ಸೆಕೆಂಡ್ ಹ್ಯಾಂಡ್ ಮೊಬೈಲ್ ಬಳಕೆದಾರರೇ ಗಮನಿಸಿ | ಜನವರಿ 1ರಿಂದ ಈ ನಿಯಮ ಕಡ್ಡಾಯ!
ಇಂದು ಹೆಚ್ಚಿನ ಜನರು ಸೆಕೆಂಡ್ ಹ್ಯಾಂಡ್ ವಸ್ತುಗಳಿಗೆ ಹೆಚ್ಚು ಮಾರುಹೋಗುತ್ತಾರೆ. ಕಡಿಮೆ ಬೆಲೆಗೆ ಲಭ್ಯವಾಗುತ್ತದೆ ಎಂದೋ ಏನೋ, ಅದರಲ್ಲೂ ಹೆಚ್ಚಾಗಿ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸೋರು ಹೆಚ್ಚು. ಆದ್ರೆ, ಇದು ಬಳಕೆದಾರರನ್ನು ಮೋಸಗೊಳಿಸುವ ಯೋಜನೆ ಎಂದು ಹೇಳಿದರೂ ತಪ್ಪಾಗಲ್ಲ. ಯಾಕೆಂದರೆ, ಮಾರಾಟ ಮಾಡುವ ಸೆಕೆಂಡ್ ಹ್ಯಾಂಡ್ ಮೊಬೈಲ್ ಗಳು ನಕಲಿ ಫೋನ್ ಗಳಾಗಿರುತ್ತದೆ.
ಹೌದು. ಕದ್ದ ಫೋನ್, ಕಳೆದುಹೋದ ಸ್ಮಾರ್ಟ್‌ಫೋನ್‌ಗಳ ಅಥವಾ ನಕಲಿ ಮೊಬೈಲ್ ಗಳನ್ನು ಸೆಕೆಂಡ್ ಹ್ಯಾಂಡ್ ಮೊಬೈಲ್ ಆಗಿ ಮಾರಾಟ ಮಾಡಲಾಗುತ್ತಿದೆ. ಇಂತಹ ದುರುಪಯೋಗ ತಪ್ಪಿಸಲೆಂದೆ ಸರ್ಕಾರ ಹೊಸ ನಿಯಮ ಜಾರಿಗೆ ತರುತ್ತಿದೆ. ಈ ನಿಯಮ ಜನವರಿ 1, 2023 ರಿಂದಲೇ ಜಾರಿಯಾಗಲಿದೆ.
ಈ ನಿಯಮದ ಪ್ರಕಾರ, ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಫೀಚರ್ ಫೋನ್‌ಗಳನ್ನು ತಯಾರಿಸುವ ಎಲ್ಲಾ ಕಂಪನಿಗಳು ಆ ಹ್ಯಾಂಡ್‌ಸೆಟ್‌ಗಳನ್ನು ಮಾರಾಟ ಮಾಡುವ ಮೊದಲು ಭಾರತೀಯ ನಕಲಿ ಸಾಧನ ನಿರ್ಬಂಧ ಪೋರ್ಟಲ್ https://icdr.ceir.gov.in ನಲ್ಲಿ ನೋಂದಾಯಿಸಿಕೊಳ್ಳಬೇಕು. ಪ್ರತಿಯೊಂದು ಹ್ಯಾಂಡ್‌ಸೆಟ್ IMEI ಸಂಖ್ಯೆಯನ್ನು ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.
ಅಷ್ಟೇ ಅಲ್ಲದೆ, IMEI ಸಂಖ್ಯೆಯನ್ನು ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದರಿಂದ ಮೊಬೈಲ್ ಕಳ್ಳತನವಾದರೆ ಅದನ್ನು ನಿರ್ಬಂಧಿಸಲು ಸಹ ಸಾಧ್ಯವಿದೆ. ಹಾಗೂ ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ಬ್ಲಾಕ್ ಮಾರ್ಕೆಟಿಂಗ್ ಅನ್ನು ಸಹ ತಡೆಯಬಹುದು. IMEI ಸಂಖ್ಯೆಯಿಂದ ಅಪರಾಧಿಗಳನ್ನು ಟ್ರ್ಯಾಕ್ ಮಾಡಬಹುದು. ಹೇಗೆಂದರೆ, ಸಾಮಾನ್ಯವಾಗಿ ಯಾವುದೇ ಅಪರಾಧಿಗಳು ಮೊಬೈಲ್ ಕಳ್ಳತನ ಮಾಡಿದ ಮೇಲೇ, ಸಿಮ್ ಕಾರ್ಡ್ ತೆಗೆದು ಹೊಸ ಸಿಮ್ ಕಾರ್ಡ್ ಬಳಸುತ್ತಾರೆ. ಆದರೆ, ಅವರು ಸಿಮ್ ಬದಲಾಸಿದರು, IMEI ನಂಬರ್ ಮೂಲಕ ಹಲವು ಪ್ರಕರಣಗಳನ್ನು ಬಗೆಹರಿಸಬಹುದು. ಯಾಕೆಂದರೆ, IMEI ಸಂಖ್ಯೆಯನ್ನು ಬದಲಾಯಿಸಲಾಗುವುದಿಲ್ಲ.
ಹಾಗಾಗಿ, ಮೊಬೈಲ್ ಖರೀದಿಗೂ ಮುನ್ನ ನೀವು ತಿಳಿದುಕೊಳ್ಳಬೇಕಾಗಿದ್ದು, ನಿಮ್ಮ ಹೊಸ ಮೊಬೈಲ್ ಅಥವಾ ಸೆಕೆಂಡ್ ಹ್ಯಾಂಡ್ ಫೋನ್ IMEI ಸಂಖ್ಯೆಯನ್ನು ಹೊಂದಿದೆಯೇ ಎಂಬುದನ್ನು. IMEI ಸಂಖ್ಯೆ ಇಲ್ಲದ ಯಾವುದೇ ಫೋನ್ ನಕಲಿಯಾಗಿದೆ. IMEI ಸಂಖ್ಯೆಯನ್ನು ಪರಿಶೀಲಿಸಲು, ಡಯಲ್ ಪ್ಯಾಡ್ ನಲ್ಲಿ *#06# ಸಂಖ್ಯೆಯನ್ನು ನಮೂದಿಸಬೇಕು. ಡ್ಯುಯಲ್ ಸಿಮ್ ಕಾರ್ಡ್ ಆಯ್ಕೆ ಹೊಂದಿರುವ ಫೋನ್‌ಗಳು ಎರಡು IMEI ಸಂಖ್ಯೆಗಳನ್ನು ಹೊಂದಿರುತ್ತದೆ.
ಪ್ರತಿ ಫೋನ್‌ಗೆ IMEI ಸಂಖ್ಯೆ ವಿಭಿನ್ನವಾಗಿರುತ್ತದೆ. ಒಂದೇ IMEI ಸಂಖ್ಯೆಯೊಂದಿಗೆ ಬೇರೆ ಯಾವುದೇ ಫೋನ್ ಇರುವುದಿಲ್ಲ. ಈ ಹೊಸ ನಿಯಮ, ಭಾರತದಲ್ಲಿ ತಯಾರಿಸಿದ ಫೋನ್‌ಗಳ ಹೊರತಾಗಿ, ವಿದೇಶದಿಂದ ಆಮದು ಮಾಡಿಕೊಳ್ಳುವ ಐಫೋನ್‌ಗಳು ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಿಗೂ ಅನ್ವಯಿಸುತ್ತದೆ. ಜನಪ್ರಿಯ ಬ್ರಾಂಡ್‌ಗಳ ಮೊಬೈಲ್‌ಗಳಂತೆಯೇ ಚೀನಾದಿಂದ ನಕಲಿ ಫೋನ್‌ಗಳು ಬರುತ್ತಿದ್ದು, ಇದರ ಮೂಲ ಮತ್ತು ನಕಲು ಗುರುತಿಸುವುದು ಸಹ ಕಷ್ಟವಾಗುತ್ತಿತ್ತು. ಈ ಹೊಸ ನಿಯಮದಿಂದ, ಅಂತಹ ನಕಲಿ ಫೋನ್‌ಗಳನ್ನು ಪರಿಶೀಲಿಸಬಹುದು.