Home latest ಬೆಳ್ತಂಗಡಿ : ಬೆಂಕಿ ತಗುಲಿ ಸುಟ್ಟು ಕರಕಲಾದ ಟೈಯರ್ ಅಂಗಡಿ‌ | ಜೊತೆಗೆ ಪಕ್ಕದ ಎರಡು...

ಬೆಳ್ತಂಗಡಿ : ಬೆಂಕಿ ತಗುಲಿ ಸುಟ್ಟು ಕರಕಲಾದ ಟೈಯರ್ ಅಂಗಡಿ‌ | ಜೊತೆಗೆ ಪಕ್ಕದ ಎರಡು ಅಂಗಡಿ ಕೂಡಾ ಅಗ್ನಿಗಾಹುತಿ

Hindu neighbor gifts plot of land

Hindu neighbour gifts land to Muslim journalist

ಉಜಿರೆ : ಚಾರ್ಮಾಡಿ ರಸ್ತೆಯ ಅನುಗ್ರಹ ಶಾಲೆಯ ಸಮೀಪದಲ್ಲಿರುವ ಟೈಯರ್ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾದ ಘಟನೆಯೊಂದು ಈಗಷ್ಟೇ ನಡೆದಿದೆ. ಇದರ ಜೊತೆಗೆ ಅದರ ಪಕ್ಕದಲ್ಲೇ ಇರುವ ಹೋಟೆಲ್ , ಹಾರ್ಡ್ ವೇರ್ ಅಂಗಡಿಗೆ ಕೂಡಾ ಬೆಂಕಿ ತಗುಲಿ, ಹೊತ್ತಿ ಉರಿಯುತ್ತಿದೆ. ಘಟನಾ ಸ್ಥಳದಲ್ಲಿ ಜನಸ್ತೋಮವೇ ನೆರೆದಿದ್ದು ಟ್ರಾಫಿಕ್ ಜಾಮ್ ಉಂಟಾಗಿದೆ. ಬಾರಿ ಪ್ರಮಾಣದ ಬೆಂಕಿ ಉಂಟಾಗಿ ಜನರಿಗೆ ಹತ್ತಿರ ಹೋಗಲು ಆಗುತ್ತಿಲ್ಲ.

ಸ್ಥಳೀಯರು ಹೇಳುವ ಪ್ರಕಾರ ಶಾರ್ಟ್ ಸರ್ಕ್ಯೂಟ್ ಆಗಿರುವ ಸಂಭವ ಎಂದು ಹೇಳಲಾಗುತ್ತಿದೆ. ಅಗ್ನಿ ಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಟೈಯರ್ ಅಂಗಡಿಯ ಒಳಗೆ ಬೈಕ್ ಹಾಗೂ ಕಾರು ಇದ್ದು, ಅವು ಕೂಡಾ ಸುಟ್ಟು ಹೋಗಿವೆ ಎಂದು ಮಾಹಿತಿ ಲಭ್ಯವಾಗುತ್ತಿದೆ. ಅಗ್ನಿಶಾಮಕ ದಳ ಟ್ಯಾಂಕ್ ನಲ್ಲಿ ನೀರು ಖಾಲಿಯಾಗಿದ್ದು ಬೆಂಕಿ ನಂದಿಸುವಲ್ಲಿ ವಿಫಲವಾಗಿದೆ. ಅಗ್ನಿಶಾಮಕ ತಂಡದ ಬೇಜಾವಾಬ್ದಾರಿಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.