲು ಕೂಡ ಸಾಧ್ಯವಾಗುವುದಿಲ್ಲ. ಹಾಗಾಗಿ, ಕಿರಿಕಿರಿ ಇಲ್ಲದೇ ಕರೆ ಮತ್ತು ಇಂಟರ್ನೆಟ್ ಸೇವೆಯನ್ನು ಜಿಯೋ 56 ದಿನಗಳವರೆಗೆ ನೀಡಲಿದೆ.


56 ದಿನಗಳ ಪೂರ್ಣ ವ್ಯಾಲಿಡಿಟಿ ಪಡೆಯುವ ಪ್ಲಾನ್ ಒಂದನ್ನು ಜಿಯೋ ಬಿಡುಗಡೆ ಮಾಡಿದ್ದು, ಜಿಯೋ ಗ್ರಾಹಕರು ಎರಡು ತಿಂಗಳು ನಿಶ್ಚಿಂತೆಯಿಂದ ಇರಬಹುದು.
ಜಿಯೋದ ಪ್ರಿಪೇಯ್ಡ್‌ ಪ್ಲಾನ್‌ ಇದಾಗಿದ್ದು, ಈ ಜಿಯೋ ಪ್ಲಾನ್‌ ನ ಬೆಲೆ 533 ರೂಪಾಯಿಯಾಗಿದೆ. ಈ ಯೋಜನೆಯು 56 ದಿನಗಳ ವ್ಯಾಲಿಡಿಟಿಯ ಜೊತೆಗೆ ಸಾಕಷ್ಟು ಸೌಲಭ್ಯಗಳನ್ನು ಹೊಂದಿದೆ.
ಪ್ರತಿದಿನ 100 ಎಸ್‌ಎಂಎಸ್‌ ಹಾಗೂ 112 GB ಡೇಟಾವನ್ನು ನೀಡಲಾಗುವುದರ ಜೊತೆಗೆ 2 ತಿಂಗಳವರೆಗೆ ಅನಿಯಮಿತ ವಾಯ್ಸ್‌ ಕಾಲ್‌ ಸೌಲಭ್ಯ ಗ್ರಾಹಕರಿಗೆ ದೊರೆಯುತ್ತದೆ.

ಇದಲ್ಲದೆ, ದಿನಕ್ಕೆ 2GB ಡೇಟಾ ಜೊತೆಗೆ ಮನರಂಜನೆಗಾಗಿ ಜಿಯೋ ಟಿವಿ ಅಪ್ಲಿಕೇಶನ್, ಜಿಯೋ ಸಿನಿಮಾ ಜೊತೆಗೆ ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಚಂದಾದಾರಿಕೆ ಸೇರಿದಂತೆ ಅನೇಕ ಇತರ ಪ್ರಯೋಜನಗಳನ್ನು ಗ್ರಾಹಕರು ಪಡೆಯಬಹುದಾಗಿದೆ.


ಜಿಯೋ ಇತ್ತೀಚೆಗಷ್ಟೇ ಡೇಟಾ ಪ್ಲಾನ್ ಬದಲಿಸಿ ಗ್ರಾಹಕರ ಸೆಳೆಯುವ ಪ್ರಯತ್ನ ನಡೆಸಿತ್ತು. ನವರಾತ್ರಿಗೆ ಆಫರ್ ರೀತಿಯಲ್ಲಿ ರೀಚಾರ್ಜ್ ಸೇವೆಯಲ್ಲಿ ಬದಲಾವಣೆ ತಂದು ಗ್ರಾಹಕರಿಗೆ ನೆರವಾಗುವ ಯೋಜನೆ ಎಷ್ಟರ ಮಟ್ಟಿಗೆ ಜನರಿಗೆ ಪ್ರಯೋಜನವಾಗಲಿದೆ ಎಂದು ಕಾದು ನೋಡಬೇಕು.

Leave A Reply

Your email address will not be published.