BIG NEWS | ಗೌರಿ-ಗಣೇಶ ಹಬ್ಬಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಬಿಬಿಎಂಪಿ

Share the Article

ಬೆಂಗಳೂರು: ಗೌರಿ-ಗಣೇಶ ಹಬ್ಬ ಬಂತೆಂದರೆ ಎಲ್ಲರಿಗೂ ಸಂಭ್ರಮದ ಹಬ್ಬ. ಗ್ರಾಂಡ್ ಆಗಿ ಆಚರಿಸಲು, ಗಣೇಶನನ್ನು ಕೂರಿಸಲು ಕಾತುರದಿಂದ ಕಾಯುತ್ತಿರುತ್ತಾರೆ. ಆದರೆ ಈ ವರ್ಷವೂ ಗೌರಿ-ಗಣೇಶ ಹಬ್ಬ ಅದ್ದೂರಿ ಆಚರಣೆಗೆ ಬಿಬಿಎಂಪಿ ಕಡಿವಾಣ ಹಾಕಲಿದೆ.

ಹೌದು. ಗೌರಿ-ಗಣೇಶ ಹಬ್ಬಕ್ಕೆ ಹೊಸ ನಿಯಮವನ್ನು ಬಿಬಿ ಎಂಪಿ ಹೊರಡಿಸಿದೆ. ಈ ವರ್ಷವೂ ಕೂಡ ವಾರ್ಡ್‌ ಗೆ ಒಂದೇ ಗಣೇಶ ಕೂರಿಸಬೇಕು ಎಂದು ತಿಳಿಸಿದೆ.

ಅಲ್ಲದೆ, ಪಿಓಪಿ ಗಣೇಶ ವಿಗ್ರಹಗಳನ್ನು ಕೂರಿಸುವಂತಿಲ್ಲ. ಹೀಗಾಗಿ, ಪಿಓಪಿ ಗಣೇಶ ವಿಗ್ರಹಗಳನ್ನು ತಯಾರಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದಾರೆ.

ಇನ್ನೂ ಯಾವ ಯಾವ ಹೊಸ ನಿಯಮ ಗೌರಿ ಗಣೇಶ ಹಬ್ಬಕ್ಕೆ ಜಾರಿ ಆಗಲಿದೆ ಎಂಬುದು ಕಾದುನೋಡಬೇಕಾಗಿದೆ.

Leave A Reply