ಪತ್ನಿಯ ಮೃತದೇಹವನ್ನು ಮಡಿಲಲ್ಲಿಟ್ಟುಕೊಂಡು ರೈಲಿನಲ್ಲಿ ಪ್ರಯಾಣ ಬೆಳೆಸಿದ ಪತಿ!

ಕೆಲವೊಂದು ಸನ್ನಿವೇಶಗಳು ಊಹಿಸಲು ಅಸಾಧ್ಯವಾಗಿರುತ್ತದೆ. ಅದರಲ್ಲಿ ಮನುಷ್ಯನ ಜೀವ ಕೂಡ ಒಂದು. ಎಂದು ಪ್ರಾಣ ಹೋಗುತ್ತದೆ ಹೇಳಲು ಅಸಾಧ್ಯ. ಅದರಂತೆ ಇಲ್ಲೊಂದು ಕಡೆ ಅನಾರೋಗ್ಯದಿಂದಿದ್ದ ಪತ್ನಿಯನ್ನು ರೈಲಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಅರ್ಧ ದಾರಿಯಲ್ಲೇ ಉಸಿರು ನಿಂತಿದೆ. ಆದ್ರೆ, ಪತಿ ಮಾತ್ರ ಯಾರಿಗೂ ತಿಳಿಸದೇ ತನ್ನ ಮಡಿಲಿನಲ್ಲಿ ಜೋಪಾನವಾಗಿ ಇರಿಸಿಕೊಂಡು ಪ್ರಯಾಣ ಬೆಳೆಸಿದ್ದಾನೆ.

 

ನವೀನ್ ಅರ್ವಾಲ್ ಜಿಲ್ಲೆಯ ನಿವಾಸಿ ಊರ್ಮಿಳಾ ವಿವಾಹವಾಗಿದ್ದು, ನವೀನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರೆ, ಆತನ ಹೆಂಡತಿ ಮಕ್ಕಳಿಗೆ ಟ್ಯೂಷನ್ ಕೊಟ್ಟು ಆತನಿಗೆ ಸಹಾಯ ಮಾಡುತ್ತಿದ್ದಳು. ನವೀನ್ ಪತ್ನಿ ಹೃದ್ರೋಗದಿಂದ ಬಳಲುತ್ತಿದ್ದು, ಅದಕ್ಕಾಗಿ ಆಕೆಯನ್ನ ಚಿಕಿತ್ಸೆಗಾಗಿ ಲುಧಿಯಾನಕ್ಕೆ ಕರೆದೊಯ್ದಿದ್ದ. ಶುಕ್ರವಾರ ರಾತ್ರಿ ರೈಲಿನಿಂದ ಹಿಂತಿರುಗುತ್ತಿದ್ದ ವೇಳೆ ಪತ್ನಿಯ ಆರೋಗ್ಯ ಹದಗೆಟ್ಟು ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ.

ಈ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದ್ದು, ನವೀನ್ ತನ್ನ ಪತ್ನಿ ಊರ್ಮಿಳಾನ್ನ ಚಿಕಿತ್ಸೆಗಾಗಿ ಲೂಧಿಯಾನಕ್ಕೆ ಕರೆದುಕೊಂಡು ಹೋಗಿದ್ದ. ಇದಾದ ನಂತರ ಲೂಧಿಯಾನದಿಂದ ಬಿಹಾರಕ್ಕೆ ಮರಳಿ ರೈಲು ಹತ್ತಿದ್ದಾನೆ. ಮಾಹಿತಿಯ ಪ್ರಕಾರ, ರೈಲು ಪ್ರಾರಂಭವಾದ ಸ್ವಲ್ಪ ಸಮಯದ ನಂತ್ರ ಆತನ ಪತ್ನಿಯ ಸ್ಥಿತಿ ಹದಗೆಟ್ಟಿದ್ದು, ಆಕೆ ತೀರಿಕೊಂಡಿದ್ದಾಳೆ. ರೈಲಿನಿಂದ ಕೆಳಗೆ ಇಳಿಸಬಹುದು ಎಂಬ ಕಾರಣಕ್ಕೆ ಪತ್ನಿಯ ಸಾವಿನ ಸುದ್ದಿಯನ್ನೂ ಪತಿ ಯಾರಿಗೂ ತಿಳಿಸಲಿಲ್ಲ.

ಅಲ್ಲದೆ, ಪತ್ನಿಯ ಮೃತದೇಹವನ್ನ ಮಡಿಲಲ್ಲಿಟ್ಟುಕೊಂಡು ಆತ ಬರೋಬ್ಬರಿ 500 ಕಿ.ಮೀ. ಕ್ರಮಿಸಿದ್ದಾನೆ. ಈ ವೇಳೆ ಕೆಲ ಪ್ರಯಾಣಿಕರಿಗೆ ಅನುಮಾನ ಬಂದಿದೆ. ಹೀಗಾಗ ಯಾರೋ ಜಿಆರ್‌ಪಿಗೆ ತಿಳಿಸಿದ್ದಾರೆ. ನಂತರ ರೈಲು ಶಹಜಹಾನ್‌ಪುರ ತಲುಪಿದಾಗ ಆತ ಮತ್ತು ಆತನ ಪತ್ನಿಯ ಮೃತದೇಹಗಳನ್ನ ಕೆಳಗಿಳಿಸಲಾಗಿದೆ. ಮಹಿಳೆಯ ಶವವನ್ನ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Leave A Reply

Your email address will not be published.