Voter Epic Card : ಪುತ್ತೂರು : ಸಾರ್ವಜನಿಕರೇ ಗಮನಿಸಿ, ಹಳೆ ಮತದಾರರ ಗುರುತಿನ ಚೀಟಿ ಬದಲಾಯಿಸಲು ಸೂಚನೆ

Share the Article

ಪುತ್ತೂರು : ತಾಲೂಕಿನಲ್ಲಿ ಸಹಾಯಕ ನೋಂದವಣಾಧಿಕಾರಿಯವರು ತಮ್ಮ ಪ್ರಕಟಣೆಯಲ್ಲಿ ಮತದಾರರ ಗುರುತಿನ ಚೀಟಿ( Voter Epic Card) ಕೆಟಿ (KT) ಯಿಂದ ಪ್ರಾರಂಭವಾಗುವ ನಂಬರ್ ಇರುವ ಚೀಟಿಯನ್ನು ಬದಲಾಯಿಸಬೇಕೆಂದು ಸಹಾಯಕ ಮತದಾರರ ನೊಂದಣಾಧಿಕಾರಿಯಾಗಿರುವಂತಹ ನಿಸರ್ಗಪ್ರಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಗಾಗಿ ಸಾರ್ವಜನಿಕರು ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಯವರನ್ನು ಸಂಪರ್ಕಿಸಿ, ಹೊಸ ನಂಬರ್ ಪಡೆದುಕೊಳ್ಳ ಬೇಕೆಂದು ಹೇಳಲಾಗಿದೆ.

ಹಳೆಯ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದಂತೆ, KT ಯಿಂದ ಪ್ರಾರಂಭವಾಗುವ
ಮತದಾರರ ಗುರುತಿನ ಚೀಟಿ ಇರುವವರು ತಕ್ಷಣವೇ ತಮ್ಮ ಹತ್ತಿರದ ಮತಗಟ್ಟೆಯ ಬೂತ್ ಮಟ್ಟದ ಅಧಿಕಾರಿಯವರನ್ನು ಭೇಟಿ ಮಾಡಿ ಹೊಸ ನಂಬರ್ ನ್ನು ಪಡೆದುಕೊಳ್ಳುವುದು. ಹಾಗೂ ಅಲ್ಲಿಯೇ ಗುರುತು ಚೀಟಿಗೆ ಆಧಾರ್ ಅಥವಾ ಇತರ ಹನ್ನೊಂದು ದಾಖಲೆಗಳನ್ನು ಜೋಡಣೆ ಮಾಡಬಹುದು ಹಾಗೂ ಫೊಟೋ ನೀಡಿ ತಿದ್ದುಪಡಿ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಇದಕ್ಕಾಗಿ ಮೊಬೈಲ್ ನಂಬರ್, ಹಳೆಯ ವೋಟರ್ ಐ ಡಿ, ಆಧಾರ್ ನಂಬರ್ ಮತ್ತು ಒಂದು ಇತ್ತೀಚಿನ ಫೊಟೋವನ್ನು ಬೂತ್ ಮಟ್ಟದ ಅಧಿಕಾರಿಯವರಿಗೆ ನೀಡುವುದು ಕಡ್ಡಾಯ.

Leave A Reply