Home ಬೆಂಗಳೂರು ಕೇವಲ ಎರಡೇ ಗಂಟೆಗಳಲ್ಲಿ ನಿಮ್ಮ ಮನೆ ತಲುಪಲಿದೆ ಗ್ಯಾಸ್ ಸಿಲಿಂಡರ್!

ಕೇವಲ ಎರಡೇ ಗಂಟೆಗಳಲ್ಲಿ ನಿಮ್ಮ ಮನೆ ತಲುಪಲಿದೆ ಗ್ಯಾಸ್ ಸಿಲಿಂಡರ್!

Hindu neighbor gifts plot of land

Hindu neighbour gifts land to Muslim journalist

ಎಲ್ ಪಿಜಿ ಸಿಲಿಂಡರ್ ನ ಒಂದು ಕಡೆ ಬೆಲೆ ಏರಿಕೆ ಆದರೆ, ಇನ್ನೊಂದು ಕಡೆ ಅಗತ್ಯಕ್ಕೆ ಸಿಲಿಂಡರ್ ಸಿಗದೇ ಇರುವುದೇ ಗ್ರಾಹಕರ ದೊಡ್ಡ ಸಮಸ್ಯೆಯಾಗಿತ್ತು. ಗ್ಯಾಸ್ ಬುಕಿಂಗ್ ಮಾಡಿದ ಬಳಿಕ ಅದೆಷ್ಟೋ ಗಂಟೆಗಳವರೆಗೆ ಕಾಯಬೇಕಿದೆ. ಆದ್ರೆ, ಇನ್ನು ಮುಂದೆ ಕೇವಲ ಎರಡೇ ಗಂಟೆಗಳಲ್ಲಿ ನಿಮ್ಮ ಮನೆ ತಲುಪಲಿದೆ ಸಿಲಿಂಡರ್.

ಹೌದು. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿ ಇಂಡಿಯನ್ ಆಯಿಲ್ (IOCL) ತತ್ಕಾಲ್ ಸೇವೆಯನ್ನ ಪ್ರಾರಂಭಿಸಿದೆ. ಈ ಮೂಲಕ, ಗ್ರಾಹಕರಿಗೆ ಕೇವಲ 2 ಗಂಟೆಗಳಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನ ನೀಡಲಾಗುತ್ತಿದೆ. ಗ್ರಾಹಕರು IVRS, ಇಂಡಿಯನ್ ಆಯಿಲ್ ವೆಬ್ಸೈಟ್ ಅಥವಾ ಇಂಡಿಯನ್ ಆಯಿಲ್ ಒನ್ ಅಪ್ಲಿಕೇಶನ್ ಮೂಲಕ ಅತ್ಯಂತ ಕಡಿಮೆ ಪ್ರೀಮಿಯಂನಲ್ಲಿ ಈ ಸೇವೆಯನ್ನ ಪಡೆಯಬಹುದು.

ಇದು ಈಗಾಗಲೇ ಹೈದರಾಬಾದ್ʼನಲ್ಲಿ ಪ್ರಾರಂಭವಾಗಿದೆ. ಇಂಡಿಯನ್ ಆಯಿಲ್ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಕಾಲಕಾಲಕ್ಕೆ ಈ ಸೌಲಭ್ಯದ ಬಗ್ಗೆ ಮಾಹಿತಿ ನೀಡುತ್ತಲೇ ಇರುತ್ತದೆ. ಈಗ ಎಲ್ ಪಿಜಿಯ ಈ ಸೌಲಭ್ಯವನ್ನ ದೇಶಾದ್ಯಂತ ಜಾರಿಗೆ ತರಲು ಎಷ್ಟು ಸಮಯ ತೆಗೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ.

ಕೇವಲ ಒಂದು ಮಿಸ್ಡ್ ಕಾಲ್ʼನಿಂದ ನೀವು ನಿಮ್ಮ ಎಲ್ ಪಿಜಿ ಅನಿಲವನ್ನು ಕಾಯ್ದಿರಿಸಬಹುದು. ನಿಮ್ಮ ಹೊಸ ಇಂಡೇನ್ ಎಲ್ಪಿಜಿ ಸಂಪರ್ಕವು ಕೇವಲ ಮಿಸ್ಡ್ ಕಾಲ್ ದೂರದಲ್ಲಿದೆ ಎಂದು ಇಂಡಿಯನ್ ಆಯಿಲ್ ಟ್ವೀಟ್ ಮಾಡಿದೆ. ನೀವು 8454955555 ಡಯಲ್ ಮಾಡಿ ಮತ್ತು ನಿಮ್ಮ ಮನೆ ಬಾಗಿಲಿಗೆ ಎಲ್ ಪಿಜಿ ಸಂಪರ್ಕವನ್ನು ಪಡೆಯಬಹುದಾಗಿದೆ. ಅಸ್ತಿತ್ವದಲ್ಲಿರುವ ಇಂಡೇನ್ ಗ್ರಾಹಕರು ತಮ್ಮ ನೋಂದಾಯಿತ ಫೋನ್ ಸಂಖ್ಯೆಯಿಂದ ಮಿಸ್ಡ್ ಕಾಲ್ ನೀಡುವ ಮೂಲಕ ರೀಫಿಲ್ʼಗಳನ್ನು ಕಾಯ್ದಿರಿಸಬಹುದು.

ನಿಮ್ಮ ನಗರದಲ್ಲಿನ ಗ್ಯಾಸ್ ಸಿಲಿಂಡರ್‌ಗಳ ಇತ್ತೀಚಿನ ದರಗಳನ್ನ ಪರಿಶೀಲಿಸಲು, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯ ಅಧಿಕೃತ ವೆಬ್ಸೈಟ್ ಪರಿಶೀಲಿಸಬಹುದು. ಅದ್ರಂತೆ, https://iocl.com/Products/IndaneGas.aspx ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಇತ್ತೀಚಿನ ದರಗಳನ್ನು ಸಹ ವೀಕ್ಷಿಸಬಹುದು. ಗ್ಯಾಸ್ ಸಿಲಿಂಡರ್ʼಗಳ ಹೊಸ ದರಗಳನ್ನ ಪ್ರತಿ ತಿಂಗಳ ಮೊದಲ ದಿನಾಂಕದಂದು ಬಿಡುಗಡೆ ಮಾಡಲಾಗುತ್ತದೆ.

ದೇಶಾದ್ಯಂತ ಎಲ್ಪಿಜಿ ಸಿಲಿಂಡರ್ ಬೆಲೆಯನ್ನ 50 ರೂ.ಗಳಷ್ಟು ಹೆಚ್ಚಿಸಿದ ನಂತರ ದೇಶದ ಅನೇಕ ರಾಜ್ಯಗಳಲ್ಲಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್‌ಗಳ ಬೆಲೆ ಒಂದು ಸಾವಿರ ರೂಪಾಯಿಗಳನ್ನ ದಾಟಿದೆ. ಇದರ ನಂತರ ಸಾಮಾನ್ಯ ಜನರ ಸಮಸ್ಯೆಗಳು ಗಮನಾರ್ಹವಾಗಿ ಹೆಚ್ಚಿವೆ. ಜೂನ್ 1, ಬುಧವಾರ, ಇಂಡೇನ್ʼನ ಕಮರ್ಷಿಯಲ್ ಸಿಲಿಂಡರ್ 135 ರೂ.ಗಳಷ್ಟು ಅಗ್ಗವಾಗಿದೆ. ಪೆಟ್ರೋಲಿಯಂ ಕಂಪನಿ ಇಂಡಿಯನ್ ಆಯಿಲ್ ಕಮರ್ಷಿಯಲ್ ಸಿಲಿಂಡರ್ ದರವನ್ನ ಕಡಿತಗೊಳಿಸಿದೆ.