ಅಗ್ನಿವೀರ್ ಮಹಿಳೆಯರಿಗೆ ನೇಮಕಾತಿ ಪ್ರಕ್ರಿಯೆ ಶುರು | ಏನು ಅರ್ಹತೆ, ಪರೀಕ್ಷೆ ಹೇಗೆ ನಡೆಯುತ್ತೆ – ಇಲ್ಲಿದೆ ಸಂಪೂರ್ಣ ಮಾಹಿತಿ
ನವದೆಹಲಿ: ಅಗ್ನಿಪಥ್ ಯೋಜನೆಯಡಿಯಲ್ಲಿ ದೇಶಸೇವೆಯ ಕನಸು ಹೊತ್ತ ಮಹಿಳಾ ಮಣಿಗಳಿಗೆ ದೊಡ್ಡ ಖುಷಿಯ ಸುದ್ದಿ ಬಂದಿದೆ.
ಅಗ್ನಿ ಮಹಿಳಾ ವೀರ ವನಿತಾ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೆ ನಡೆಯಲಿದೆ. ನವೆಂಬರ್ 1 ರಿಂದ 3 ರವರೆಗೆ ನಡೆಯಲಿದೆ.
ಕನಾ೯ಟಕದಲ್ಲಿ ಮಿಲಿಟರಿ ಪೊಲೀಸರ ಸಾಮಾನ್ಯ ಕತ೯ವ್ಯ ವಗ೯ದ ಪ್ರಧಾನ ಕಛೇರಿ ನೇಮಕಾತಿ ವಲಯದ ಆಶ್ರಯದಲ್ಲಿ ಈ ನೇಮಕಾತಿ ಪ್ರಕ್ರಿಯೆಯು ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯಲಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.
ಈ ಪ್ರಕ್ರಿಯೆಗೆ ಕರ್ನಾಟಕ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶದ ಲಕ್ಷದ್ವೀಪ ಮತ್ತು ಮಾಹೆಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
17 ವರ್ಷ 5 ತಿಂಗಳ ಮೀರಿದ ಮತ್ತು 23 ವಷ೯ದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹತ್ತನೇ ತರಗತಿಯ ಪರೀಕ್ಷೆಯನ್ನು ಶೇಕಡಾ 45 ಅಂಕದೊಂದಿಗೆ ಉತ್ತೀರ್ಣರಾಗಿರಬೇಕು ಮತ್ತು ಎಲ್ಲಾ ವಿಷಯಗಳಲ್ಲಿ ಶೇಕಡ 35 ಅಂಕ ಪಡೆದಿರಬೇಕು.
ಅಭ್ಯರ್ಥಿಗಳ ಎತ್ತರ ಕನಿಷ್ಟ 165 ಮೀಟರ್ ಇರತಕ್ಕದ್ದು. ಆಗಸ್ಟ್ 9 ರಿಂದ ನೊಂದಣಿ ಪ್ರಕ್ರಿಯೆ ಆರಂಭವಾಗಿದ್ದು ಸೆಪ್ಟೆಂಬರ್ 7 ಕ್ಕೆ ನೊಂದಣಿ ಕೊನೆಯಾಗಲಿದೆ.
ಪರೀಕ್ಷೆಯ ಸಮಯದಲ್ಲಿ ಮಹಿಳಾ ಅಭ್ಯರ್ಥಿಗಳು 1.6 ಕಿಲೋಮೀಟರ್ ಓಡಬೇಕಾಗುತ್ತದೆ. ಅಲ್ಲದೆ ಉದ್ದ ಜಿಗಿತವನ್ನು10 ಅಡಿಗಳಷ್ಟು ಹಾರಬೇಕಾಗುತ್ತದೆ. ಜತೆಗೆ ಕನಿಷ್ಟ 3 ಅಡಿ ಎತ್ತರ ಜಿಗಿತದಲ್ಲಿ ತೇಗ೯ಡೆಯಾದ ಅಭ್ಯರ್ಥಿಗಳಿಗೆ ಮೆಡಿಕಲ್ ಪರೀಕ್ಷೆ ನಡೆಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ www.joinindianarmy.nic.in ಗೆ ಭೇಟಿ ನೀಡಬಹುದು ಎಂದು ರಕ್ಷಣಾ ಇಲಾಖೆ ತಿಳಿಸಿದೆ.