ಸೈಕಲ್ ಸೀಟಿನಲ್ಲಿ ಅಮ್ಮ ಕುಳಿತರೆ, ಹಿಂಬದಿ ಭದ್ರ ಕುರ್ಚಿ ಸೀಟ್ ನಲ್ಲಿ ಪುಟ್ಟ ಕಂದಮ್ಮ | ಕಷ್ಟದ ಹಾದಿಯಲ್ಲೂ ಸುಂದರ ಬದುಕು ಕಾಣುತ್ತಿರುವ ಭಾವನಾತ್ಮಕ ವೀಡಿಯೋ ವೈರಲ್

ಅಮ್ಮ’ ಎಂಬ ಪದವನ್ನು ವರ್ಣಿಸಲು ಅಸಾಧ್ಯ. ಅದೆಷ್ಟು ದೊಡ್ಡ ಪದ ಉಪಯೋಗಿಸಿದರೂ ಕಡಿಮೇನೆ. ತ್ಯಾಗಮಯಿ, ಕರುಣಾಮಯಿ ಹೀಗೆ ನೂರೆಂಟು ಹೆಸರೇ ಇದೆ ಆಕೆಗೆ. ಒಂದೊತ್ತು ಕಣ್ಣ ಮುಂದೆ ಅಮ್ಮ ಕಾಣಿಸದಿದ್ದರೂ, ಹುಡುಕಾಡುವ ಚಂಚಲ ಮನಸ್ಸು ಮಕ್ಕಳಿದ್ದಾಗಿರುತ್ತದೆ. ಅದು ಚಿಕ್ಕ ಮಕ್ಕಳು ಮಾತ್ರವಲ್ಲ. ಅದೆಷ್ಟೇ ದೊಡ್ಡವರಾದರೂ ಸರಿ ಎಲ್ಲಿಗಾದರೂ ಹೋಗಿ ಬಂದಾಗ ಮನೆಯಲ್ಲಿ ಅಮ್ಮ ಇಲ್ಲಂದ್ರೆ ಒಮ್ಮೆ ಆದ್ರೂ “ಅಮ್ಮ ಎಲ್ಲಿದ್ದೀ” ಎಂದು ಕೂಗದೆ ಇರಲು ಅಸಾಧ್ಯ.

ಅದೇ ರೀತಿ, ತಾಯಿಯೂ ಅಷ್ಟೇ, ತನ್ನ ಮಕ್ಕಳು ಕಷ್ಟ ಎಂದರೆ ಏನೆಂಬುದನ್ನೇ ತಿಳಿಯ ಬಾರದು ಎಂದು ಬಯಸುತ್ತಾಳೆ. ತನಗೆ ಕಷ್ಟವಾದರೂ ಮಕ್ಕಳನ್ನು ಮಾತ್ರ ಸುಖದ ಸಂಪತ್ತಿನಲ್ಲಿ ಬೆಳೆಸುತ್ತಾಳೆ. ಇದಕ್ಕೆ ಸಾಕ್ಷಾತ್ ಉದಾಹರಣೆಯಾಗಿದೆ ವೈರಲ್ ಆಗಿರುವ ತಾಯಿ ವಾತ್ಸಲ್ಯ. ಸದ್ಯ ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ತಾಯಿ ಮೇಲೆ ಪ್ರೀತಿ ಇರುವವರ ಹೃದಯ ಒಮ್ಮೆಗೆ ಚುರ್ ಅನ್ನದೆ ಇರದು. ನೀವು ನೋಡಲೇ ಬೇಕಾದ ವೀಡಿಯೋದಲ್ಲಿ ಏನಿದೆ ಎಂಬುದನ್ನು ಇಲ್ಲಿ ನೋಡಿ..

ವೈರಲ್ ಆಗಿರುವ ವೀಡಿಯೋದಲ್ಲಿ, ಮಹಿಳೆಯೋರ್ವರು ಸೈಕಲ್​ ಸವಾರಿ ಮಾಡುತ್ತಿದ್ದಾರೆ. ಅದೇ ಸೈಕಲ್ ನ ಹಿಂದಿನ ಸೀಟಿನಲ್ಲಿ ತಾತ್ಕಾಲಿಕವಾಗಿ ಪ್ಲಾಸ್ಟಿಕ್​ ಕುರ್ಚಿ ಅಳವಡಿಸಿದ್ದಾಳೆ. ಪುಟ್ಟ ಮಗು ಆ ಕುರ್ಚಿಯಲ್ಲಿ ಭದ್ರವಾಗಿ ಕುಳಿತು ಅಮ್ಮನೊಂದಿಗೆ ಪ್ರಯಾಣಿಸುತ್ತಿದೆ. ತನ್ನ ಕಷ್ಟದ ಹಾದಿಯಲ್ಲೂ ಮಗುವಿನ ಮೊಗದಲ್ಲಿ ನಗು ತರಿಸುವ ಅಮ್ಮಾ ಮಗುವಿನ ಪ್ರಯಾಣ ಎಂತಹ ಕಲ್ಲು ಮನಸ್ಸನ್ನು ಕರಗಿಸುವಂತಿದೆ.

ಕೈಗಾರಿಕೋದ್ಯಮಿ ಹರ್ಷ ಗೋಯೆಂಕಾ ಎನ್ನುವವರು ಈ ವೀಡಿಯೋವನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ 9 ಸೆಕೆಂಡುಗಳ ವಿಡಿಯೋ, 1.4 ಮಿಲಿಯನ್​ ಜನರ ಮನ ಗೆದ್ದಿದೆ. 5,000 ಕ್ಕಿಂತಲೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಮಹಿಳೆಯ ಸೃಜನಶೀಲತೆಗೆ ನೆಟ್ಟಿಗರು ಪ್ರಭಾವಿತಗೊಂಡಿದ್ದಾರೆ.

ಎಲ್ಲ ಆವಿಷ್ಕಾರಗಳು ಮಗುವಿನಿಂದಲೇ ಆರಂಭವಾಗುತ್ತವೆ. ತಂದೆತಾಯಿ ಮಕ್ಕಳ ಖುಷಿಗಾಗಿ ಏನೆಲ್ಲ ಪ್ರಯತ್ನಿಸುತ್ತಾರಲ್ಲವೆ? ಎಂದು ನೆಟ್ಟಿಗರೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ. ಎಂಥ ಆರಾಮದಾಯಕ ಪ್ರಯಾಣ, ನಾವೂ ಸೈಕಲ್​ ಓಡಿಸಬಹುದಲ್ಲ. ಹೀಗೆಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ​ಮಳೆ ಬಂದರೆ, ಬಿಸಿಲು ಹೆಚ್ಚಾದರೆ ಮಗುವಿನ ಆರೋಗ್ಯ ಏನಾಗಬೇಕು ಎಂದು ಮಗದೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ, ಈ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದೂ, ಕಷ್ಟ ಎಂದು ನೊಂದು ಕುಳಿತುಕೊಂಡರೆ ಏನೂ ಅಸಾಧ್ಯ. ಛಲವಿದ್ದರೆ ಮಾತ್ರ ಎಲ್ಲನೂ ಸಾಧ್ಯ ಅನ್ನೋದನ್ನ ಸಾಧಿಸಿ ತೋರಿಸುತ್ತಿದೆ. ನೀವೂ ಈ ವೀಡಿಯೋ ನೋಡಿ, ಕಣ್ತುಂಬಿಕೊಳ್ಳಿ…

https://twitter.com/hvgoenka/status/1574411858471452673?s=20&t=YM1_EZ2IXXdHLGgdq31SwQ

Leave A Reply

Your email address will not be published.