ಆರು ವರ್ಷದ ಪ್ರೀತಿ ಮದುವೆಯ ದಿನ ಕೊನೆಯಾಯ್ತು!!

ಪ್ರೀತಿ ಉಳಿಸಿಕೊಳ್ಳಲು ಅದೆಷ್ಟೋ ಜೋಡಿ ಪರದಾಡುತ್ತಿದ್ದರೆ, ಇಲ್ಲೊಂದು ಕಡೆ ಪ್ರೀತಿಸಿದಾಕೆಯನ್ನು ಮದುವೆ ಆಗುವುದಾಗಿ ಹೇಳಿ ವರನೊಬ್ಬ ಮದುವೆ ಮಂಟಪದಲ್ಲೇ ಬಿಟ್ಟು ಪರಾರಿಯಾದ ಘಟನೆ ನಡೆದಿದೆ.

 

ಹೌದು. ಆರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರೂ, ವರನೊಬ್ಬ ಯುವತಿಯನ್ನು ಮೋಸ ಮಾಡಿ ಪರಾರಿಯಾಗಿದ್ದಾನೆ. ಇಂತಹುದೊಂದು ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ನಡೆದಿದೆ. ರಾಜಶೇಖರ್ ದಾಸ್ ಹಾಗೂ ದೀಪ ಎಂಬುವವರ ಮದುವೆ ಆಗಸ್ಟ್ 18 ರಂದು ನಿಶ್ಚಯವಾಗಿತ್ತು. ಹೆಬ್ಬಣಿ ಗ್ರಾಮದ ಚನ್ನಕೇಶವ ದೇಗುಲದಲ್ಲಿ ಈ ಮದುವೆ ನಿಗದಿಯಾಗಿತ್ತು. ಆದರೆ ಆಗಸ್ಟ್ 17 ರಂದು ಆರತಕ್ಷತೆ ದಿನವೇ ಮದುಮಗ ಪರಾರಿಯಾಗಿದ್ದಾನೆ.

ಇವರಿಬ್ಬರು ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ವಧು ಹಾಗೂ ವರ ಇಬ್ಬರ ಜಾತಿ ಭಿನ್ನವಾಗಿದ್ದು, ಇದೇ ಕಾರಣದಿಂದ ವರ ಮೋಸ ಮಾಡಿ ಹೋಗಿದ್ದಾನೆ ಎನ್ನಲಾಗಿದೆ. ನೂರಾರು ಕನಸು ಕಟ್ಟಿಕೊಂಡಿದ್ದ ಯುವತಿ ಸದ್ಯ ಲಗ್ನ ಪತ್ರಿಕೆ, ಹೊಸ ಸೀರೆಯೊಂದಿಗೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೊರೆ ಹೋಗಿದ್ದಾಳೆ. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.