ಮಂಗಳೂರು : ನಾಯಿದ ಬೀಲ ಚಿತ್ರದ ಪ್ರಾಕ್ಟೀಸ್ ವೇಳೆ ಕಲಾವಿದರ ನಡೆಗೆ ಗರಂ! ಕಾಪಿಕಾಡ್ ಇದ್ದ ಮೀಟಿಂಗ್ ನಿಂದಲೇ ಎದ್ದು ಹೊರನಡೆದ ತುಳುನಾಡ ಮಾಣಿಕ್ಯ!!
ಮಂಗಳೂರು: ಕರಾವಳಿಯಾದ್ಯಂತ ಈಗ ‘ಅಬತರ ‘ಚಿತ್ರ ರಿಲೀಸ್ ಗೆ ದಿನಗಣನೆ ಶುರುವಾಗಿದ್ದು, ಈ ನಡುವೆ ‘ ಅಬತರ ‘ ಚಿತ್ರತಂಡದೊಂದಿಗೆ ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್ ಗರಂ ಆದ ಘಟನೆಯ ವೀಡಿಯೋ ಒಂದು ವೈರಲ್ ಆಗಿದೆ.
ಅರವಿಂದ್ ಬೋಳಾರ್ ಹಾಗೂ ಹಿರಿಯ ನಟರಾದ ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು ಸಹಿತ ಇನ್ನಿತರ ಕಲಾವಿದರು ಒಂದೆಡೆ ಕುಳಿತು ಮಾತನಾಡುತ್ತಿದ್ದ ವೇಳೆ ಕಲಾವಿದರ ಮಧ್ಯೆ ಮಾತಿಗೆ ಮಾತು ಬೆಳೆದಿದ್ದು, ಸಣ್ಣ ಮಟ್ಟಿನ ಜಗಳ ತಾರಕಕ್ಕೇರಿ ತುಳುನಾಡ ಮಾಣಿಕ್ಯ ಎದ್ದು ಹೊರನಡೆದಿದ್ದಾರೆ.
ಅಬತರ ಚಿತ್ರ ರಿಲೀಸ್ ದಿನವೇ ಇನ್ನೊಂದು ಚಿತ್ರದ ಚಿತ್ರೀಕರಣಕ್ಕೆ ದಿನ ನಿಗದಿ ಮಾಡಿರುವುದು ಅರವಿಂದ್ ಬೋಳಾರ್ ಅವರಿಗೆ ಬೇಸರ ಉಂಟು ಮಾಡಿದ್ದು ಎನ್ನಲಾಗಿದ್ದು,
ಅರವಿಂದ ಬೋಳಾರ್ ಅವರು ಜಗಳ ಮಾಡಿಕೊಂಡು ಎದ್ದು ನಡೆದಿದ್ದಾರೆ.
ಬಳಿಕದ ತುಣುಕಿನಲ್ಲಿ ಇದೊಂದು ಜಾಹೀರಾತು ಎನ್ನುವುದು ತಿಳಿದುಬಂದಿದ್ದು, ಕಲಾಭಿಮಾನಿಗಳ ಒತ್ತಡದ ಬದುಕಿನ ನಡುವೆಯೂ ಅಬತರ ಚಿತ್ರದ ಟಿಕೆಟ್ ಆನ್ ಲೈನ್ ನಲ್ಲಿ ಬುಕಿಂಗ್ ಮಾಡಲು ಆಗುತ್ತದೆ ಎನ್ನುವ ಸಂದೇಶ ಸಾರಲು ಇಡೀ ಚಿತ್ರ ತಂಡ ಈ ರೀತಿಯ ಜಗಳದ ನಾಟಕವಾಡಿದೆ ಎನ್ನುವ ವಿಚಾರ ಹೊರಬಂದಿದೆ. ಅರವಿಂದ್ ಬೋಳಾರ್ ಅವರು ನಾಯಿದ ಬೀಲ ಚಿತ್ರದ ಶೂಟಿಂಗ್ ಅನ್ನು ಯಾಕೆ ಇಷ್ಟು ಬೇಗ ಇಟ್ಟುಕೊಂಡಿದ್ದು?, ನನ್ನ ಫ್ಯಾಮಿಲಿ ಅಬತರ ಚಿತ್ರ ನೋಡಬೇಡವೇ ? ಎಂದು ಕೋಪದಲ್ಲಿ ಜಗಳ ಮಾಡಿಕೊಂಡು ಹೊರ ನಡೆದಿದ್ದರು. ಆಗ ಅವರನ್ನು ಹೊರಗೆ ಹೋಗಿ ಕರಕೊಂಡು ಬಂದ ಗೆಳೆಯರೊಬ್ಬರು, ಎಲ್ಲಿಗೆ ನೀವು ಎದ್ದು ಹೋಗುವುದು ಅಂದಿದ್ದಾರೆ. ಅದಕ್ಕೆ ಬೋಳಾರ್ ಅವರು , ” ಮೂಲು ಕುಟ್ಟ ಕುಲ್ಲುಂಡ ಆಪುಂಡಾ? ಟಿಕೆಟ್ ಬುಕ್ ಮಾಳ್ಪೊಡ್ಚ್ಯಾ? ಅಂದಿದಾರೆ. ಚಿತ್ರದ ಟಿಕೆಟ್ ಬುಕ್ ಮಾಡಲು, ಎಲ್ಲೂ ಹೋಗಬೇಕಾಗಿಲ್ಲ, ಮೊಬೈಲ್ ನಲ್ಲೆ, ಆಗ್ತದೆ ಅಂತ ಹೇಳಲು ಇಷ್ಟೆಲ್ಲ ನಾಟಕ ಆಡಿದೆ ಬೋಳಾರ್ ಸಹಿತ ಇತರ ಚಿತ್ರತಂಡ.
ಅಬತರ ಚಿತ್ರ ರಿಲೀಸ್ ದಿನವೇ ಇನ್ನೊಂದು ಚಿತ್ರದ ಚಿತ್ರೀಕರಣಕ್ಕೆ ದಿನ ನಿಗದಿ ಮಾಡಿರುವುದು ಅರವಿಂದ್ ಬೋಳಾರ್ ಅವರಿಗೆ ಬೇಸರ ಉಂಟು ಮಾಡಿದ್ದು ಎನ್ನಲಾಗಿದ್ದು, ಬಳಿಕದ ತುಣುಕಿನಲ್ಲಿ ಇದೊಂದು ಜಾಹೀರಾತು ಎನ್ನುವುದು ತಿಳಿದುಬಂದಿದ್ದು, ಕಲಾಭಿಮಾನಿಗಳ ಒತ್ತಡದ ಬದುಕಿನ ನಡುವೆಯೂ ಅಬತರ ಚಿತ್ರದ ಟಿಕೆಟ್ ಆನ್ ಲೈನ್ ನಲ್ಲಿ ಬುಕಿಂಗ್ ಮಾಡಲು ಆಗುತ್ತದೆ ಎನ್ನುವ ಸಂದೇಶ ಸಾರಲು ಇಡೀ ಚಿತ್ರ ತಂಡ ಈ ರೀತಿಯ ಜಗಳದ ನಾಟಕವಾಡಿದೆ ಎನ್ನುವ ವಿಚಾರ ಹೊರಬಂದಿದೆ.
ಸದ್ಯ ಕರಾವಳಿ ಅಬತರ ಚಿತ್ರ ತೆರೆಗೆ ಬರಲು ಕಾತುರದಿಂದ ಕಾದಿದ್ದು, ಆಗಸ್ಟ್ 18ರಂದು ಎಲ್ಲಾ ಚಿತ್ರ ಮಂದಿರಗಳಲ್ಲಿ ಅಬತರ ಚಿತ್ರ ತೆರೆ ಕಾಣಲಿದೆ. ಅಂದಹಾಗೆ ಅರವಿಂದ್ ಬೋಳಾರ್ ಹಾಗೂ ಇಡೀ ಚಿತ್ರ ತಂಡದ ಜಗಳ ಸುಳ್ಳಾಗಿದ್ದು, ಇದೊಂದು ಚಿತ್ರದ ರಿಲೀಸ್ ದಿನಾಂಕ ಹಾಗೂ ಟಿಕೆಟ್ ಬುಕಿಂಗ್ ಬಗ್ಗೆ ಗೊತ್ತು ಪಡಿಸಲು ಮಾಡಿದ ತಮಾಷೆಯ ಜಗಳವಾಗಿದೆ. ಇದೊಂದು ಮಾರ್ಕೆಟಿಂಗ್ ‘ ಅಬತರ ‘ ಆಗಿದ್ದು, ಸಿನಿಮಾ ಬಗ್ಗೆ ಒಂದು ಶಾಕ್ ವೇವ್ ಕ್ರಿಯೇಟ್ ಮಾಡಲು ಚಿತ್ರ ತಂಡ ಯೋಜನೆ ರೂಪಿಸಿದ್ದರು. ನಟರುಗಳು ತಮ್ಮ ಸಹಜ ಅಬತರ ತೋರಿ, ಅದು ನಿಜವೇನೋ ಎನ್ನುವ ಸುದ್ದಿ ಕ್ರಿಯೇಟ್ ಆಗಿತ್ತು.