ಥರ್ಡ್ ಪಾರ್ಟಿ ಕಾಲ್ ರೆಕಾರ್ಡಿಂಗ್ ಆಪ್ ಬ್ಯಾನ್ | ಟೆನ್ಶನ್ ಬೇಡ, ಗೂಗಲ್ ಪೋನ್ ಅಪ್ಲಿಕೇಶನ್ ಬಳಸಿಕೊಂಡು ಈ ರೀತಿ ರೆಕಾರ್ಡ್ ಮಾಡಿ
ಇಂದು ಟೆಕ್ನಾಲಾಜಿ ಯುಗ. ಕೂತಲ್ಲಿಂದಲೇ ಎಲ್ಲಾ ಕೆಲಸನು ಸುಲಭ ರೀತಿಲಿ ಮಾಡಬಹುದು. ಇಂತಹ ಡಿಜಿಟಲೀಕರಣದಲ್ಲಿ ಪ್ರತಿಯೊಂದಕ್ಕೂ ಒಂದೊಂದು ಅಸ್ತ್ರ ಇದ್ದೇ ಇದೇ. ಅದರಂತೆ ಕರೆ ರೆಕಾರ್ಡ್ ಮಾಡಲು ಕೂಡ ರೆಕಾರ್ಡಿಂಗ್ ಆಪ್ ಇದೆ. ಯಾವುದಾದರು ಎಮರ್ಜೆನ್ಸಿ ಟೈಮ್ ನಲ್ಲಿ ಕಾಲ್ ರೆಕಾರ್ಡ್ ಮಾಡಲು ಇದು ಬಹಳ ಉಪಯುಕ್ತವಾಗಿತ್ತು. ಆದರೆ, ಇನ್ನು ಮುಂದೆ ಈ ರೆಕಾರ್ಡಿಂಗ್ ಆಪ್ ಬ್ಯಾನ್ ಆಗಲಿದೆ.
ಹೌದು. ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಸುರಕ್ಷತೆ ಮತ್ತು ಗೌಪ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೂಗಲ್ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಅದರಂತೆ, ಥರ್ಡ್ ಪಾರ್ಟಿ ವ್ಯಕ್ತಿಗಳಿಂದ ಅಭಿವೃದ್ಧಿಪಡಿಸಲಾದ ಧ್ವನಿ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳನ್ನು ಬಳಕೆದಾರರ ಗೌಪ್ಯತೆಯ ಮೇಲೆ ಆಕ್ರಮಣ ಎಂದು ಪರಿಗಣಿಸಿ ಗೂಗಲ್ ಇಂತಹದೊಂದು ಕಾಲ್ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳನ್ನು ಬ್ಯಾನ್ ಮಾಡಿದೆ.
ಹೀಗಾಗಿ, ಈಗ ಟ್ರೂ ಕಾಲರ್ ಅಪ್ಲಿಕೇಶನ್‌ನಲ್ಲಿ ಕಾಲ್ ರೆಕಾರ್ಡಿಂಗ್ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೂ ನಿಮ್ಮ ಫೋನ್‌ನಲ್ಲಿ ಕಾಲ್ ರೆಕಾರ್ಡಿಂಗ್ ಆಯ್ಕೆಯನ್ನು ಮಾಡಬಹುದಾಗಿದೆ. ಹೌದು. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯಾವುದೇ ಕಾಲ್ ರೆಕಾರ್ಡಿಂಗ್ ಆಯ್ಕೆಯನ್ನು ಹೊಂದಿಲ್ಲವಾದರೂ, ಪ್ಲೇ ಸ್ಟೋರ್‌ನಿಂದ ಗೂಗಲ್‌ನ ಫೋನ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ನಿಮ್ಮ ಕಾಲ್ ರೆಕಾರ್ಡ್ ಮಾಡಬಹುದು.
ಗೂಗಲ್ ತನ್ನ ಪ್ಲೇ ಸ್ಟೋರ್‌ನಲ್ಲಿ ಎಲ್ಲಾ ಥರ್ಡ್ ಪಾರ್ಟಿ ಕಾಲ್ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳನ್ನು ತನ್ನ ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್‌ಗಳನ್ನು ಬ್ಯಾನ್ ಮಾಡಿದೆ ನಿಜ. ಆದರೆ, ಎಲ್ಲಾ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳನ್ನು ಪ್ಲಾಟ್‌ಫಾರ್ಮ್‌ನಿಂದ ಬ್ಯಾನ್ ಆಗುವುದಿಲ್ಲ. ಅಂದರೆ ಒನ್‌ಪ್ಲಸ್, ಶವೋಮಿ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳು ನೀಡುವ ಇಂಟರ್‌ಬಿಲ್ ಕಾಲ್ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳು ಬ್ಯಾನ್ ಆಗುವುದಿಲ್ಲ. ಇದಲ್ಲದೆ ಕೆಲವು ಆಯ್ದ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ನ ಸ್ವಂತ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್ ಸಹ ಲಭ್ಯವಿರುತ್ತದೆ. ಹಾಗಿದ್ರೆ, ಗೂಗಲ್ ಪೋನ್ ಅಪ್ಲಿಕೇಶನ್ ಬಳಸಿಕೊಂಡು ಕರೆ ರೆಕಾರ್ಡ್ ಮಾಡುವುದು ಹೇಗೆ ಎಂಬುದನ್ನ ಇಲ್ಲಿ ತಿಳಿಸುತ್ತೇವೆ ನೋಡಿ..
- ಆಪ್ ಇನ್‌ಸ್ಟಾಲ್ ಆದ ಬಳಿಕ ಗೂಗಲ್‌ನ ಫೋನ್ ಅಪ್ಲಿಕೇಶನ್ ತೆರೆಯಿರಿ ಇದರಲ್ಲಿ ಮೂರು-ಚುಕ್ಕೆಗಳ ಬಟನ್ ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ.
*ಇದೀಗ, ಕಾಲ್ ರೆಕಾರ್ಡಿಂಗ್‌ನಲ್ಲಿ ಮತ್ತೊಮ್ಮೆ ಟ್ಯಾಪ್ ಮಾಡಿ ಮತ್ತು “ನಿಮ್ಮ ಸಂಪರ್ಕಗಳಲ್ಲಿಲ್ಲದ ಸಂಖ್ಯೆಗಳು” ಅನ್ನು ಸಕ್ರಿಯಗೊಳಿಸಿ - ಇದರಲ್ಲಿ ಆಟೋ-ಕಾಲ್ ರೆಕಾರ್ಡಿಂಗ್ ಇದರಲ್ಲಿ ಆಟೋ-ಕಾಲ್ ರೆಕಾರ್ಡಿಂಗ್ ಅನ್ನು ಸಕ್ರಿಯಗೊಳಿಸಲು ಸಾಧ್ಯವಿಲ್ಲ. ನೀವು ಅಪರಿಚಿತ ಸಂಖ್ಯೆಗಳನ್ನು ಮಾತ್ರ ರೆಕಾರ್ಡ್ ಮಾಡಲಾಗುತ್ತದೆ. ನಿಮ್ಮ ಫೋನ್‌ನಲ್ಲಿ ಸೇವ್ ಆಗಿರುವ ನಂಬರ್‌ನಿಂದ ಕರೆ ಬಂದರೆ ಕಾಲ್ ರೆಕಾರ್ಡಿಂಗ್ ಅನ್ನು ಆಕ್ಟಿವ್ ಮಾಡಬೇಕಾಗುತ್ತದೆ.
ಆಟೋ ರೆಕಾರ್ಡ್ ಆ್ಯಕ್ಟಿವ್ ಮಾಡುವುದು ಹೇಗೆ?
*ಮೊದಲಿಗೆ ಗೂಗಲ್ ಫೋನ್ ಅಪ್ಲಿಕೇಶನ್ ತೆರೆಯಿರಿ. ಸೆಟ್ಟಿಂಗ್‌ಗಳು -ಕಾಲ್ •
*ಇದೀಗ “ನಿಮ್ಮ ಸಂಪರ್ಕಗಳಲ್ಲಿ ಇಲ್ಲದ ಸಂಖ್ಯೆಗಳು” ಅನ್ನು ಟ್ಯಾಪ್ ಮಾಡಿ.
*ನಂತರ “ಆಯ್ದ ಸಂಖ್ಯೆಗಳು” ಮೇಲೆ ಟ್ಯಾಪ್ ಮಾಡಿ.
*ಯಾವಾಗಲೂ ಆಯ್ಕೆಮಾಡಿದ ಸಂಖ್ಯೆಗಳನ್ನು ರೆಕಾರ್ಡ್ ಮಾಡಿ. ಇದೀಗ “ಸಂಪರ್ಕವನ್ನು ಆರಿಸಿ” ಮೇಲೆ ಮತ್ತೊಮ್ಮೆ ಟ್ಯಾಪ್ ಮಾಡಿ.
ಈಗ ನಿಮ್ಮ ಫೋನ್‌ಗೆ ಬರುವ ಎಲ್ಲಾ ಅಪರಿಚಿತ ಸಂಖ್ಯೆಯ ಕರೆಗಳು ಮತ್ತು ನೀವು ಪಟ್ಟಿಯಲ್ಲಿ ಸೇರಿಸುವ ಕರೆಗಳು ಸ್ವಯಂಚಾಲಿತವಾಗಿ ರೆಕಾರ್ಡ್ ಆಗುತ್ತವೆ.