Home latest ವಿದ್ಯಾರ್ಥಿನಿಯ ಖಾಸಗಿ ಅಂಗ ಸ್ಪರ್ಶಿಸಿದ ಚಾಲಕ; ಟ್ವಿಟ್ಟರ್ ಮೂಲಕ ಶಾಕಿಂಗ್ ನ್ಯೂಸ್ ಹೇಳಿದ ಯುವತಿ

ವಿದ್ಯಾರ್ಥಿನಿಯ ಖಾಸಗಿ ಅಂಗ ಸ್ಪರ್ಶಿಸಿದ ಚಾಲಕ; ಟ್ವಿಟ್ಟರ್ ಮೂಲಕ ಶಾಕಿಂಗ್ ನ್ಯೂಸ್ ಹೇಳಿದ ಯುವತಿ

Hindu neighbor gifts plot of land

Hindu neighbour gifts land to Muslim journalist

ಊಬರ್ ಆಟೋ ಚಾಲಕನೊಬ್ಬ ಕಾಲೇಜು ವಿದ್ಯಾರ್ಥಿನಿಯೋರ್ವಳ ಜೊತೆ ಅನುಚಿತವಾಗಿ ವರ್ತನೆ ಮಾಡಿರುವ ಆರೋಪವೊಂದು ಕೇಳಿ ಬಂದಿದೆ.

ಈ ಘಟನೆ ಚೆನ್ನೈನಲ್ಲಿ ನಡೆದಿದೆ. ಹೌದು ಊಬರ್ ಆಟೋ ಚಾಲಕನೊಬ್ಬ ಅನುಚಿತವಾಗಿ ವರ್ತಿಸಿದ್ದಾನೆಂದು ಕಾಲೇಜು ವಿದ್ಯಾರ್ಥಿನಿ ಆರೋಪಿಸಿದ್ದಾರೆ. ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾಳೆ.

ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತ ಈಸ್ಟ್ ಕೋಸ್ಟ್ ಮದ್ರಾಸ್‌ನಿಂದ ಹೋಟೆಲ್‌ಗೆ ಹಿಂತಿರುಗಲು ಊಬರ್ ಆಟೋ ಏರಿದ್ದರು. ಸೆಲ್ವಂ ಎಂಬ ಊಬರ್ ಚಾಲಕ ಹೋಟೆಲ್ ಬಳಿ ಅಸಭ್ಯವಾಗಿ ನಡೆದುಕೊಂಡಿದ್ದಾನೆಂದು ಯುವತಿ ಹೇಳಿದ್ದಾಳೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ರೆಸ್ಟೋರೆಂಟ್‌ನಿಂದ ಸೇಮಂಚೇರಿಯಲ್ಲಿರುವ ಹೋಟೆಲ್‌ಗೆ ಹೋಗಲು ಅವರು ಊಬರ್ ಆಟೋ ಬುಕ್ ಮಾಡಿದ್ದರು. ಹೋಟೆಲ್ ತಲುಪುತ್ತಿದ್ದಂತೆ ಸ್ನೇಹಿತ ಆಟೋದಿಂದ ಕೆಳಕ್ಕಿಳಿದಿದ್ದಾನೆ, ಈ ಸಂದರ್ಭದಲ್ಲಿ ಆಟೋ ಚಾಲಕ ವಿದ್ಯಾರ್ಥಿನಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಘಟನೆಯ ನಂತರ ಪೊಲೀಸರಿಗೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಯುವತಿ ದೂರಿದ್ದಾಳೆ.

30 ನಿಮಿಷಗಳ ನಂತರ ಒಬ್ಬ ಪೊಲೀಸ್ ಮತ್ತು ಇನ್ನೊಬ್ಬ ವ್ಯಕ್ತಿ ಹೋಟೆಲ್‌ಗೆ ಬಂದರು, ಆದರೆ ಜೊತೆಗೆ ಮಹಿಳಾ ಪೊಲೀಸ್ ಅಧಿಕಾರಿ ಇರಲಿಲ್ಲ ಎಂದಾಕೆ ಟ್ವೀಟ್ ಮಾಡಿದ್ದಾಳೆ.

ಎಫ್‌ಐಆರ್ ದಾಖಲಿಸಲು ಬೆಳಗ್ಗೆವರೆಗೂ ಕಾಯುವಂತೆ ಅವರು ಸೂಚಿಸಿದ್ದಾರಂತೆ. ಊಬರ್ ಆಟೋದ ಸ್ಕ್ರೀನ್‌ಶಾಟ್‌ಗಳನ್ನು ಸಹ ಯುವತಿ ಶೇರ್ ಮಾಡಿದ್ದಾಳೆ.
ತನ್ನ ಸಂಚಾರದ ವಿವರಗಳನ್ನು ಹಂಚಿಕೊಂಡಿದ್ದಾಳೆ.
ಅಲ್ಲದೇ, ಈ ಬಗ್ಗೆ ಟ್ವಿಟರ್‌ನಲ್ಲಿ ಆರೋಪಿ ಆಟೋ ಚಾಲಕನ ಫೋಟೋ ಸಮೇತವಾಗಿ ವಿದ್ಯಾರ್ಥಿನಿ ಗ್ರೇಟರ್ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು. ಅಂತೆಯೇ, ಚೆಮ್ಮಂಚೇರಿ ಠಾಣೆ ಪೊಲೀಸರು ಇಲ್ಲಿನ ಪಾಲವಕ್ಕಂ ಪ್ರದೇಶದ ಸೆಲ್ವಂ (40) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

https://twitter.com/IshitaS05978134/status/1574162681296482307?ref_src=twsrc%5Etfw%7Ctwcamp%5Etweetembed%7Ctwterm%5E1574162681296482307%7Ctwgr%5E92eed7f49707b62429ad836671373825393d084f%7Ctwcon%5Es1_c10&ref_url=http%3A%2F%2Fapi-news.dailyhunt.in%2F