ರಾಜ್ಯದಲ್ಲೊಂದು ಬೆಚ್ಚಿಬೀಳಿಸಿದ ಘಟನೆ | ಬೈಕ್ ಮೇಲೆ ಹೊರಟಿದ್ದ ವ್ಯಕ್ತಿಯ ರುಂಡ ಕಡಿದ ದುಷ್ಕರ್ಮಿಗಳು

Share the Article

ಬೆಳಗಾವಿ: ಬೈಕ್ ನಲ್ಲಿ ತೆರಳುತ್ತಿದ್ದಂತ ವ್ಯಕ್ತಿಯನ್ನು ಅಡ್ಡಗಟ್ಟಿರುವಂತ ದುಷ್ಕರ್ಮಿಗಳು, ರುಂಡವನ್ನು ಕತ್ತರಿಸಿರುವಂತ ಭೀಕರ ಘಟನೆ ಬೆಳಗಾವಿಯ ತಾರಿಹಾಳ್ ಕ್ರಾಸ್ ಬಳಿಯಲ್ಲಿ ನಡೆದಿದೆ. ಈ ಘಟನೆಯಿಂದ ಬೆಳಗಾವಿಯ ಜನತೆಯೇ ಬೆಚ್ಚಿ ಬೀಳುವಂತೆ ಆಗಿದೆ.

ಬೆಳಗಾವಿ ಜಿಲ್ಲೆಯ ತಾರಿಹಾಳ ಕ್ರಾಸ್ ಬಳಿಯ ಮುನವಳ್ಳಿ ಬಳಿಯಲ್ಲಿ ಬೈಕ್ ಮೇಲೆ ಗದಗಯ್ಯ ಹಿರೇಮಠ(40) ಎಂಬುವರು ಹೋಗುತ್ತಿದ್ದರು. ಅವರನ್ನು ತಾರಿಹಾಳ ಕ್ರಾಸ್ ಬಳಿಯಲ್ಲಿ ತಡೆದಿರುವಂತ ದುಷ್ಕರ್ಮಿಗಳು, ಅವರ ರುಂಡವನ್ನು ಕತ್ತರಿಸಿದ್ದಾರೆ.

ಬೈಕ್ ಮೇಲೆ ರುಂಡ ಕತ್ತರಿಸಿದಂತ ಮೃತ ದೇಹವನ್ನು ಕಂಡಂತ ಜನರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹಿರೇಬಾಗೇವಾಡಿ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿ, ಈ ಸಂಬಂಧ ಪ್ರಕರಣವನ್ನು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Leave A Reply