Paytm ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿ

ಭಾರತೀಯರಿಗೆ ಹಣಕಾಸು ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಪೇಟಿಎಂ ದೊಡ್ಡ ವರದಾನ ಎಂದೇ ಹೇಳಬಹುದು. ಇಂದಿನ ಟೆಕ್ನಾಲಜಿಯಲ್ಲಿ ಬೃಹತ್ ಮಾರುಕಟ್ಟೆಯನ್ನು ಹೊಂದಿರುವ ಪೇಟಿಎಂ ಬಳಕೆ ಈಗ ಕೇವಲ ಹಣಕಾಸು ವ್ಯವಹಾರ ನಡೆಸುವುದು, ಶಾಪಿಂಗ್ ಮಾಡುವುದಕ್ಕೆ ಬಿಲ್ ಪಾವತಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಈಗ ಈ ಪೇಟಿಎಂ ಸಂಸ್ಥೆ ಹೊಸ ಹೊಸ ಉಪಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದು ಇದೀಗ ಯಾವುದೇ ರೈಲಿನ ಲೈವ್ ರನ್ನಿಂಗ್ ಸ್ಥಿತಿಯನ್ನು ಪರಿಶೀಲಿಸಲು ಅವಕಾಶ ಮಾಡಿಕೊಟ್ಟಿದೆ.

 

ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇದೊಂದು ಸಿಹಿ ಸುದ್ದಿ ಎಂದೇ ಹೇಳಬಹುದು. ಅಂದ ಹಾಗೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು ತಮ್ಮ ರೈಲುಗಳ ರಿಯಲ್ ಟೈಮ್ ತಿಳಿಯಲು ಅಥವಾ ಏನೇ ಮಾಹಿತಿ ತಿಳಿಯಲೆಂದೇ ಸಹಾಯ ಮಾಡಲು ಹಲವಾರು ಅಪ್ಲಿಕೇಶನ್ ಗಳು ಇವೆ. ಈಗ ಇದೇ ಹಾದಿಯಲ್ಲಿ ಪೇಟಿಎಂ ಹೆಜ್ಜೆ ಇಟ್ಟಿದೆ‌. ತನ್ನ ಬಳಕೆದಾರರಿಗೆ ಅಪ್ಲಿಕೇಶನ್ ಮೂಲಕ ರೈಲು ಟಿಕೆಟ್‌ಗಳನ್ನು ಬುಕ್ ಮಾಡಲು ಸಹಾಯ ಮಾಡುತ್ತಿದೆ.

ನೀವು ಯಾವ ರೀತಿ ರೈಲಿನ ರಿಯಲ್ ಟೈಮ್ ಮಾಹಿತಿಯನ್ನು ಕಂಡುಹಿಡಿಯಬಹುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ.

1: ರೈಲು ಸಂಖ್ಯೆ ಅಥವಾ ರೈಲಿನ ಹೆಸರನ್ನು ನಮೂದಿಸುವುದು.
2: ಬೋರ್ಡಿಂಗ್ ಸ್ಟೇಷನ್ ಆಯ್ಕೆಮಾಡುವುದು.
3: ನಮೂದಿಸಿದ ದಿನಾಂಕಗಳಿಂದ ಬೋರ್ಡಿಂಗ್ ದಿನಾಂಕವನ್ನು ಆಯ್ಕೆ ಮಾಡಿ ಮತ್ತು ‘ಲೈವ್ ಸ್ಥಿತಿಯನ್ನು ಪರಿಶೀಲಿಸಿ’ ಕ್ಲಿಕ್ ಮಾಡಿ.
4: ನೀವು ಈಗ ನಿಮ್ಮ ರೈಲು ಎಲ್ಲಿದೆ ಎಂದು ಗುರುತಿಸಬಹುದು.

ಇಷ್ಟು ಮಾತ್ರವಲ್ಲದೇ, ನೀವು ಈ ಅಪ್ಲಿಕೇಶನ್ ನಲ್ಲೇ ರೈಲ್ ಟಿಕೆಟ್ ಬುಕ್ ಮಾಡಬಹುದು, ಇದು ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದಿಂದ ಸೀಟುಗಳ ಲಭ್ಯತೆಯ ಬಗ್ಗೆ ರಿಯಲ್ ಟೈಮ್ ಅಪ್ಡೇಟ್‌ಗಳನ್ನು ಪಡೆಯುತ್ತದೆ.

Leave A Reply

Your email address will not be published.