ಎಲ್ಲಾ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟಿರುವ ಗಡಿಯಾರ ಸಮಯ 10:10 ತೋರಿಸುತ್ತದೆ ಯಾಕೆ? | ವಿಶೇಷ ಮಾಹಿತಿ ಇಲ್ಲಿದೆ

ಸಾಮಾನ್ಯವಾಗಿ ಚಿಕ್ಕ ಅಂಗಡಿ ಆಗಿರಲಿ ಅಥವಾ ದೊಡ್ಡ ಅಂಗಡಿ ಆಗಿರಲಿ ಗಡಿಯಾರದ ಮುಳ್ಳುಗಳು ಹತ್ತು ಹತ್ತಕ್ಕೆ ನಿಂತಿರುತ್ತದೆ. ಇದು ಜನರಲ್ಲಿ ಒಂದಷ್ಟು ಪಂಗಡಗಳು ಗಮನಿಸದೇ ಇರಬಹುದು. ಒಂದಷ್ಟು ಜನ ಗಮನಿಸಿ ಅನುಮಾನದಲ್ಲಿ ಇರಬಹುದು. ಇದಕ್ಕೆ ಉತ್ತರ ಇಲ್ಲಿದೆ ನೋಡಿ.

 


ಟೈಮಿಂಗ್ಸ್ ಮತ್ತು ರೋಲೆಕ್ಸ್ ನಂತಹ ಹಿಂದಿನ ಪ್ರಸಿದ್ಧಿ ಕಂಪನಿಗಳು ತಮ್ಮ ಗಡಿಯಾರದ ಸಮಯವನ್ನು 8.20 ಕ್ಕೇ ಇಡುತ್ತಿದ್ದವು. ಇದರಿಂದಾಗಿ ತಮ್ಮ ಕಂಪನಿಯ ಹೆಸರು ಗ್ರಾಹಕರಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ.
10.10 ರ ಬದಲಾಗಿ ಅದಕ್ಕೆ ವಿರುದ್ಧವಾದ 8.20 ರ ಸಮಯವನ್ನು ಗಡಿಯಾರದಲ್ಲಿ ನಿಲ್ಲಿಸಿದರೆ ಅದು ಬೇಸರದ ಮುಖಭಾವನೆಯನ್ನು ಸೂಚಿಸಿದಂತೆ. ಬಹಳಷ್ಟು ಜನರ ಮುಂದೆ ಬೇರೆ ಬೇರೆ ಸಮಯ ತೋರುವ ಗಡಿಯಾರ ಹಿಡಿದು ತೋರಿಸಿದಾಗ ಹೆಚ್ಚು ಆಕರ್ಷಕವಾಗಿದೆ ಎಂದು ಹೇಳಿದರಂತೆ.


8.20 ನ್ನು ನಕರಾತ್ಮಕ ಸಂಕೇತವಾಗಿದೆ ಎಂದು ಪರಿಗಣಿಸಿದ ಕಂಪೆನಿಗಳು ಇದನ್ನು ಬದಲಾಯಿಸಲು ನಿರ್ಧರಿಸಿದವು ಮತ್ತು ಅದರ ಬದಲಾಗಿ 10.10 ರ ಸಮಯವನ್ನು ಅದರ ರಿವರ್ಸ್ ಆಗಿ ಅರಿಸಿಕೊಂಡವು. ಗಮನಿಸಿದರೆ ನಗುವ ಗುರುತು ಕಂಡಂತೆ ಆಗುತ್ತದೆ.
ಸಂತೋಷ ಮತ್ತು ವಿಜಯದ ಸಂಕೇತವನ್ನು ಸೂಚಿಸುತ್ತದೆ ಎಂಬ ಕಾರಣಕ್ಕಾಗಿ ಎಲ್ಲಾ ಅಂಗಡಿಗಳಲ್ಲೂ ಗಡಿಯಾರ ಹತ್ತು ಹತ್ತರಲ್ಲಿ ಸಾಮಾನ್ಯ ಇರೋದು ಕಾಣಬಹುದು.

Leave A Reply

Your email address will not be published.