ಹೆಚ್ಚು ಅಡಿಕೆ ಬೆಳೆಯುವ ಭಾರತಕ್ಕೆ ಮುಜುಗರ!! ಪುಟ್ಟ ದೇಶವೊಂದು ಅಡಿಕೆಯಿಂದ ಮಾಡಿದೆ ದೊಡ್ಡ ಸಾಧನೆ!?
ವಿಶ್ವದಲ್ಲೇ ಅತೀ ಹೆಚ್ಚು ಅಡಿಕೆ ಬೆಳೆಯುವ, ಅಡಿಕೆ ಕೃಷಿಯನ್ನೇ ನಂಬಿರುವ ಕೃಷಿಕರು ಭಾರತದಲ್ಲಿದ್ದು, ಸದಾ ಅಡಿಕೆ ಹಾನಿಕಾರಕ ಎಂದು ವರದಿ ನೀಡುವ ಇಲಾಖೆ-ಸರ್ಕಾರಗಳಿಗೆ ಪುಟ್ಟ ದೇಶವೊಂದು ಮುಟ್ಟಿ ನೋಡುವಂತಹ ಚಮಕ್ ಕೊಟ್ಟಿದೆ. ಹೌದು, ಅಡಿಕೆಯಿಂದಲೇ ಮೂರು ಬಗೆಯ ಎನರ್ಜಿ ಡ್ರಿಂಕ್ ತಯಾರಿಸಿ ಮಾರುಕಟ್ಟೆಗೆ ಬಿಟ್ಟು ಭೇಷ್ ಎನಿಸಿಕೊಂಡಿದೆ.
ವಿಯೆಟ್ನಾಂ ನಲ್ಲಿ ಇಂಥಹ ಎನರ್ಜಿ ಡ್ರಿಂಕ್ ತಯಾರಗುತ್ತಿದ್ದು,ಎಳೆಯ ಅಡಿಕೆಯಿಂದ ತಯಾರಿಸಲಾಗುವ ಈ ಉತ್ಪನ್ನಕ್ಕೆ ಭಾರೀ ಬೇಡಿಕೆಯೂ ವ್ಯಕ್ತವಾಗಿದೆ.250 ಮಿ.ಲೀ ಬಾಟಲ್ ನ ಜ್ಯೂಸ್ ಇದಾಗಿದ್ದು, 20-24 ತಿಂಗಳು ಅಂದರೆ ಸರಿ ಸುಮಾರು ಎರಡು ವರ್ಷಗಳ ಕಾಲ ಬಾಳ್ವಿಕೆ ಬರುತ್ತದೆ ಎಂದು ಹೇಳಲಾಗುತ್ತಿದೆ.
ಕಳೆದ ಬಾರಿ ಚೀನಾ ದೇಶದ ಯುವ ಗಾಯಕನೊಬ್ಬ ಕ್ಯಾನ್ಸರ್ ನಿಂದ ಮೃತಪಟ್ಟ ಬಳಿಕ ಅಡಿಕೆ ಬಗ್ಗೆ ಅಪಪ್ರಚಾರ ಮೂಡಿದ್ದು, ಅಡಿಕೆ ಮಾರಕ ಎಂಬಂತೆ ಬಿಂಬಿಸಲಾಗಿತ್ತು. ಭಾರತದಲ್ಲೂ ಅಡಿಕೆ ಬೆಳೆಗಾರರ ನೋವು ಹೇಳತೀರದಂತಿದ್ದು, ಬೆಳೆದ ಬೆಳೆಗೆ ಬೆಲೆ ಸಿಕ್ಕಿದರೂ ಕೂಡಾ ಅಡಿಕೆ ಹಾನಿಕಾರಕ ಎನ್ನುವ ಅಪವಾದ ತಪ್ಪಿಲ್ಲ.
ರಾಜ್ಯದ ನಿವೇದನ್ ಎಂಬವರು ಅಡಿಕೆಯಿಂದ ಚಹಾ ಹುಡಿ ತಯಾರಿಸಿ ಗಮನಸೆಳೆದಿದ್ದು, ಕರಾವಳಿ ಭಾಗಕ್ಕೂ ಚಾ ಕಾಲಿಟ್ಟರೂ ಅಡಿಕೆ ಬೆಳೆಗಾರರಿಂದ ನಿರೀಕ್ಷೆಯ ಸಹಕಾರ ಸಿಕ್ಕಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ. ಇದೆಲ್ಲದರಿಂದಾಗಿ ಅಡಿಕೆ ಬೆಲೆಯಲ್ಲಿ ಆಗುವ ಉಪಯೋಗದ ಅಧ್ಯಯನ ಮೂಲೆಗುಂಪಾಗಿದೆ.