ಮಡಿಕೇರಿ – ಸಂಪಾಜೆ ಹೆದ್ದಾರಿ : ಆ.10 – 11 ರಾತ್ರಿ ವೇಳೆ‌ ಸಂಚಾರ ಬಂದ್ – ಜಿಲ್ಲಾಧಿಕಾರಿ ಆದೇಶ

ಕೊಡಗು ಜಿಲ್ಲೆಯ ಮದೆನಾಡು ಬಳಿ ಭೂಕುಸಿತದ ಆತಂಕ ಇರುವ ಹಿನ್ನೆಲೆಯಲ್ಲಿ ಮಡಿಕೇರಿ-ಸುಳ್ಯ ಹೆದ್ದಾರಿಯನ್ನು ಎರಡು ದಿನಗಳ ಕಾಲ ರಾತ್ರಿ ವೇಳೆ ಬಂದ್ ಮಾಡಲು ಕೊಡಗು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

 

ಹೀಗಾಗಿ ಆ.10 ಹಾಗೂ 11 ರಂದು ರಾತ್ರಿ ವೇಳೆ ವಾಹನ ಸಂಚಾರ ಬಂದ್ ಆ ಮಾಡಲಾಗುತ್ತಿದೆ. ರಾತ್ರಿ 8.30 ರಿಂದ ಬೆಳಗ್ಗೆ 6.30 ವರೆಗೆ ವಾಹನ ಸಂಚಾರ ನಿಷೇಧ ಇರುತ್ತದೆ. ಹಗಲಿನ ವೇಳೆ ಎಂದಿನಂತೆ ವಾಹನ ಸಂಚಾರ ಇರುತ್ತದೆ. ಹೆದ್ದಾರಿಯ ಮದೆನಾಡು ಬಳಿಯ ಕರ್ತೋಜಿ ಎಂಬಲ್ಲಿ ಗುಡ್ಡ ಕುಸಿತದ ಆತಂಕ ಇದೆ. ಹೀಗಾಗಿ ಜಿಲ್ಲಾಡಳಿತ ಎಚ್ಚರಿಕೆ ವಹಿಸಿದೆ.

Leave A Reply

Your email address will not be published.