“ಕೈ ಮುಗಿದು ಮನವಿ ಮಾಡಿದರೂ ಬಗ್ಗದವರಿಗೆ ಕೈ ಎತ್ತಿ ಅರಿವು ಮೂಡಿಸಬೇಕಾದ ಕಾಲ ಇದು”- ಹರೀಶ್ ಪೂಂಜ
ಕೋವಿಡ್ 19 ಸೋಂಕು ಹರಡುವುದನ್ನು ತಡೆಯಲು ವೈದ್ಯಕೀಯ ಸಿಬ್ಬಂದಿಗಳು ಅವರುಗಳ ಬದುಕನ್ನು ಪಣಕ್ಕೆ ಇಟ್ಟು ಹೋರಾಡುತ್ತಿದ್ದಾರೆ.
ಅವರುಗಳ ಈ ಹೋರಾಟ ರಾಜ್ಯದ ಜನತೆಯ ಆರೋಗ್ಯವನ್ನು ಕಾಯುವುದಕ್ಕಾಗಿ, ನಮ್ಮೆಲ್ಲರ ಆರೋಗ್ಯದ ರಕ್ಷಣೆಗಾಗಿ. ತಮ್ಮ ಕುಟುಂಬಗಳನ್ನು ದೂರ ಇಟ್ಟು ನಮಗಾಗಿ ಕೆಲಸ ಮಾಡು ಆ ಅಂತಹ ತ್ಯಾಗಮಯಿಗಳ ಮೇಲೆ ದಾಳಿ ಮಾಡುವವ ಯಾರೇ ಆಗಲಿ ಅವನನ್ನು ಗುಂಡಿಟ್ಟು ಕೊಂದರೂ ತಪ್ಪಿಲ್ಲ.
ಇಂಥಹ ಸಂದರ್ಭಗಳಲ್ಲಿ ಪೊಲೀಸರು ಅವರ ಶಕ್ತಿಯನ್ನು ಉಪಯೋಗಿಸಲು ಅಧಿಕಾರ ನೀಡಿ ಗ್ರಹಮಂತ್ರಿಗಳೇ. ..ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಒತ್ತಾಯಿಸಿದ್ದಾರೆ.
ಕಾರ್ಯ ಸಿದ್ಧಿಗಾಗಿ ರಾಜ ಉಪಯೋಗಿಸುವ ನಾಲ್ಕು ಮಾರ್ಗಗಳು – ಸಾಮ, ದಾನ, ಭೇದ ಮತ್ತು ದಂಡ.
ಮೊದಲ ಮೂರು ಈ ಕ್ರೂರಿಗಳ ಮೇಲೆ ಕೆಲಸ ಮಾಡುತ್ತಿಲ್ಲ. ಈಗ ನಾಲ್ಕನೆಯ ಮಾರ್ಗ ಮಾತ್ರ ಉಳಿದಿದೆ.
ಹೀಗೆಂದು ಬೆಳ್ತಂಗಡಿ ಯ ಶಾಸಕ ಹರೀಶ್ ಪೂಂಜಾ ಅವರು ಫೇಸ್ ಬುಕ್ಕಿನಲ್ಲಿ ಬರೆದು ಕೊಂಡಿದ್ದಾರೆ. ಈಗ ದೇಶಾದ್ಯಂತ ಕೊರೋನಾ ವಿರುದ್ಧ ದ ಹೋರಾಟಕ್ಕೆ ಅಸಹಕಾರ ನೀಡುತ್ತಿರುವ ಜನರ ಬಗ್ಗೆ ನೊಂದು ಮಾತಾಡಿದ್ದಾರೆ.