Instagram Bug: ಇನ್ಸ್ಟಾಗ್ರಾಂ ನ ಬಹುದೊಡ್ಡ ತಪ್ಪನ್ನು ಕಂಡುಹಿಡಿದ ಭಾರತದ ವಿದ್ಯಾರ್ಥಿ | ಭಾರೀ ಮೊತ್ತದ ಬಹುಮಾನ

Share the Article

ಇತ್ತಿಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು, ವಯಸ್ಸಾದವರು ಕೂಡ ಮೊಬೈಲ್ ಎಂಬ ಜಾದೂಗಾರನ ಮೋಡಿಗೆ ಸೆರೆಯಗಿದ್ದಾರೆ. ಅದರಲ್ಲೂ ಚಿಕ್ಕ ಮಕ್ಕಳಂತೂ ರೀಲ್ಸ್, ಫೋಟೋ ಎಡಿಟಿಂಗ್, ಯೂಟ್ಯೂಬ್ ಎಲ್ಲದರಲ್ಲೂ ತೊಡಗಿಸಿಕೊಂಡು ದೊಡ್ಡವರಿಗಿಂತ ಹೆಚ್ಚಾಗಿ ಮೊಬೈಲ್ ಬಳಕೆಯ ಬಗ್ಗೆ ತಿಳಿದಿರುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು.

ನಾವೆಲ್ಲರೂ ಬಳಸುವ ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ ನಲ್ಲಿದ್ದ ತಾಂತ್ರಿಕ ದೋಷವನ್ನು ಜೈಪುರದ ಯುವಕ ಕಂಡು ಹಿಡಿದು , ಈ ಸಾಧನೆಗೆ 38 ಲಕ್ಷ ಬಹುಮಾನ ಸ್ವೀಕರಿಸಿದ್ದಾನೆ.

ನೀರಜ್ ಶರ್ಮಾ ಎಂಬ ವಿದ್ಯಾರ್ಥಿ, ಇನ್‌ಸ್ಟಾಗ್ರಾಮ್‌ನ ಬಗ್ ಪತ್ತೆ ಹಚ್ಚಿದ್ದಾನೆ. ಮೆಟಾ ಒಡೆತನದ ಫೇಸ್‌ಬುಕ್‌ನ ಇನ್‌ಸ್ಟಾಗ್ರಾಮ್‌ ಆ್ಯಪ್ ನಲ್ಲಿ ಬಗ್ ಕಾಣಿಸಿಕೊಂಡು, ಅದರಿಂದಾಗಿ ಯಾವುದೇ ಖಾತೆಯ ಥಂಬ್‌ನೇಲ್ ಅನ್ನು ಸುಲಭವಾಗಿ ಬದಲಿಸುವ ಜೊತೆಗೆ ಪಾಸ್ವರ್ಡ್ ಎಷ್ಟೇ ಸ್ಟ್ರಾಂಗ್ ಆಗಿದ್ದರೂ ಮೀಡಿಯಾ ಐಡಿಯೊಂದಿದ್ದರೆ ಆರಾಮವಾಗಿ ಹ್ಯಾಕ್ ಮಾಡಲು ಸಾಧ್ಯವಾಗುತ್ತಿತ್ತು.

ಈ ತಾಂತ್ರಿಕ ದೋಷ ಕಂಡು ಹಿಡಿಯದೆ ಇದ್ದಿದ್ದರೆ ಫೋಟೋ ಷೇರಿಂಗ್ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನ ಕೋಟ್ಯಂತರ ಖಾತೆಗಳು ಹ್ಯಾಕರ್ಸ್‌ಗೆ ಹ್ಯಾಕಿಂಗ್ ಮಾಡಲು ಅವಕಾಶ ಕಲ್ಪಿಸಿದಂತಾಗುತ್ತಿತ್ತು. ಅಲ್ಲದೇ ಹ್ಯಾಕರ್ಸ್‌ಗೆ ಯಾವುದೇ ಬಳಕೆದಾರರ ಥಂಬ್‌ನೇಲ್ ಸುಲಭವಾಗಿ ಬದಲಿಸಲು ಅನುವು ಮಾಡಿಕೊಡುತ್ತಿತ್ತು.

ಕಳೆದ ಡಿಸೆಂಬರ್‌ನಲ್ಲಿ ನೀರಜ್ ರವರ ಇನ್‌ಸ್ಟಾ ಖಾತೆಯಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಹಾಗಾಗಿ ಸಮಸ್ಯೆ ಎಲ್ಲಾಗಿದೆ ಎಂದು ಹುಡುಕಲು ಆರಂಭಿಸಿದ್ದರಿಂದ ಅಂತಿಮವಾಗಿ ಜನವರಿ 31ರಂದು ತಾಂತ್ರಿಕ ಲೋಪ ಇರುವುದನ್ನು ಪತ್ತೆ ಹಚ್ಚಿ ಬಳಿಕ ಇದಕ್ಕೆ ಸಂಬಂಧಿಸಿದ ವರದಿಯನ್ನು ಶರ್ಮಾ ಫೇಸ್‌ಬುಕ್‌ಗೆ ಕಳುಹಿಸಿದ್ದಾರೆ. ಈ ತಾಂತ್ರಿಕ ಲೋಪವನ್ನು ಪತ್ತೆ ಹಚ್ಚಿದ ಶರ್ಮಾ ಅವರಿಗೆ ಇನ್‌ಸ್ಟಾಗ್ರಾಮ್ ಬಹುಮಾನವಾಗಿ 38 ಲಕ್ಷ ರೂ. ನೀಡಿದೆ. ಈ ಅನ್ವೇಷಣೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ .

Leave A Reply