ಹಸುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರಿನಲ್ಲಿದ್ದ ಹೆತ್ತವರನ್ನು ಕಳೆದುಕೊಂಡ ಮಗ

ಕಾರಿನಲ್ಲಿ ಹೋಗುತ್ತಿದ್ದಾಗ ಹಸುವೊಂದು ಅಡ್ಡ ಬಂದಿದೆ. ಈ ವೇಳೆ ಹಸುವನ್ನು ರಕ್ಷಿಸಲು ಹೋಗಿ ಕಾರಿನಲ್ಲಿ ಚಲಿಸುತ್ತಿದ್ದ ತಂದೆ-ತಾಯಿ ಮೃತಪಟ್ಟು, ಮಗ ಗಾಯಗೊಂಡ ಘಟನೆ ನಡೆದಿದೆ.

 

ಅಂಕುರ್ ಅಗರ್ವಾಲ್ ಎಂಬ 27 ವರ್ಷದ ಯುವಕ ತನ್ನ ತಂದೆ ಶಯಮ್ ಲಾಲ್ ಅಗರವಾಲ್ (70) ಮತ್ತು ತಾಯಿ ಮಂಜು (60) ಪ್ರಯಾಣ ಮಾಡುತ್ತಿದ್ದು, ತಂದೆ ತಾಯಿಇಬ್ಬರು ಮೃತಪಟ್ಟಿರುವ ಈ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಝಾನ್ಸಿ-ಖಜುರಾಹೊ ರಸ್ತೆಯಲ್ಲಿ ನಡೆದಿದೆ.

ಝಾನ್ಸಿಯಿಂದ ಛತ್ತರ್‌ಪುರದ ತಮ್ಮ ಮನೆಗೆ ಅಂಕುರ್​ ಅವರು ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ, ಕಾರಿಗೆ ಏಕಾಏಕಿ ಹಸುವೊಂದು ಅಡ್ಡ ಬಂದಿದೆ. ಹಸುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸಡನ್​ ಆಗಿ ಅಂಕುರ್​ ಬ್ರೇಕ್​ ಹಾಗಿದ್ದಾರೆ. ಕಾರು ಪಲ್ಟಿಯಾಗಿ ಬಿದ್ದುಬಿಟ್ಟಿದೆ. ಈ ಸಂದರ್ಭದಲ್ಲಿ ವೃದ್ಧ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸಂಜಯ್​ ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರದಿಂದ 22 ಕಿಮೀ ದೂರದಲ್ಲಿರುವ ಬಿಲಹರಿ ಗ್ರಾಮದ ಬಳಿ ಅಪಘಾತ ಸಂಭವಿಸಿರುವುದಾಗಿ ನೌಗಾಂವ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂಜಯ್ ವೇದಿಯಾ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತಪಟ್ಟವನ್ನು ಕಾರಿನಿಂದ ಹೊರತೆಗೆದು ಗಾಯಾಳು ಅಂಕುರ್​ನನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ.

Leave A Reply

Your email address will not be published.