Sukanya Samriddhi Yojana | ಹಲವಾರು ಮಹತ್ತರ ಬದಲಾವಣೆಗಳೊಂದಿಗೆ ನಿಮ್ಮ ಮುಂದೆ ಬಂದಿದೆ ಸುಕನ್ಯಾ ಸಮೃದ್ಧಿ ಯೋಜನೆ | ಹೆಚ್ಚಿನ ಮಾಹಿತಿ ಇಲ್ಲಿದೆ

ಓರ್ವ ತಂದೆಯಾಗಿ ನೀವು ನಿಮ್ಮ ಮಗಳ ಭವಿಷ್ಯವನ್ನು ಆರ್ಥಿಕವಾಗಿ, ಹಾಗೂ ಮಗಳು ಹಣದ ಸಮಸ್ಯೆ ಎದುರಿಸಬಾರದು ಅಂತಾ ಬಯಸಿದರೆ ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಸುಕನ್ಯಾ ಸಮೃದ್ಧಿ ದೀರ್ಘಾವಧಿಯ ಯೋಜನೆಯಾಗಿದ್ದು, ಇದರಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಮಗಳ ಶಿಕ್ಷಣ ಹಾಗೂ ಉತ್ತಮ ಭವಿಷ್ಯವನ್ನು ರೂಪಿಸಬಹುದು. ಇದಕ್ಕಾಗಿ ನೀವು ಹೆಚ್ಚು ಹಣ ಹೂಡಿಕೆ ಮಾಡುವ ಅಗತ್ಯವಿಲ್ಲ.

ನೀವು ಪ್ರತಿದಿನ 416 ರೂ. ಹೂಡಿಕೆ ಮಾಡಿ ಈ ಯೋಜನೆಯನ್ನು ಪ್ರಾರಂಭಿಸಬಹುದು. ಈ 416 ರೂ. ಸಣ್ಣ ಮೊತ್ತದ ಹೂಡಿಕೆಯು ನಿಮ್ಮ ಮಗಳಿಗೆ 65 ಲಕ್ಷ ನಷ್ಟು ಆರ್ಥಿಕ ಬಲ ಕೊಡುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗೆನೇ ನಿಮ್ಮ ಮಗಳ ವಿದ್ಯಾಭ್ಯಾಸದ ಖರ್ಚು ಕೂಡ ಸುಲಭವಾಗುತ್ತದೆ.

ಈ ಯೋಜನೆಯಲ್ಲಿ ಹಲವು ಪ್ರಮುಖ ಬದಲಾವಣೆಗಳಾಗುತ್ತಿವೆ. ಹೊಸ ನಿಯಮಗಳಡಿ ಖಾತೆಯಲ್ಲಿನ Wrong Interestನ್ನು ಹಿಂತಿರುಗಿಸುವ ನಿಬಂಧನೆಯನ್ನು ತೆಗೆದುಹಾಕಲಾಗಿದೆ. ಇದಲ್ಲದೆ ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಖಾತೆಯ ವಾರ್ಷಿಕ ಬಡ್ಡಿಯನ್ನು ಜಮಾ ಮಾಡಲಾಗುತ್ತದೆ. ನಿಮ್ಮ ಮಗಳು 10 ವರ್ಷಗಳ ನಂತರವೇ ಖಾತೆ ನಿರ್ವಹಿಸಬಹುದು ಎಂಬ ನಿಯಮ ಮೊದಲು ಇತ್ತು. ಆದರೆ ಈ ಹೊಸ ನಿಯಮಗಳ ಪ್ರಕಾರ ನಿಮ್ಮ ಮಗಳಿಗೆ 18 ವರ್ಷಕ್ಕಿಂತ ಮೊದಲು ಖಾತೆಯನ್ನು ನಿರ್ವಹಿಸಲು ಸಾಧ್ಯವಿಲ್ಲ. ಅದರ ಬದಲಾಗಿ ಪೋಷಕರು ಮಾತ್ರ ಖಾತೆಯನ್ನು ನಿರ್ವಹಿಸುತ್ತಾರೆ.

ಸುಕನ್ಯಾ ಸಮೃದ್ಧಿ ಯೋಜನೆಡಿ ತೆರೆಯಲಾದ ಖಾತೆಯನ್ನು ಎರಡು ರೀತಿ ಕ್ಲೋಸ್ ಮಾಡಬಹುದು. ಮಗಳು ಸಾನ್ನಪ್ಪಿದರೆ ಮತ್ತು ಮಗಳ ನಿವಾಸದ ವಿಳಾಸವನ್ನು ಬದಲಾಯಿಸಿದರೆ, ಹೊಸ ಬದಲಾವಣೆಯ ಪ್ರಕಾರ ಖಾತೆದಾರರ ಮಾರಣಾಂತಿಕ ಕಾಯಿಲೆಯೂ ಇದರಲ್ಲಿ ಸೇರಿಸಲಾಗಿದೆ. ಗಾರ್ಡಿಯನ್ ಮರಣದ ಸಂದರ್ಭದಲ್ಲಿಯೂ ಖಾತೆಯನ್ನು ಅವಧಿಗೂ ಮುನ್ನ ಮುಚ್ಚಬಹುದಾಗಿದೆ.

ಈ ಮೊದಲು ಈ ಯೋಜನೆಯ 80C ಅಡಿಯಲ್ಲಿ ತೆರಿಗೆ ವಿನಾಯಿತಿಯ ಪ್ರಯೋಜನವು ಇಬ್ಬರು ಹೆಣ್ಣುಮಕ್ಕಳ ಖಾತೆಯಲ್ಲಿ ಮಾತ್ರ ಇತ್ತು. ಆದರೆ ಈ ಪ್ರಯೋಜನ ಈಗ 3ನೇ ಮಗಳಿಗೆ ಲಭ್ಯ ಇರಲಿಲ್ಲ. ಈ ಹೊಸ ನಿಯಮದ ಪ್ರಕಾರ ಒಬ್ಬ ಹೆಣ್ಣು ಮಗುವಿನ ನಂತರ ಇಬ್ಬರು ಅವಳಿ ಹೆಣ್ಣುಮಕ್ಕಳು ಜನಿಸಿದರೆ, ಇಬ್ಬರಿಗೂ ಖಾತೆ ತೆರೆಯಲು ಅವಕಾಶವಿದೆ ಎಂದು ಹೇಳಲಾಗಿದೆ.

ವಾರ್ಷಿಕವಾಗಿ ಈ ಖಾತೆಯಲ್ಲಿ ಕನಿಷ್ಠ 250 ರೂ. ಇಡಬೇಕು. ಈ ಮೊತ್ತವನ್ನು ಠೇವಣಿ ಮಾಡದಿದ್ದಲ್ಲಿ ಖಾತೆಯನ್ನು ಡೀಫಾಲ್ಟ್ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಹೊಸ ನಿಯಮಗಳ ಪ್ರಕಾರ ಖಾತೆಯನ್ನು ಮತ್ತೆ ಸಕ್ರಿಯಗೊಳಿಸದಿದ್ದರೆ ಮುಕ್ತಾಯದವರೆಗೆ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತದ ಮೇಲೆ ಅನ್ವಯವಾಗುವ ದರದಲ್ಲಿ ಬಡ್ಡಿ ಮುಂದುವರಿಯುತ್ತದೆ. ಹಿಂದೆ ಡೀಫಾಲ್ಟ್ ಖಾತೆಗಳು ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ ಅನ್ವಯವಾಗುವ ದರದಲ್ಲಿ ಬಡ್ಡಿಯನ್ನು ಗಳಿಸುತ್ತಿದ್ದವು.

Leave A Reply

Your email address will not be published.