ಮದುವೆ ಗೌಜಿಯ ಕಾನ್ಸೆಪ್ಟ್ ನಲ್ಲಿ ನಡೆಯಿತು ಐಟಿ ದಾಳಿ | ಮಿಂಚುವ ಉಡುಗೆ ಧರಿಸಿ ಹೊರಟವರಿಗೆ ಸಿಕ್ತು ಏಣಿಸಲಾಗದಷ್ಟು ನಗದು-ಒಡವೆ

ಆದಾಯ ತೆರಿಗೆ ಅಧಿಕಾರಿಗಳು ಮದುವೆ ಎಂಬ ಕಾನ್ಸೆಪ್ಟ್ ನೊಂದಿಗೆ ದಾಳಿಗೆ ಇಳಿದ ಪ್ರಸಂಗವೊಂದು ನಡೆದಿದೆ. ಕಾರು ತುಂಬಾ ಅಲಂಕಾರ, ಫುಲ್ ಗ್ರಾಂಡ್ ಆಗಿ ಉಡುಗೆಗಳನ್ನೆಲ್ಲ ತೊಟ್ಟು ಅಧಿಕಾರಿಗಳು
ಉಕ್ಕಿನ ವ್ಯಾಪಾರಿ, ಬಟ್ಟೆ ವ್ಯಾಪಾಗಿ ಮತ್ತು ರಿಯಲ್ ಎಸ್ಟೇಟ್ ಡೆವಲಪರ್‌ಗೆ ಸಂಬಂಧಿಸಿದ ಮನೆಗಳು ಮತ್ತು ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿದ ಘಟನೆ ವರದಿಯಾಗಿದೆ.

 

ಜಿಲ್ಲೆಯ ಕೆಲವು ಉದ್ಯಮಿಗಳು ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಮಾಹಿತಿ ಪಡೆದ ನಂತರ, ಆದಾಯ ತೆರಿಗೆ ಇಲಾಖೆಯು 260 ಅಧಿಕಾರಿಗಳನ್ನು ಒಳಗೊಂಡ ಐದು ತಂಡಗಳನ್ನು ರಚಿಸಿತ್ತು. ಬಳಿಕ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿತು.

ಮಹಾರಾಷ್ಟ್ರದ ಜಲಾದಲ್ಲಿರುವ ಕೆಲ ಉದ್ಯಮ ಸಮೂಹಕ್ಕೆ ಸೇರಿದ ಅನೇಕ ಪ್ರದೇಶಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಲೆಕ್ಕಕ್ಕೆ ಸಿಗದ 390 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.

ಆದ್ರೆ, ಇವರ ಮಾಸ್ಟರ್ ಮೈಂಡ್ ಮಾತ್ರ ಮೆಚ್ಚಲೆ ಬೇಕಾಗಿದೆ. ಅಷ್ಟಕ್ಕೂ ಅವರ ಈ ರೀತಿಯ ಮದುವೆ ಕಾನ್ಸೆಪ್ಟ್ ದಾಳಿಗೆ ಕಾರಣವೇ, ದಾಳಿಯ ಬಗ್ಗೆ ಯಾರು ಮಾಹಿತಿ ನೀಡಬಾರದು ಎಂಬುದು. ಹೀಗಾಗಿ, ತಮ್ಮ ಪ್ಲಾನ್ ಅನ್ನು ಕಾರ್ಯಗತಗೊಳಿಸಲು ಐಟಿ ಇಲಾಖೆ 120 ಕಾರುಗಳನ್ನು ಬಳಸಿಕೊಂಡಿತು. ಅದನ್ನು ಮದುವೆ ದಿಬ್ಬಣಕ್ಕೆ ಹೊರಟಿರುವಂತೆಯೇ ವಾಹನಗಳನ್ನು ಅಲಂಕಾರ ಮಾಡಲಾಗಿತ್ತು.

ಅಲ್ಲದೆ, ಕೆಲವೊಂದು ಕಾರುಗಳ ಮೇಲೆ “ದುಲಾನ್ ಹಮ್ ಲೇ ಜಾಯೆಂಗೆ” (ನಾನು ಅವಳನ್ನು ಮದುವೆಯಾಗುತ್ತೇನೆ) ಎಂಬ ಪ್ರಖ್ಯಾತ ಹಿಂದಿ ಸಿನಿಮಾದ ಸಾಲುಗಳನ್ನು ಸಹ ಬರೆಯಲಾಗಿತ್ತು. ಸುಮಾರು 250 ಆದಾಯ ತೆರಿಗೆ ಮತ್ತು ಪೊಲೀಸ್ ಅಧಿಕಾರಿಗಳು ಚೆನ್ನಾಗಿ ಉಡುಗೆ ಧರಿಸಿಕೊಂಡು ಪೇಟೆ ಹಾಕಿಕೊಂಡು ಮದುವೆಗೆ ಹೋಗುವ ವೇಷದಲ್ಲಿ ದಾಳಿ ನಡೆಸಿದ್ದಾರೆ.

ಈ ರೀತಿ ದಾಳಿ ನಡೆಸಿದ ಫಲಿತಾಂಶವಾಗಿ ದಾಳಿಯ ವೇಳೆ 56 ಕೋಟಿ ರೂಪಾಯಿ ನಗದು, 14 ಕೋಟಿ ರೂಪಾಯಿ ಮೌಲ್ಯದ 32 ಕೆಜಿ ಚಿನ್ನ, ಹರಳು ಮತ್ತು ಡೈಮಂಡ್ ಹಾಗೂ ಕೆಲ ಆಸ್ತಿ ದಾಖಲೆಗಳನ್ನು ಐಟಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಆಗಸ್ಟ್ 1 ರಿಂದ 8ರ ನಡುವೆ ದಾಳಿ ನಡೆಸಿದ ವೇಳೆ ಇಷ್ಟೊಂದು ಆಸ್ತಿ ಪತ್ತೆಯಾಗಿದೆ.

ಉಕ್ಕು, ಬಟ್ಟೆ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ವ್ಯವಹರಿಸುವ ಎರಡು ವ್ಯಾಪಾರ ಗುಂಪುಗಳಿಗೆ ಸಂಬಂಧಿಸಿದ ಆವರಣಗಳು, ಗೋದಾಮುಗ ಮತ್ತು ಫಾರ್ಮ್‌ಹೌಸ್‌ಗಳಲ್ಲಿ ಅಧಿಕಾರಿಗಳ ತಂಡಗಳು ದಾಳಿ ನಡೆಸಿವೆ. ದಾಳಿ ವೇಳೆ ಸಿಕ್ಕ ನಗದು ಎಣಿಸಲು ಅಧಿಕಾರಿಗಳಿಗೆ ಸುಮಾರು 13 ತಾಸುಗಳ ಸಮಯ ತೆಗೆದುಕೊಂಡಿದ್ದಾರೆ.

Leave A Reply

Your email address will not be published.