‘ಮೀಸೆ ಲೇಡಿ’ ಎಂದೇ ಸುದ್ದಿಯಲ್ಲಿರುವ ಈ ಮಹಿಳೆಯ ಲೈಫ್ ಸ್ಟೋರಿ!
ಬದುಕಿರುವಷ್ಟು ದಿನ ನೆಮ್ಮದಿಯಿಂದ ಬದುಕುವುದು ಮುಖ್ಯ. ಅದು ಇನ್ನೊಬ್ಬರು ಏನು ಹೇಳುತ್ತಾರೆ ಎಂಬ ದೃಷ್ಟಿಕೋನದಿಂದ ಅಲ್ಲ. ನಮ್ಮ ಖುಷಿಗಾಗಿ ಜೀವನ ನಡೆಸಬೇಕು. ಅದೆಷ್ಟೋ ಮಂದಿ ತಮ್ಮ ಆಸಕ್ತಿ, ಇಚ್ಛೆಗಳನ್ನು ಬದಿಗಿಟ್ಟು ಕಂಡವರು ಏನು ಹೇಳುತ್ತಾರೋ ಎಂದುಕೊಂಡು ಇಡೀ ಜೀವನ ಇನ್ನೊಬ್ಬರಿಗಾಗಿ ತ್ಯಾಗ ಮಾಡುತ್ತಾರೆ. ಆದರೆ, ಇಲ್ಲೊಬ್ಬರು ಮಹಿಳೆ ಎಲ್ಲದನ್ನು ಮೆಟ್ಟಿ ನಿಂತು ‘ನನ್ನ ಬದುಕು ನನ್ನಿಷ್ಟ’ ಎಂಬ ಧ್ಯೇಯ ವಾಕ್ಯದೊಂದಿಗೆ ಇತರರಿಗೆ ಮಾದರಿಯಾಗಿದ್ದಾರೆ.
ಹೌದು. ಇಂದಿನ ಕಾಲದಲ್ಲಿ ಫ್ಯಾಷನ್ ಗಾಗಿ ಇದ್ದ ಸುಂದರತೆಯನ್ನು ಕಳೆದುಕೊಳ್ಳುವವರು ಇದ್ದಾರೆ. ಆದರೆ, ನಾವು ಹೇಳಲು ಹೊರಟಿರುವುದು ‘ಮೀಸೆ ಹೊತ್ತ ಗಟ್ಟಿಗಿತ್ತಿ ಮಹಿಳೆ’ಯ ಕುರಿತು. ಸಾಮಾನ್ಯವಾಗಿ ಪುರುಷರು ಟ್ರೆಂಡಿಯಾಗಿ ಗಡ್ಡ, ಮೀಸೆ ಇಟ್ಕೋತಾರೆ. ಫ್ಯಾಷನ್ ತಕ್ಕಂತೆ ಡಿಫರೆಂಟ್ ಶೇಪ್ ನೀಡಿ ಸ್ಟೈಲಿಶ್ ಲುಕ್ ಅಲ್ಲಿ ಮಿಂಚುತ್ತಾರೆ. ಆದರೆ ಹುಡುಗೀರು ಸಾಮಾನ್ಯವಾಗಿ ಮೀಸೆಯ ಕೂದಲನ್ನು ತೆಗೆಯುತ್ತಾರೆ. ಆದರೆ, ಕೇರಳದಲ್ಲೊಬ್ಬ ಮಹಿಳೆ ಮೀಸೆ ಕೂದಲನ್ನು ಹಾಗೆಯೇ ಇಟ್ಟುಕೊಂಡು ಎಲ್ಲೆಡೆ ಸುದ್ದಿಯಾಗುತ್ತಿದ್ದಾರೆ.
ಕೇರಳದ ಕಣ್ಣೂರಿನ ಶೈಜಾ ಎಂಬುವವರು ಮೀಸೆ ಕೂದಲನ್ನು ತೆಗೆಸದೆ ಹಾಗೆಯೇ ಬಿಟ್ಟಿದ್ದಾರೆ. ಇದರಿಂದಲೇ ಸುದ್ದಿಯಾಗಿರುವ ಇವರು, ಸ್ವಲ್ಪ ಜನರಿಂದ ಮೆಚ್ಚುಗೆಗೆ ಪಾತ್ರರಾದರೆ, ಇನ್ನೂ ಕೆಲವರಿಂದ ನಿಂದನೆಗೆ ಒಳಗಾಗಿದ್ದಾರೆ. ‘ತನ್ನ ಮುಖದ ಕೂದಲಿನ ಸುತ್ತಲಿನ ಆಸಕ್ತಿಯಿಂದ ನಾನು ವಿಚಲಿತಳಾಗಿಲ್ಲ ಎಂದು ಹೇಳುತ್ತಾರೆ. ನಾನು ನನ್ನ ಮೀಸೆಯನ್ನು ಪ್ರೀತಿಸುತ್ತೇನೆ’ ಎಂದು 35 ವರ್ಷದ ಶೈಜಾ ತನ್ನ ವಾಟ್ಸಾಪ್ ಸ್ಟೇಟಸ್ ವಿಭಾಗದಲ್ಲಿ ತನ್ನ ಫೋಟೋದ ಕೆಳಗೆ ಹಾಕಿಕೊಂಡಿದ್ದಾಳೆ.
ವಿಭಿನ್ನವಾಗಿ ಕಂಡಾಗ ಅವರ ಬಳಿ ಪ್ರಶ್ನೆ ಕೇಳೋದು ಸಾಮಾನ್ಯ. ಅದೇ ರೀತಿ ಶೈಜಾ ಅವರಿಗೂ ನೂರೆಂಟು ಪ್ರಶ್ನೆಗಳು ಕೇಳುತ್ತಿದ್ದು, ನಾನು ಅದನ್ನು ಇಷ್ಟಪಡುತ್ತೇನೆ ಎಂದು ಶೈಜಾ ಹೇಳುತ್ತಾರೆ. ಅನೇಕ ಮಹಿಳೆಯರಂತೆ, ಅವರು ವರ್ಷಗಳ ಕಾಲ ತನ್ನ ತುಟಿಯ ಮೇಲೆ ಮುಖದ ಕೂದಲನ್ನು ಹೊಂದಿದ್ದರು. ನಿಯಮಿತವಾಗಿ ತನ್ನ ಹುಬ್ಬುಗಳನ್ನು ಥ್ರೆಡ್ ಮಾಡಿಕೊಳ್ಳುತ್ತಿದ್ದರೂ, ತನ್ನ ಮೇಲಿನ ತುಟಿಯ ಮೇಲಿರುವ ಕೂದಲನ್ನು ತೆಗೆಯುವ ಬಗ್ಗೆ ಎಂದಿಗೂ ಯೋಚಿಸಲ್ಲಿಲ್ಲ ಎಂದು ಶೈಜಾ ಹೇಳುತ್ತಾರೆ. ಸುಮಾರು ಐದು ವರ್ಷಗಳ ಹಿಂದೆ, ಮೀಸೆ ದಪ್ಪವಾಗಲು ಪ್ರಾರಂಭಿಸಿತು ಮತ್ತು ಸಂತೋಷಗೊಂಡ ಶೈಜಾ ಅದನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರಂತೆ.
ಮೀಸೆ ಇಟ್ಕೊಳ್ಳೋದು ನಾಚಿಕೆಯಲ್ಲ, ಹೆಮ್ಮೆ. ಈಗ ಅದು ಇಲ್ಲದೆ ಬದುಕುವುದನ್ನು ನಾನು ಊಹಿಸಲು ಸಾಧ್ಯವಿಲ್ಲ. ಕೋವಿಡ್ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗ, ನಾನು ಎಲ್ಲಾ ಸಮಯದಲ್ಲೂ ಮಾಸ್ಕ್ ಧರಿಸಲು ಇಷ್ಟಪಡಲಿಲ್ಲ. ಏಕೆಂದರೆ ಅದು ನನ್ನ ಮುಖವನ್ನು ಮುಚ್ಚುತ್ತದೆ ಎಂದು ಶೈಜಾ ಹೇಳುತ್ತಾರೆ. ಅವಳನ್ನು ನೋಡಿದ ಅನೇಕರು ಅವಳ ಮೀಸೆಯನ್ನು ತೆಗೆಯಲು ಒತ್ತಾಯಿಸಿದ್ದಾರೆ. ಆದರೆ ಇದಕ್ಕೆ ಶೈಜಾ ನಿರಾಕರಿಸಿದರು. ಮೀಸೆಯನ್ನು ಹೊಂದಿರುವುದರಿಂದ ನಾನು ಸುಂದರವಾಗಿಲ್ಲ ಎಂದು ನಾನು ಎಂದಿಗೂ ಭಾವಿಸಿಲ್ಲ. ನಾನು ಎರಡು ಜೀವನವನ್ನು ಹೊಂದಿದ್ದರೆ, ಬಹುಶಃ ನಾನು ಇತರರಿಗಾಗಿ ಒಂದನ್ನು ಬದುಕುತ್ತೇನೆ ಎಂದು ಶೈಜಾ ಹೇಳುತ್ತಾರೆ. ಒಟ್ಟಾರೆ ಇವರು ಇವರಿಗಾಗಿ ಬದುಕುತ್ತಿರುವುದು ಎಲ್ಲರಿಗೂ ಸ್ಫೂರ್ತಿ ಆಗಿದೆ..