BIGG BOSS OTT : ನಾನು ಯಾವಾಗಲೂ ‘ ಮೂಡ್ ‘ ನಲ್ಲಿರುತ್ತೇನೆ ಎಂದ ಸೋನು ಗೌಡ

ಬಿಗ್ ಬಾಸ್ ಒಟಿಟಿಯಲ್ಲಿ ಈಗ ಎಲ್ಲರೂ ತಮ್ಮ ಅಸಲಿ ಮುಖವಾಡ ತೋರಿಸಲು ಶುರು ಮಾಡಿಕೊಂಡಿದ್ದಾರೆ. ಈ ವಾರ ಫುಲ್ ಸೋನು ಗೌಡ ಮತ್ತು ಆರ್ಯವರ್ಧನ್ ಅವರ ಹವಾನೇ ಹೆಚ್ಚಾಗಿದೆ. ಇಬ್ಬರೂ ಮನೆಯಲ್ಲಿ ಹಲವು ಸ್ಪರ್ಧಿಗಳ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ.

 

ಬಿಗ್ ಬಾಸ್ ರಿಯಾಲಿಟಿ ಶೋ ಹಲವು ತಿರುವುಗಳನ್ನು ಪಡೆದುಕೊಂಡಿದೆ. ಮೊದಲೆರಡು ದಿನ ಬಹಳ ಅನೋನ್ಯವಾಗಿದ್ದ ಸ್ಪರ್ಧಿಗಳಲ್ಲಿ ಕೋಪ, ಜಗಳ ಕಾಣಿಸಲಾರಂಭಿಸಿದ್ದಾರೆ. ಅದರಲ್ಲೂ ಸೋಷಿಯಲ್ ಮೀಡಿಯಾ ಸೆನ್ಸೆಷನ್ ಸ್ಟಾರ್ ಸೋನು ಗೌಡರ ಕಿರಿಕ್ ಶುರುವಾಗಿದೆ. ಸೋನು, ಸ್ಪೂರ್ತಿ ಗೌಡ ಜೊತೆ ಕಿರಿಕ್ ಮಾಡಿಕೊಂಡು ಕಣ್ಣೀರು ಹಾಕಿಕೊಂಡ ಪ್ರಸಂಗ ಕೂಡ ನಡೆದಿದೆ. 4ನೇ ದಿನ ಸ್ಪೂರ್ತಿ ಗೌಡ ಹಾಗೂ ರಾಕೇಶ್ ಅಡಿಗನ ಮಾತುಕತೆಯನ್ನು ಅಪಾರ್ಥ ಮಾಡಿಕೊಂಡ ಸೋನು ಗೌಡ ಕಿರಿಕ್ ತೆಗೆದಿದ್ದರು.

ಸೋನು ಸ್ಪೂರ್ತಿ ಜೊತೆಯಲ್ಲಿ, ನೀವು ಸುಮ್ಮನೆ ನಗುತ್ತಿರುವುದು ಸರಿಯಿಲ್ಲ. ಹಿಂದಿನಿಂದ ಹೀಯಾಳಿಸುತ್ತಿರುವುದನ್ನು ನಾನು ನೋಡಿದ್ದೇನೆ ಎಂದು ಮಾತನ್ನು ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಅತ್ತ ಸ್ಪೂರ್ತಿ ಗೌಡ ಕೂಡ ಸೋನುಗೆ ನನ್ನ ವಿಷಯಕ್ಕೆ ಬರಬೇಡ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ರಾಕೇಶ್ ಅಡಿಗ ಕೂಡ ಆಗಮಿಸಿದ್ದು, ಸೋನು ಗೌಡರ ಮನವೊಲಿಸಲು ಯತ್ನಿಸಿದರು. ಅಷ್ಟೇ ಅಲ್ಲದೆ ನೀವು ಅಪಾರ್ಥ ಮಾಡಿಕೊಂಡಿದ್ದೀರಿ. ನಾವು ಯಾರನ್ನೂ ಹೀಯಾಳಿಸಿರಲಿಲ್ಲ. ನಾವಿಬ್ಬರೇ ತಮಾಷೆ ಮಾಡಿಕೊಂಡು ನಕ್ಕಿದ್ದೆವು. ನೀನು ತಪ್ಪು ತಿಳಿದುಕೊಂಡಿದ್ದೀಯಾ ಎಂದು ತಿಳಿಸಿದರು.

ಇದೇ ವೇಳೆ ನಗುವುದು ಬಿಡುವುದು ನನ್ನ ಇಷ್ಟ ಎಂದು ಸ್ಪೂರ್ತಿ ಗೌಡ ಸೋನು ಗೌಡಗೆ ಮತ್ತೊಮ್ಮೆ ಹೇಳಿದರು. ಈ ವೇಳೆ ಇಬ್ಬರ ನಡುವೆ ಜಗಳ ಕೂಡ ತಾರಕ್ಕೇರಿತ್ತು. ಇದೇ ಸಂದರ್ಭದಲ್ಲಿ ಇತರೆ ಸ್ಪರ್ಧಿಗಳು ಇಬ್ಬರ ಜಗಳ ಬಿಡಿಸಿದ್ದಾರೆ. ಇತ್ತ ಯಾರು ಕೂಡ ಸಪೋರ್ಟ್ ಮಾಡದ ಕಾರಣ ಬೇಜಾರಿಂದ ಸೋನು ಗೌಡ ಕಣ್ಣೀರು ಹಾಕುತ್ತಾ ಹೊರಹೋಗಿದ್ದಾರೆ. ಇದೇ ವೇಳೆ ರಾಕೇಶ್ ಸೋನು ಗೌಡರನ್ನು ಸಮಾಧಾನಪಡಿಸಲು ಯತ್ನಿಸಿದ್ದಾನೆ. ಅಲ್ಲದೆ ಬೆಳಬೆಳ್ಳಿಗ್ಗೆನೇ ಮೂಡ್ ಆಫ್ ಆಗೋದ ಎಂದಿದ್ದಾನೆ. ಇದೇ ವೇಳೆ ಕೋಪದಿಂದ ಮರುತ್ತರ ನೀಡಿದ ಸೋನು ಗೌಡ, ನಾನು ಯಾವತ್ತೂ ಮೂಡ್ ಆಫ್ ಆಗಲ್ಲ ಎಂದು ಹೇಳಿದ್ದಾಳೆ. ಈ ವೇಳೆ ಕೋಪ ಮಾಡಿಕೊಂಡಿದ್ದೀಯಾ ಎಂದು ರಾಕೇಶ್ ಮತ್ತೊಮ್ಮೆ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.

ಆದರೆ ಅತ್ತ ಅದಾಗಲೇ ಮುನಿಸಿಕೊಂಡಿದ್ದ ಸೋನು ಗೌಡ, ತಾನು ನಾನು ಯಾವಾಗಲೂ ಒಳ್ಳೆಯ ‘ ಮೂಡ್ ‘ ನಲ್ಲಿರುತ್ತೇನೆ ಎಂದಿದ್ದಾಳೆ. ಜನ ಯಾವ ‘ ಮೂಡು ‘ ಅಂತ ಕನ್ಫ್ಯೂಷನ್ ನಲ್ಲಿದ್ದಾರೆ. ಮೂಡ್ ಗೆ ಸೋನು ಹೋಗೋದು ಅವರಿಗೇನು ಹೊಸತಲ್ಲ ಅನ್ನಿಸಿದೆಯಂತೆ. ಒಟ್ಟಿನಲ್ಲಿ ಮೊದಲ ವಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ಸೋನು ಗೌಡರ ಹವಾ ಜೋರಾಗಿದೆ ಎಂದೇ ಹೇಳಬಹುದು.

Leave A Reply

Your email address will not be published.