Home Breaking Entertainment News Kannada VIDEO: ದಿನೇಶ್ ಕಾರ್ತಿಕ್ ಮೈಗೆ ಕೈಹಾಕಿದ ಯುವತಿ : ಕೋಪಗೊಂಡ ಆಟಗಾರ ಮಾಡಿದ್ದೇನು?

VIDEO: ದಿನೇಶ್ ಕಾರ್ತಿಕ್ ಮೈಗೆ ಕೈಹಾಕಿದ ಯುವತಿ : ಕೋಪಗೊಂಡ ಆಟಗಾರ ಮಾಡಿದ್ದೇನು?

Hindu neighbor gifts plot of land

Hindu neighbour gifts land to Muslim journalist

ಆಸ್ಟ್ರೇಲಿಯಾ-ಭಾರತ (India vs Australia) ನಡುವಣ ಟಿ20 ಸರಣಿಯ ಕೊನೆಯ ಪಂದ್ಯವು ಹಲವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದು, ಈ ಪಂದ್ಯದಲ್ಲಿ 6 ವಿಕೆಟ್ಗಳಿಂದ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ (Team India) 2-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿದ್ದು ತಿಳಿದಿರುವ ವಿಷಯ. ಈ ಗೆಲುವನ್ನು ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸುತ್ತಿದ್ದ ಟೀಮ್ ಇಂಡಿಯಾ ಆಟಗಾರರ ಬಳಿ ಯುವತಿಯೊಬ್ಬಳು ಕಾಣಿಸಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾಳೆ.

ಟೀಮ್ ಇಂಡಿಯಾ ಆಟಗಾರರು ವಿಜಯೋತ್ಸವದ ಬಳಿಕ ಮೈದಾನದಿಂದ ಡ್ರೆಸ್ಸಿಂಗ್ ರೂಮ್ನತ್ತ ತೆರಳುತ್ತಿದ್ದರು. ಇದೇ ವೇಳೆ ಯುವತಿಯೊಬ್ಬಳು ದಿನೇಶ್ ಕಾರ್ತಿಕ್ ಅವರ ಮೈ ಮುಟ್ಟಿದ್ದು, ಇದರಿಂದ ಕುಪಿತಗೊಂಡ ಕಾರ್ತಿಕ್ ಯುವತಿಯನ್ನು ದಿಟ್ಟಿಸಿ ನೋಡಿದ ಘಟನೆ ನಡೆದಿದೆ. ಇದಲ್ಲದೆ, ಅಲ್ಲಿದ್ದ ಮೈದಾನದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಅಷ್ಟರಲ್ಲಿ ಟೀಮ್ ಇಂಡಿಯಾ ಆಟಗಾರ ರವಿಚಂದ್ರನ್ ಅಶ್ವಿನ್ ಮಧ್ಯೆ ಪ್ರವೇಶಿಸಿ ದಿನೇಶ್ ಕಾರ್ತಿಕ್ ಅವರನ್ನು ಸಮಾಧಾನಪಡಿಸುವ ಯತ್ನ ನಡೆಸಿದ್ದಾರೆ.

ಇದೀಗ ಈ ತೆರೆಮರೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಡಿಯೋ ವೈರಲ್ ಆದ ಬೆನ್ನಲ್ಲೇ ಮೈದಾನದಲ್ಲಿದ್ದ ಈ ಯುವತಿ ಯಾರು ಎಂಬ ಪ್ರಶ್ನೆ ಹಲವರನ್ನು ಕಾಡಿದೆ. ಈ ವಿಡಿಯೋ ವೈರಲ್ ಆಗಿದ್ದು, ಕಾಣಿಸಿಕೊಂಡ ಯುವತಿಯು ಬಿಸಿಸಿಐ ಅಥವಾ ಟೀಮ್ ಇಂಡಿಯಾ ಸಿಬ್ಬಂದಿಗಳ ಭಾಗವೇ ಎಂಬ ಗೊಂದಲ ಸೃಷ್ಟಿಯಾಗಿದೆ. ಏಕೆಂದರೆ ಯುವತಿಯು ಟೀಮ್ ಇಂಡಿಯಾ ಮಹಿಳಾ ತಂಡದ ಜೆರ್ಸಿಯನ್ನು ಧರಿಸಿದ್ದಾಳೆ. ಹೀಗಾಗಿ ಇದೀಗ ದಿನೇಶ್ ಕಾರ್ತಿಕ್ ಅವರೊಂದಿಗೆ ಮೈದಾನದಲ್ಲಿ ಅನುಚಿತವಾಗಿ ವರ್ತಿಸಿದ ಯುವತಿ ಯಾರು ಎಂಬ ಪ್ರಶ್ನೆ ನೋಡುಗರಿಗೆ ಸಂಚಲನದ ಜೊತೆಗೆ ಅಚ್ಚರಿ ಮೂಡಿಸಿದೆ.