SBI, PNB ವಾರ್ಷಿಕ ಎಟಿಎಂ ನಿರ್ವಹಣಾ ಶುಲ್ಕ ಎಷ್ಟಿದೆ…
ಹೆಚ್ಚಿನ ಜನರು ಬ್ಯಾಂಕ್ ನಲ್ಲಿ ಠೇವಣಿ ಇಟ್ಟು ಭದ್ರತೆ ಜೊತೆಗೆ ಅನುಕೂಲಕ್ಕೆ ಅನುಗುಣವಾಗಿ ಉಳಿತಾಯ ಹೂಡಿಕೆ ಮಾಡುವುದು ದಿನದಿಂದ ಸಾಮಾನ್ಯ. ದಿನದಿಂದ ದಿನಕ್ಕೆ ಅನ್ ಲೈನ್ ಪೇಮೆಂಟ್, ಮೊಬೈಲ್ ಟ್ರಾನ್ಸ್ ಫರ್ ಹೀಗೆ ನಾನಾ ಗ್ರಾಹಕ ಸ್ನೇಹಿ ಸೇವೆಗಳನ್ನು ಬ್ಯಾಂಕ್ ಒದಗಿಸುತ್ತಿದ್ದು, ಹಾಗಾಗಿ ಬಳಕೆದಾರರು ಸುಲಭವಾಗಿ ಎ.ಟಿ.ಎಂ ಮೂಲಕ ಇಲ್ಲವೇ ಮೊಬೈಲ್ ನಲ್ಲಿ ಗೂಗಲ್ ಪೇ, ಫೋನ್ ಪೇ ಅವಶ್ಯಕತೆಗೆ ತಕ್ಕಂತೆ ಹಣ ರವಾನಿಸುವ, ಪಡೆಯುವ ವಿಧಾನಗಳನ್ನು ಅನುಸರಿಸುತ್ತಿದ್ದಾರೆ.
ಪ್ರತಿ ತಿಂಗಳು ಖಾಸಗಿ ಬ್ಯಾಂಕ್ , ಸಾರ್ವಜನಿಕ ಬ್ಯಾಂಕ್ ಗಳ ಎಟಿಎಂಗಳಲ್ಲಿ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಉಚಿತ ವಹಿವಾಟು ಮಿತಿ ಇದ್ದು, ಕೆಲವು ಬ್ಯಾಂಕ್‌ನ ಎಟಿಎಂನಲ್ಲಿ ಮಾಸಿಕ ಐದು ಬಾರಿ ಮಾತ್ರ ಎಟಿಎಂ ವಿತ್‌ಡ್ರಾ ಮಾಡುವ ಅವಕಾಶವಿರುತ್ತದೆ. ನಂತರದ ವಹಿವಾಟು ನಡೆಸಲು ದಂಡ ತೆರ ಬೇಕಾಗುತ್ತದೆ.
ಬ್ಯಾಂಕ್‌ಗಳು ಮಾಸಿಕ ಮಿತಿಗಿಂತ ಹೆಚ್ಚಾಗಿ ನಡೆಸಿದ ಹಣಕಾಸು ಅಥವಾ ಹಣಕಾಸೇತರ ವಹಿವಾಟಿಗೆ ಶುಲ್ಕದ ಜೊತೆಗೆ ತೆರಿಗೆಯನ್ನೂ ಕೂಡ ವಿಧಿಸುತ್ತದೆ. ಬ್ಯಾಂಕ್ ಮತ್ತು ಯಾವ ಖಾತೆಯನ್ನು ಖಾತೆದಾರ ಹೊಂದಿದ್ದಾರೆ ಎಂಬುದು ಕೂಡ ಪರಿಗಣಿಸಬೇಕಾಗುತ್ತದೆ. ಎಟಿಎಂ ನಿರ್ವಹಣೆಗೆ ತಗುಲುವ ವೆಚ್ಚವನ್ನು ಸರಿದೂಗಿಸಲು ಬ್ಯಾಂಕ್‌ಗಳು ಎಟಿಎಂ ಶುಲ್ಕ ಎಂದು ಕೂಡಾ ವಿಧಿಸುತ್ತದೆ. ಎಲ್ಲ ಪ್ರಮುಖ ಬ್ಯಾಂಕ್‌ಗಳಾದ ಎಸ್‌ಬಿಐ, ಪಿಎನ್‌ಬಿ ಡೆಬಿಟ್ ಕಾರ್ಡ್ ಅಥವಾ ಎಟಿಎಂ ಕಾರ್ಡ್ ಮೇಲೆ ವಾರ್ಷಿಕವಾಗಿ ಶುಲ್ಕವನ್ನು ವಿಧಿಸುವುದು ಅಷ್ಟೇ ಅಲ್ಲದೆ ಉಪಯೋಗಿಸುವ ಡೆಬಿಟ್ ಕಾರ್ಡ್ ಯಾವ ಬ್ಯಾಂಕ್ ಗೆ ಸಂಬಂಧಿಸಿದೆ ಎನ್ನುವ ಆಧಾರದ ಮೇಲೆ ಎಟಿಎಂಗಳಲ್ಲಿ ಮಾಸಿಕ ವಹಿವಾಟು ಮಿತಿಯನ್ನು ವಿಧಿಸಲಾಗುತ್ತದೆ.
ಆರ್‌ಬಿಐ ಕಳೆದ ವರ್ಷದ ಜೂನ್ ನಲ್ಲಿ ಹೊರಡಿಸಿದ ಸುತ್ತೋಲೆಯ ಪ್ರಕಾರ, ಎಟಿಎಂನಲ್ಲಿ ಮಾಸಿಕ ವಹಿವಾಟು ಮಿತಿಗಿಂತ ಅಧಿಕವಾಗಿ ಮಾಡಲಾದ ಪ್ರತಿ ವಹಿವಾಟಿಗೆ ಬ್ಯಾಂಕ್‌ಗಳು 21 ರೂಪಾಯಿ ಶುಲ್ಕವನ್ನು ವಿಧಿಸುತ್ತಿದ್ದು 2022ರ ಜನವರಿಯಿಂದ ಜಾರಿಗೆ ಬಂದಿದೆ. ಇದಕ್ಕೂ ಮೊದಲು ಬ್ಯಾಂಕ್‌ಗಳು 20 ರೂಪಾಯಿ ಶುಲ್ಕ ವಿಧಿಸುತ್ತಿತ್ತು.
ದೇಶದ ಪ್ರಮುಖ ಬ್ಯಾಂಕ್‌ಗಳಾದ ಎಸ್‌ಬಿಐ ಹಾಗೂ ಪಿಎನ್‌ಬಿಯಲ್ಲಿ ಉಚಿತ ಎಟಿಎಂ ವಿತ್‌ಡ್ರಾ ಮಿತಿ ಬಗ್ಗೆ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಆರ್‌ಬಿಐ ಬ್ಯಾಂಕ್‌ನಲ್ಲಿ ಹಣಕಾಸು ವಿನಿಮಯಕ್ಕೆ ಸುಮಾರು 17 ರೂಪಾಯಿ ಹಾಗೂ ಹಣಕಾಸೇತರ ವಹಿವಾಟಿಗೆ 6 ರೂಪಾಯಿ ವಿಧಿಸಲು 2022ರ ಆಗಸ್ಟ್ 1ರಿಂದ ಅವಕಾಶವನ್ನು ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಾರ್ಷಿಕ ಶುಲ್ಕ ಡೆಬಿಟ್ ಕಾರ್ಡ್‌ನ ವಾರ್ಷಿಕ ನಿರ್ವಹಣಾ ಶುಲ್ಕ ಅಥವಾ ಮೆಂಟೇನ್ ಚಾರ್ಜ್ ( 125+ ಜಿ. ಎಸ್. ಟಿ ಚಾರ್ಜ್) ಆಗಿರುತ್ತದೆ. ಡೆಬಿಟ್ ಕಾರ್ಡ್ ಅನ್ನು ಬದಲಾಯಿಸಲು ಗ್ರಾಹಕ ಬಯಸಿದರೆ, ಎಸ್‌ಬಿಐನಲ್ಲಿ (300 ರೂಪಾಯಿ + ಜಿಎಸ್‌ಟಿ ಶುಲ್ಕ )ಪಾವತಿಸಬೇಕಾಗುತ್ತದೆ. ಇದಲ್ಲದೆ ಪಿನ್ ರಿಜನರೇಷನ್ ಗೆ ಶುಲ್ಕ( 50 ರೂಪಾಯಿ + ಜಿಎಸ್‌ಟಿ ಮೊತ್ತ) ಪಾವತಿಸಬೇಕಾಗುತ್ತದೆ.
ಇದೇ ರೀತಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿಯೂ ಶುಲ್ಕದಲ್ಲಿ ಬದಲಾವಣೆಗಳಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಕಾರ್ಡ್‌ನ ವಿಮಾ ಶುಲ್ಕ ಗ್ರಾಹಕ 150 ರೂಪಾಯಿ ಪಾವತಿಸಬೇಕಾಗುತ್ತದೆ. ವಾರ್ಷಿಕ ನಿರ್ವಹಣಾ ಶುಲ್ಕ 15೦ ರಿಂದ 500 ರೂಪಾಯಿ ಪಾವತಿಸಬೇಕಾಗುತ್ತದೆ. ಇದಲ್ಲದೆ ಗ್ರಾಹಕ ಕಾರ್ಡ್ ಬದಲಾಯಿಸಲು ಇಚ್ಛಿಸಿದರೆ 150 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಹಾಗೂ ಪಿನ್ ರಿಜನರೇಷನ್ ಶುಲ್ಕ 50 ರೂಪಾಯಿ ಪಾವತಿ ಮಾಡಬೇಕು.
ಗ್ರಾಹಕರು ಪ್ರತಿ ತಿಂಗಳು ಎಟಿಎಂ ವಹಿವಾಟುಗಳನ್ನು ಉಚಿತವಾಗಿ 5 ಬಾರಿ ನಡೆಸಬಹುದು. ತನ್ನ ಖಾತೆ ಇರುವ ಬ್ಯಾಂಕ್ ಹೊರತು ಪಡಿಸಿ ಬೇರೆ ಬ್ಯಾಂಕ್‌ನ ಎಟಿಎಂನಿಂದ ವಿತ್‌ಡ್ರಾ ಮಾಡುವುದಾದರೆ ಮಾಸಿಕವಾಗಿ ಮೂರು ಉಚಿತ ವಹಿವಾಟಿಗೆ ಅವಕಾಶವಿದೆ. ಗ್ರಾಹಕರು ತಮ್ಮದೇ ಆದ ಬ್ಯಾಂಕ್ ಎಟಿಎಂನಿಂ ಐದು ಬಾರಿ ಉಚಿತವಾಗಿ ವಹಿವಾಟು ನಡೆಸಬಹುದು. ಬೇರೆ ಬ್ಯಾಂಕುಗಳ ಎಟಿಎಂನಲ್ಲಿ ವಹಿವಾಟು ಮಾಡುವ ಗ್ರಾಹಕರು, ಮೆಟ್ರೋ ನಗರದಲ್ಲಿ ಮೂರು ಬಾರಿ, ಮೆಟ್ರೋಯೇತರ ನಗರದಲ್ಲಿ ಐದು ಬಾರಿ ವಹಿವಾಟು ನಡೆಸಬಹುದು. ನಿಗದಿ ಪಡಿಸಿದ ಉಚಿತ ಸೇವಾ ಮಿತಿಯನ್ನು ಮೀರಿದರೆ, ಆಗಸ್ಟ್ 14, 2014 ಸುತ್ತೋಲೆಯ ಪ್ರಕಾರ ಗ್ರಾಹಕರು ದಂಡದ ರೂಪದಲ್ಲಿ 20 ರೂಪಾಯಿಯನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಈಗ ಬ್ಯಾಂಕುಗಳಿಗೆ ಹೆಚ್ಚಿನ ವಿನಿಮಯ ಶುಲ್ಕವನ್ನು ಸರಿದೂಗಿಸುವ ನಿಟ್ಟಿನಲ್ಲಿ ಮಾಸಿಕ ಮಿತಿಗಿಂತ ಅಧಿಕ ವಹಿವಾಟು ನಡೆಸಿದರೆ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ.