ಪ್ರವಾಹದಿಂದ ರಕ್ಷಣೆ ಪಡೆಯಲು ಬೋಟ್ ಮೂಲಕ ತೆರಳುತ್ತಿದ್ದವರಿಗೆ ದುರದೃಷ್ಟವಾಗಿ ಬಂದ ಹಾವು!!
ಪ್ರವಾಹದಿಂದ ತಮ್ಮನ್ನು ತಾವು ರಕ್ಷಿಸಲು ಬೇರೊಂದು ಕಡೆಗೆ ಸ್ಥಳಾಂತರಗೊಳ್ಳುತ್ತಿದ್ದವರಿಗೆ ಹಾವು ದುರದೃಷ್ಟವಾಗಿ ಅಡ್ಡ ನಿಂತಿದೆ. ಹೌದು. ಒಂದು ಹಾವಿನಿಂದಾಗಿ 17 ಜನರಿದ್ದ ಬೋಟ್ ಪಲ್ಟಿಯಾಗಿ ಆರು ಜನ ಮೃತ ಪಟ್ಟಿರುವ ಘಟನೆ ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯ ಅಥಾಟಾ ಗ್ರಾಮದಲ್ಲಿ ಈ ದುರಂತ ನಡೆದಿದೆ.
ದೋಣಿಯಲ್ಲಿ ಹಾವು ಕಾಣಿಸಿಕೊಂಡಿದ್ದು, ದೋಣಿಯಲ್ಲಿ ಇದ್ದವರು ಗಾಬರಿಗೊಂಡು ನದಿಗೆ ಹಾರಿಬಿಟ್ಟಿದ್ದಾರೆ. ಈ ಸಮಯದಲ್ಲಿ ಸಮತೋಲನ ತಪ್ಪಿ ದೋಣಿ ಪಲ್ಟಿಯಾಗಿ ಈ ಅವಘಡ ಸಂಭವಿಸಿದೆ.
ಈ ದೋಣಿಯಲ್ಲಿ 17 ಜನರಿದ್ದರು. ಅವರಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. 10 ಮಂದಿಯನ್ನು ರಕ್ಷಿಸಲಾಗಿದೆ. 25 ಜನರು ಆರಾಮವಾಗಿ ಕುಳಿತುಕೊಳ್ಳುವ ದೋಣಿ ಇದಾಗಿದೆ. ದೋಣಿಯಲ್ಲಿ 17 ಮಂದಿ ಇದ್ದರೂ ಈ ಘಟನೆ ಸಂಭವಿಸಿದೆ. ಒಂದು ಹೆಣ್ಣು ಮಗು ಮಾತ್ರ ಇದುವರೆಗೆ ಪತ್ತೆಯಾಗಲಿಲ್ಲ. ಉಳಿದವರ ಮೃತದೇಹ ಸಿಕ್ಕಿವೆ. ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಉತ್ತರ ಪ್ರದೇಶದ ಹಲವು ಭಾಗಗಳಲ್ಲಿಯೂ ಪ್ರವಾಹದ ಸ್ಥಿತಿ ಉಂಟಾಗಿದೆ. ಇದೇ ಕಾರಣಕ್ಕೆ ಸಂತ್ರಸ್ತರನ್ನು ಬೋಟ್ಗಳ ಮೂಲಕ ಸ್ಥಳಾಂತರ ಮಾಡಲಾಗುತ್ತಿದೆ. ದುರದೃಷ್ಟವಶಾತ್ ಸ್ಥಳಾಂತರ ಕಾರ್ಯ ಕೈಗೊಂಡಿದ್ದ ದೋಣಿ ಗಂಗಾ ನದಿಯಲ್ಲಿ ಮುಳುಗಿ ಆರು ಜನರು ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವಾಪಸ್ ಹೋದ ಕೆಲವೇ ಗಂಟೆಗಳಲ್ಲಿ ಈ ಅನಾಹುತ ಸಂಭವಿಸಿದೆ. ಘಟನೆ ನಡೆದ ಬಳಿಕ ಪುನಃ ಯೋಗಿ ಆದಿತ್ಯನಾಥ ಹಾಗೂ ಘಾಜಿಪುರ ಜಿಲ್ಲಾಧಿಕಾರಿ ಮಂಗಳಾ ಪ್ರಸಾದ್ ಸಿಂಗ್ ಸ್ಥಳಕ್ಕೆ ಧಾವಿಸಿದರು.