ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರ 18ನೇ ವಯಸ್ಸಿನ ಫೋಟೋ ನೋಡಿ | ಐಡಿ ಕಾರ್ಡ್ ಫೋಟೋ ವೈರಲ್
ನಟಿ ರಮ್ಯಾ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರೂ ಕೂಡ ಚಿತ್ರರಂಗದ ಜೊತೆಗಿನ ನಂಟು ಈಗಲೂ ಹಾಗೆನೇ ಇದೆ. ನಟನೆಯಿಂದ ಮಾರು ದೂರ ಹೋಗಿರುವ ನಟಿ ರಮ್ಯಾ ಅವರ ಮೇಲೆ ಮಾತ್ರ ಅವರ ಅಭಿಮಾನಿಗಳು ಹೊಂದಿರುವ ಕ್ರೇಜ್ ಕಮ್ಮಿಯಾಗಿಲ್ಲ.
ರಮ್ಯಾ ಅವರು ಆಗಾಗ ಜಾಲತಾಣಗಳಲ್ಲಿ ತಮ್ಮ ವೀಡಿಯೋಗಳನ್ನು ಫೋಟೋಸ್ ಗಳನ್ನು ಹರಿಬಿಡುತ್ತಾರೆ. ಅದರಲ್ಲೂ ಅವರು ಹಾಕುವ ಕೆಲವೊಂದು ಫೋಟೋಗಳು ನೆನಪಿನ ಪುಟ ತೆರೆಯುವುದಂತೂ ನಿಜ. ರಮ್ಯಾ ಅವರು ಶೇರ್ ಮಾಡುವ ಅಪರೂಪದ ಫೋಟೋಗಳನ್ನು ಅವರ ಅಭಿಮಾನಿಗಳಂತೂ ಸಖತ್ ಎಂಜಾಯ್ ಮಾಡುತ್ತಾರೆ.
ನಟಿ ರಮ್ಯಾ ಅವರು ಈಗೊಂದು ಫೋಟೋ ಹಂಚಿಕೊಂಡಿದ್ದಾರೆ. ಕಾಲೇಜು ದಿನಗಳಲ್ಲಿ ತೆಗೆದ ಫೋಟೋ ಅದು. ಅದರಲ್ಲಿ ತುಂಬ ಕ್ಯೂಟ್ ಆಗಿ ಕಾಣುತ್ತಿರುವ ಅವರನ್ನು ಫ್ಯಾನ್ಸ್ ಕಣ್ತುಂಬಿಕೊಂಡಿದ್ದಾರೆ. ಈ ಲವ್ಲಿ ಫೋಟೋ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ. ಇದು 2000ನೇ ಇಸವಿಯಲ್ಲಿ ಕ್ಲಿಕ್ಕಿಸಿದ ಫೋಟೋ. ’18ನೇ ವಯಸ್ಸಿನಲ್ಲಿ ನಾನು’ ಎಂಬ ಕ್ಯಾಪ್ಶನ್‌ನೊಂದಿಗೆ ಅವರು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಇದನ್ನು ಹಂಚಿಕೊಂಡಿದ್ದಾರೆ.
21ನೇ ವಯಸ್ಸಿಗೆ ತಮ್ಮ ಸಿನಿಪಯಣ ಮಾಡಿದ ರಮ್ಯಾ ಅವರು, 2003ರಲ್ಲಿ ಅವರ ಮೊದಲ ಸಿನಿಮಾ ‘ಅಭಿ’ ಯ ಮೂಲಕ ಭರ್ಜರಿ ಎಂಟ್ರಿ ಪಡೆದಿದ್ದಾರೆ. ಮೊದಲ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ನಟಿಸುವ ಅವಕಾಶ ಅವರಿಗೆ ಸಿಕ್ಕಿತು. ಮತ್ತೆ ರಮ್ಯಾ ಮುಟ್ಟಿದ್ದೆಲ್ಲ ಚಿನ್ನ. ಎರಡನೇ ಸಿನಿಮಾ ‘ಎಕ್ಸ್ ಕ್ಯೂಸ್ ಮೀ’ ಕೂಡ ಸೂಪರ್ ಹಿಟ್ ಆಯಿತು. ಆ ಮೂಲಕ ಕರುನಾಡಿನಲ್ಲಿ ರಮ್ಯಾ ಮನೆಮಾತಾದರು. ‘ಸ್ಯಾಂಡಲ್‌ವುಡ್ ಕ್ವೀನ್’ ಎಂಬ ಬಿರುದು ಪಡೆದರು.
ಕನ್ನಡ ಚಿತ್ರರಂಗ ಮಾತ್ರವಲ್ಲದೇ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ರಮ್ಯಾ ಅವರು ನಟಿಸಿದ್ದಾರೆ. ಆದರೆ ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ ರಮ್ಯಾ ಅವರು ರಾಜಕೀಯದ ಕಡೆಗೆ ನಡೆದರು. ಈಗ ಮತ್ತೆ ಚಿತ್ರರಂಗದ ಬಗ್ಗೆ ರಮ್ಯಾ ಒಲವು ತೋರಿಸುತ್ತಿದ್ದಾರೆ. ಅವರ ಅಭಿಮಾನಿಗಳು ಅವರು ಆದಷ್ಟು ಬೇಗ ಕಮ್ ಬ್ಯಾಕ್ ಆಗಲಿ ಎಂದು ಕಾಯುತ್ತಿದ್ದಾರೆ.
how much is ventolin in canada: buy Ventolin – salbutamol ventolin
albuterol ventolin
furosemida: cheap lasix – lasix 100 mg tablet
п»їbest mexican online pharmacies: mexican pharma – purple pharmacy mexico price list