ಗಮನಿಸಿ : ಸೆಪ್ಟೆಂಬರ್ 1 ರಿಂದ ಈ ಎಲ್ಲಾ ನಿಯಮಗಳು ಬದಲಾಗಲಿವೆ!!!
ಸೆಪ್ಟೆಂಬರ್ ತಿಂಗಳ ಆರಂಭದೊಂದಿಗೆ ವಿಶೇಷ ಬದಲಾವಣೆಗಳಾಗಳಿದ್ದು, ಬ್ಯಾಂಕಿಂಗ್ , ಟೋಲ್ – ಟ್ಯಾಕ್ಸ್ ಮತ್ತು ಆಸ್ತಿಗೆ ಸೇರಿದಂತೆ ಹಲವು ರೀತಿಯ ಸೇವೆಗಳ ನಿಯಮಗಳು ಬದಲಾಗಲಿದೆ.
ಇದರಿಂದ ನಾಗರಿಕರ ಜೇಬಿಗೆ ಕತ್ತರಿ ಬೀಳುವುದರಲ್ಲಿ ಸಂಶಯವಿಲ್ಲ.
ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗುವ ಸಂಭವವೂ ಇದೆ. ಸೆಪ್ಟೆಂಬರ್ 1ರಿಂದ ಬದಲಾಗುತ್ತಿರುವ ನಿಯಮಗಳನ್ನು ಗಮನಿಸ ಹೊರಟರೆ, ಗ್ಯಾಸ್ ಸಿಲಿಂಡರ್ ಬೆಲೆ ಪರಿಷ್ಕರಣೆ ಪ್ರತಿ ತಿಂಗಳ ಮೊದಲ ದಿನ ಪೆಟ್ರೋಲಿಯಂ ಕಂಪನಿಗಳು ಎಲ್.ಪಿ.ಜಿ.ಯ ಬೆಲೆಗಳನ್ನು ಬದಲಾಯಿಸುತ್ತವೆ. ಈಗಿರುವ ಪರಿಸ್ಥಿತಿಯಲ್ಲಿ ಸದ್ಯ ಇರುವ ಬೆಲೆ ಏರಿಕೆ ಯಾಗುವ ಸಂಭವವಿದೆ.
ಟೋಲ್ ತೆರಿಗೆ ಹೆಚ್ಚಾಗುವ ಸಾಧ್ಯತೆ : ಯಮುನಾ ಎಕ್ಸ್ಪ್ರೆಸ್ ವೇ ಮೇಲಿನ ಟೋಲ್ ತೆರಿಗೆಯು ಹೆಚ್ಚಾಗಲಿದೆ. ನೀವು ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕಾಗಲಿದೆ. ಕಾರ್ , ಸಣ್ಣ ವಾಹನ ಮಾಲೀಕರು ಎಕ್ಸ್ಪ್ರೆಸ್ ವೇ ಮೂಲಕ ಪ್ರಯಾಣಿಸಲು ಪ್ರತಿ ಕಿಲೋಮೀಟರ್ ಗೆ 10 ಪೈಸೆ
ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾದರೆ, ವಾಣಿಜ್ಯ ವಾಹನಗಳು 52 ಪೈಸೆ ಹೆಚ್ಚುವರಿ ಟೋಲ್ ತೆರಿಗೆ ಪಾವತಿಸಬೇಕಾಗಲಿದೆ.
PNB ( ಪಂಜಾಬ್ ನ್ಯಾಷನಲ್ ಬ್ಯಾಂಕ್) ರೈತರು ತಮ್ಮ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಪಡೆಯಲು ಇ – ಕೆ.ವೈ.ಸಿ ಆಗಸ್ಟ್ 31 2022ರ ಒಳಗೆ ನವೀಕರಿಸಬೇಕು. ಇಲ್ಲದೆ ಹೋದರೆ ಖಾತೆಯನ್ನು ನಿರ್ಬಂಧಿಸಲಾಗುತ್ತದೆ. ಇದರಿಂದ ಖಾತೆಯನ್ನು ಬಳಸಲು ತೊಡಕಾಗಬಹುದು.
ವಿಮಾ ಏಜೆಂಟರ ಕಮಿಷನ್ ಕಡಿಮೆ : ಸೆಪ್ಟೆಂಬರ್ 1 ರಿಂದ ಪಾಲಿಸಿಯ ಪ್ರೀಮಿಯಂ ಅನ್ನು ಕಡಿಮೆ ಮಾಡಲಾಗುವುದು ಎಂದು ಐ.ಅರ್.ಡಿ.ಎ.ಐ ಈಗಾಗಲೇ ಹೇಳಿದೆ. ಗ್ರಾಹಕರು ಇದೀಗ ಏಜೆಂಟರಿಗೆ ಶೇಕಡಾ 30 ರಿಂದ 35ರ ಬದಲಾಗಿ ಶೇ.20 ರಷ್ಟು ಕಮಿಷನ್ ಪಾವತಿ ಸಬೇಕು. ಇದರಿಂದ ಗ್ರಾಹಕರ ಹೊರೆ ಕೊಂಚ ಮಟ್ಟಿಗೆ ತಗ್ಗಿದೆ.
ಮನೆ ಖರೀದಿ ಕೂಡ ದುಬಾರಿಯಾಗಲಿದೆ.
ಮನೆ ಖರೀದಿ ಮಾಡುವ ಯೋಜನೆಯಿದ್ದರೆ, ಗಾಜಿಯಾಬಾದ್ ನಲ್ಲಿ ಸರ್ಕಲ್ ದರವನ್ನು ಶೇ.2 ರಿಂದ ಶೇ.4 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 1, 2022ರಿಂದ ಈ ಪರಿಷ್ಕರಣೆ ಅನ್ವಯವಾಗಲಿದೆ.
ಆಡಿ ಕಾರ್ ಬೆಲೆಯಿರಿಕೆ :
ಆಡಿ ಕಾರ್ ಖರೀದಿಸುವ ಯೋಜನೆಯಲ್ಲಿರುವ ಗ್ರಾಹಕರು ದುಪ್ಪಟ್ಟು ಬೆಲೆ ತೆರಬೇಕಾಗಿದೆ. ಕಾರ್ ನ ಬೆಲೆ ಶೇ.2.5 ರಷ್ಟು ಹೆಚ್ಚಾಗಲಿದ್ದು,ಈ ಪರಿಷ್ಕರಣೆ ಸೆಪ್ಟೆಂಬರ್ 1,2022 ರಿಂದ ಜಾರಿಗೆ ಬರಲಿದೆ.