ಮದುವೆಯಾಗಲು ನಿರಾಕರಿಸಿದಾಕೆಯನ್ನು ಗುಂಡಿಕ್ಕಿ ಕೊಂದದಲ್ಲದೆ ತಾನೂ ಸ್ವತಃ ಗುಂಡು ಹಾರಿಸಿಕೊಂಡ ಯುವಕ!

ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಯುವಕನೋರ್ವ ಆಕೆಯ ಮನೆ ಬಳಿಯೇ ಕಾದುಕೂತು ಗುಂಡು ಹಾರಿಸಿ ಕೊಂದದ್ದಲ್ಲದೆ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

 

ಅಮಾನಿ ಅಲ್ ಜಝಾರ್ ಎಂಬ 19 ವರ್ಷದ ವಿಶ್ವವಿದ್ಯಾನಿಲಯ ವಿದ್ಯಾರ್ಥಿನಿ ಯನ್ನು ಅಹ್ಮದ್ ಫಾತಿ ಒಮೇರಾ ಎಂಬ ವ್ಯಕ್ತಿ ಗುಂಡಿಕ್ಕಿ ಕೊಲೆ ಮಾಡಿದ್ದಾನೆ.

ಅಹ್ಮದ್ ಫಾತಿ ಒಮೇರಾ, ಕೆಟ್ಟ ನಡತೆ ಮತ್ತು ಮಾದಕ ವ್ಯಸನಿಯಾಗಿದ್ದರಿಂದ, ಅವನ ಮದುವೆಯ ಪ್ರಸ್ತಾಪವನ್ನು ಅಮಾನಿ ಕುಟುಂಬದಿಂದ ತಿರಸ್ಕರಿಸಿದ್ದರು. ಇದರಿಂದ ಕೆರಳಿದ ಅಹ್ಮದ್ ಅವಳನ್ನು ಕೊಲ್ಲಲು ನಿರ್ಧರಿಸಿ, ಅಮಾನಿ ಮನೆಯ ಬಳಿ ಅವಿತು ಕೂತು ಆಕೆ ಮನೆಯಿಂದ ಹೊರ ಹೋಗುತ್ತಿದ್ದಾಗ ಹಿಂದಿನಿಂದ ಗುಂಡು ಹಾರಿಸಿ ಓಡಿ ಹೋಗಿದ್ದಾನೆ.

ಬಳಿಕ ಅಮಾನಿಯನ್ನು ಕೊಲ್ಲಲು ಬಳಸಿದ ಅದೇ ಬಂದೂಕಿನಿಂದ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆ ಈಜಿಪ್ಟ್ ನಲ್ಲಿ ನಡೆದಿದ್ದು, ಅಮಾನಿ ದೈಹಿಕ ಶಿಕ್ಷಣ ವಿಭಾಗದಲ್ಲಿ 3ನೇ ವರ್ಷ ವ್ಯಾಸಂಗ ಮಾಡುತ್ತಿದ್ದು, ಕೊಲೆಗಾರ ಮಧ್ಯಮ ವಿದ್ಯಾರ್ಹತೆ ಹೊಂದಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಪಬ್ಲಿಕ್ ಪ್ರಾಸಿಕ್ಯೂಷನ್ ತನಿಖೆಯನ್ನು ವಹಿಸಿಕೊಂಡಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

Leave A Reply

Your email address will not be published.