ಶಾಪಿಂಗ್ ಇನ್ಮುಂದೆ ತುಂಬಾ ಸರಳ | ವಾಟ್ಸಪ್ ಮೂಲಕ ಎಲ್ಲಾ ಮನೆಬಾಗಿಲಿಗೆ | ಹೇಗೆ ಅಂತೀರಾ ? ಇಲ್ಲಿದೆ ಸಂಪೂರ್ಣ ವಿವರ

ಶಾಪಿಂಗ್ ಎಂದ ಕೂಡಲೇ ಗ್ರಾಹಕರಿಗೆ ತಟ್ಟನೆ ನೆನಪಾಗುವುದು ಅಮೆಜಾನ್ ಇಲ್ಲವೇ ಫ್ಲಿಪ್ ಕಾರ್ಟ್. ಇದೀಗ ಮೀಶೋ ಕೂಡ ಟ್ರೆಂಡ್ ನಲ್ಲಿದೆ. ಟೆಲಿಕಾಂ ಅಧಿಪತಿಯಾಗಿ ರಾರಾಜಿಸುತ್ತಿರುವ ಜಿಯೋ ಮತ್ತು ಮೆಟಾ ಫ್ಲಾಟ್ ಫಾರ್ಮ್ ಗಳು ಹೊಸ ಯೋಜನೆಯನ್ನು ಜನರಿಗೆ ತಲುಪಿಸುವ ತಯಾರಿಯಲ್ಲಿದೆ. ಮೆಟಾ ಮತ್ತು ಜಿಯೋ ಪ್ಲಾಟ್ ಫಾರ್ಮ್ಗಳು ಇಂದು ಜಂಟಿಯಾಗಿ ವಾಟ್ಸಾಪ್ ನಲ್ಲಿ ಮೊಟ್ಟ ಮೊದಲ ಎಂಡ್- ಟು- ಎಂಡ್ ಶಾಪಿಂಗ್ ಅನುಭವವನ್ನು ಪ್ರಾರಂಭಿಸುವತ್ತ ಹೆಜ್ಜೆ ಇಡಲು ತೀರ್ಮಾನಿಸಿದೆ. ಇನ್ನು ಮುಂದೆ ಗ್ರಾಹಕರು ತಮ್ಮ ವಾಟ್ಸಾಪ್ ಚ್ಯಾಟ್ ನಲ್ಲಿಯೇ ಜಿಯೋ ಮಾರ್ಟ್ ನಿಂದ ಶಾಪಿಂಗ್ ಮಾಡಬಹುದು.

 

ಎಡಬಿಡದೆ ದುಡಿಯುವ ವೃತ್ತಿ ನಿರತರಿಂದ ಹಿಡಿದು ಪ್ರತಿಯೊಬ್ಬ ವಾಟ್ಸಾಪ್ ಬಳಕೆದಾರರಿಗೂ ಇದು ನೆರವಾಗಲಿದೆ. ವಾಟ್ಸಾಪ್ ಮೂಲಕ ವ್ಯವಹಾರ ಮಾಡಲು ಬಯಸುವ ಬಳಕೆದಾರರಿಗೂ ಇದೊಂದು ಸಿಹಿ ಸುದ್ದಿ. ಭವಿಷ್ಯದಲ್ಲಿ ಅತಿ ಶೀಘ್ರದಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಮೂಲಕ ಆನ್ ಲೈನ್ ಬಿಸಿನೆಸ್ ಮಾಡಬಹುದು. ಜಾಗತಿಕವಾಗಿ ಪ್ರಥಮ ಬಾರಿಗೆ ಹಿಂದೆಂದೂ ಆನ್ ಲೈನ್ ಶಾಪಿಂಗ್ ಮಾಡದೆ ಇರುವವರು ಕೂಡ ಇದರ ಸದುಪಯೋಗ ಪಡಿಸಿಕೊಳ್ಳಬಹುದು.

ಜಿಯೋ ಮಾರ್ಟ್ ನ ಸಂಪೂರ್ಣ ದಿನಸಿ ಕ್ಯಾಟಲಾಗ್ ಅನ್ನು ಗ್ರಾಹಕರ ಅವಶ್ಯಕತೆ ತಕ್ಕಂತೆ , ಮನಸೋ ಇಚ್ಛೆ ಬ್ರೌಸ್ ಮಾಡಲು, ತಮ್ಮ ವಾಟ್ಸಾಪ್ ಚಾಟ್ ಮಾಡುವುದರ ಜೊತೆಗೆ ಬೇಕಾದ ಐಟಂಗಳನ್ನು ಹುಡುಕಿ ಪಡೆದುಕೊಳ್ಳುವ ಅವಕಾಶ ವನ್ನು ಕಲ್ಪಿಸಲಿದೆ. ಕಾರ್ಟ್ ಗೆ ಐಟಂಗಳನ್ನು ಸೇರಿಸಲು, ಖರೀದಿಯನ್ನು ಪೂರ್ಣಗೊಳಿಸುವ ವ್ಯವಸ್ಥೆ ಗಳನ್ನೂ ಈಗಾಗಲೇ ಸಕ್ರಿಯಗೊಳಿಸಲಾಗುತ್ತಿದೆ.

ಭಾರತದ ಡಿಜಿಟಲ್ ರೂಪಾಂತರವನ್ನು ಚುರುಕು ಗೊಳಿಸುತ್ತಿದೆ. ಜನರು ಎಲ್ಲ ರೀತಿಯ ವ್ಯವಹಾರಗಳಿಗೆ ಹೊಸ ರೀತಿಯಲ್ಲಿ ಸಂಪರ್ಕ ಸಾಧಿಸಲು ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ದೇಶವನ್ನು ಮುನ್ನಡೆಸುವುದರ ಜೊತೆಜೊತೆಗೆ ಪ್ರಗತಿಯನ್ನು ಉತ್ತೇಜಿಸುವ ಉದ್ದೇಶದಿಂದ ಮೆಟಾ ಮತ್ತು ಜಿಯೋ ಫ್ಲಾಟ್ ಫಾರ್ಮ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಭಾಗವಾಗಿದೆ. ದೇಶದ ಪ್ರಗತಿಯಲ್ಲೂ ಮಹತ್ತರ ಪಾತ್ರ ವಹಸಲಿದೆ. ಇದೊಂದು ಶಾಪಿಂಗ್ ಕ್ಷೇತ್ರದಲ್ಲಿ ಕ್ರಾಂತಿಯಾಗಿ ಗ್ರಾಹಕರ ಸಂಪರ್ಕ ಕಲ್ಪಿಸುವುದಲ್ಲದೆ ಸರಿಸಾಟಿಯಿಲ್ಲದ ಸರಳತೆ ಹಾಗೂ ಅನುಕೂಲತೆಯನ್ನು ನೀಡಲಿದೆ.

ಭಾರತವನ್ನು ವಿಶ್ವದ ಪ್ರಮುಖ ಡಿಜಿಟಲ್ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿ, ಡಿಜಿಟಲ್ ಸಮಾಜವಾ ಗಿ ಮುನ್ನಡೆಸುವುದು ನಮ್ಮ ಗುರಿಯಾಗಿದೆ. 2020ರಲ್ಲಿ ಜಿಯೋ ಫ್ಲಾಟ್ ಫಾರ್ಮ್ಸ್ ಮತ್ತು ಮೆಟಾ ತಮ್ಮ ಪಾಲುದಾರಿಕೆಯನ್ನು ಘೋಷಿಸಿದಾಗ, ಮಾರ್ಕ್ ಮತ್ತು ನಾನು ಹೆಚ್ಚು ಜನರು ಮತ್ತು ವ್ಯವಹಾರಗಳನ್ನು ಆನ್ಲೈನ್ ಗೆ ತರುವ ಮತ್ತು ಪ್ರತಿಯೊಬ್ಬರ ದೈನಂದಿನ ಜೀವನಕ್ಕೆ ಅನುಕೂಲವಾಗು ವಂತಹ ಹೊಸ ಯೋಜನೆಯನ್ನು ರೂಸಿಕೊಳ್ಳುವ ಕುರಿತಾಗಿ ಚರ್ಚಿಸಿದ್ದೇವೆ.
ವಾಟ್ಸಾಪ್ ನಲ್ಲಿನ ಜಿಯೋ ಮಾರ್ಟ್ ನೊಂದಿಗಿನ ಪ್ರಪ್ರಥ ಮ ಎಂಡ್- ಟು- ಎಂಡ್ ಶಾಪಿಂಗ್ ಅನುಭವವು ನಾವು ಅಭಿವೃದ್ಧಿ ಪಡಿಸಲು ಹೊರಟಿರುವ ನವೀನ ಗ್ರಾಹಕ ಉಪಯೋಗಿ ಯೋಜನೆಯ ದೃಷ್ಟಾಂತವಾಗಲಿದೆ ಜೊತೆಗೆ ಲಕ್ಷಾಂತರ ಭಾರತೀಯರಿಗೆ ಶಾಪಿಂಗ್ ಸರಳ ಮತ್ತು ಅನುಕೂಲಕರವಾದ ಮಾರ್ಗಗಳನ್ನು ಸಕ್ರಿಯಗೊಳಿಸುವ ನಮ್ಮ ಬದ್ಧತೆಯನ್ನು ಹೆಚ್ಚಿಸುತ್ತದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ವ್ಯವಸ್ಥಾಪಕ ರಾದ ಮುಖೇಶ್ ಅಂಬಾನಿ ಯವರು ತಮ್ಮ ಹೊಸ ಅನುಭವದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತದಲ್ಲಿ ಜಿಯೋ ಮಾರ್ಟ್ ನೊಂದಿಗೆ ನಮ್ಮ ಪಾಲುದಾರಿಕೆಯನ್ನು ಆರಂಭಿಸಲು ಉತ್ಸುಕರಾಗಿದ್ದೇವೆ. ಜನರು ಕೇವಲ ತಮ್ಮ ಚಾಟ್ ನಲ್ಲಿಯೇ ಜಿಯೋ ಮಾರ್ಟ್ ನಿಂದ ದಿನಸಿಗಳನ್ನು ಖರೀದಿಸಬಹುದು. ವಾಟ್ಸಾಪ್ ನಿಂದ ಎಂಡ್ ಟು ಎಂಡ್ ಶಾಪಿಂಗ್ ಅನುಭವವನ್ನು ಜನರು ಪಡೆದುಕೊಳ್ಳಬಹುದು.
ವ್ಯಾಪಾರ ಸಂದೇಶ ಕಳಿಸುವಿಕೆಯಲ್ಲಿ ವೇಗವನ್ನು ಹೊಂದಿರುವ ಈ ಕ್ಷೇತ್ರ ಮುಂಬರುವ ದಿನಗಳಲ್ಲಿ ಜನರನ್ನು ವ್ಯವಹಾರದತ್ತ ಸೆಳೆಯುವ ಸೇತುವೆಯಾಗಿ ಸಂವಹನ ನಡೆಸುವ ಮಾರ್ಗವಾಗಲಿದೆ ಎಂದು ಮೆಟಾ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಹೇಳಿದ್ದಾರೆ.

ವಾಟ್ಸಾಪ್ ನಲ್ಲಿನ ಜಿಯೋ ಮಾರ್ಟ್ ಸಂಖ್ಯೆ ಗೆ “ಹಾಯ್” ಎಂದು ಕಳುಹಿಸುವ ಮೂಲಕ ಗ್ರಾಹಕರು ವಾಟ್ಸಾಪ್ ನಲ್ಲಿ ಜಿಯೋ ಮಾರ್ಟ್ ನಲ್ಲಿ ಶಾಪಿಂಗ್ ಪ್ರಾರಂಭಿಸಬಹುದು.

WhatsApp ಮೂಲಕ JioMart ಅನ್ನು ಹೇಗೆ ಬಳಸುವುದು ?

WhatsApp ಮೂಲಕ JioMart ನಲ್ಲಿ ಶಾಪಿಂಗ್ ಮಾಡಲು ನೀವು ಅನುಸರಿಸಬಹುದಾದ ಸರಳ ಹಂತಗಳು ಇಲ್ಲಿವೆ:

WhatsApp ಖಾತೆ ತೆರೆಯಿರಿ JioMart ಸಂಖ್ಯೆ 79 7707 9770 ನಲ್ಲಿ “ಹಾಯ್” ಕಳುಹಿಸಿ
ನಂತರ ನೀವು “ಗೆಟ್ ಸ್ಟಾರ್ಟ್” ಆಯ್ಕೆ ಮಾಡಿದಾಗ, ಶುಭಾಶಯ ಸಂದೇಶ ಬರುತ್ತದೆ
ಈಗ “ವೀಕ್ಷಣೆ ಕ್ಯಾಟಲಾಗ್”(view catalogue) ಅನ್ನು
ಒತ್ತಿ
ಈಗ ನಿಮ್ಮ ಪಿನ್ ಕೋಡ್ ನಮೂದಿಸಿ

ಈಗ ನೀವು ಹಣ್ಣುಗಳು ಮತ್ತು ತರಕಾರಿಗಳು, Deane, personal care, mom and baby care ಮುಂತಾದ ವಿಭಾಗಗಳ ಮೂಲಕ ಬ್ರೌಸ್ ಮಾಡಬಹುದು
ನಿಮ್ಮ ಕಾರ್ಟ್‌ಗೆ ಐಟಂ ಅನ್ನು ಸೇರಿಸಲು, “+” ಐಕಾನ್ ಮೇಲೆ ಟ್ಯಾಪ್ ಮಾಡಿ
ಒಮ್ಮೆ ಮಾಡಿದ ನಂತರ, ಮೇಲಿನ ಬಲ ಮೂಲೆಯಲ್ಲಿರುವ ಕಾರ್ಟ್ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ ನೀವು ಕಾರ್ಟ್‌ಗೆ ಹೋಗಬಹುದು ಅಥವಾ ಪರದೆಯ ಕೆಳಭಾಗದಲ್ಲಿರುವ ‘ಕಾರ್ಟ್ ವೀಕ್ಷಿಸಿ’ ಆಯ್ಕೆಯನ್ನು ಟ್ಯಾಪ್ ಮಾಡಿ.

ನಂತರ ನಿಮ್ಮ ವಿಳಾಸವನ್ನು ಮತ್ತು ಪಾವತಿ ವಿಧಾನವನ್ನು ಆಯ್ಕೆ ಮಾಡಿ: ಕ್ಯಾಶ್ ಆನ್ ಡೆಲಿವರಿ, ಜಿಯೋಮಾರ್ಟ್‌ನಲ್ಲಿ ಪಾವತಿಸಿ, ವಾಟ್ಸಾಪ್‌ನಲ್ಲಿ ಪಾವತಿಸಿ – ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು.

ಗ್ರಾಹಕರು JioMart ಕ್ಯಾಟಲಾಗ್ ಅನ್ನು WhatsApp ನಲ್ಲಿ ಇತರರೊಂದಿಗೆ ಹಂಚಿಕೊಳ್ಳಬಹುದು.

Leave A Reply

Your email address will not be published.