Home Fashion 5 ಕೋಟಿ ಖರ್ಚು ಮಾಡಿ, 40 ಬಾರಿ ಸರ್ಜರಿ ಮಾಡಿಸಿಕೊಂಡಾಕೆಗೆ, ಮತ್ತೊಮ್ಮೆ ಬದಲಾಗಲು ಆಸೆ!

5 ಕೋಟಿ ಖರ್ಚು ಮಾಡಿ, 40 ಬಾರಿ ಸರ್ಜರಿ ಮಾಡಿಸಿಕೊಂಡಾಕೆಗೆ, ಮತ್ತೊಮ್ಮೆ ಬದಲಾಗಲು ಆಸೆ!

Hindu neighbor gifts plot of land

Hindu neighbour gifts land to Muslim journalist

ಜಾಲತಾಣದಲ್ಲಿ ಬೇರೆಯವರಿಗಿಂತ ಸುಂದರವಾಗಿ ಕಾಣಲು ಏನು ಮಾಡಲೂ ಸಿದ್ಧರಿರುವವರೂ ಇದ್ದಾರೆ. ಹಾಗಾಗಿ ಎಲ್ಲಾ ಬಗೆಯ ಸೌಂದರ್ಯ ಸಾಧನಗಳನ್ನು ಯುವ ಜನತೆ ಬಳಸುತ್ತಾರೆ. ಇದರಲ್ಲಿ ಬಹಳ ಪ್ರಚಲಿತ ಇರುವುದು ಪ್ಲಾಸ್ಟಿಕ್ ಸರ್ಜರಿ. ಹಾಗೆನೇ ಇತ್ತೀಚೆಗೆ ಯುವಜನತೆ ಕಾಸ್ಮೆಟಿಕ್ ಸರ್ಜರಿ ಹಾಗೂ ಪ್ಲಾಸ್ಟಿಕ್ ಸರ್ಜರಿ ಮೊರೆ ಹೋಗುತ್ತಿರುವುದು ಸಾಮಾನ್ಯ. ಅದರಲ್ಲೂ ವಿದೇಶದಲ್ಲಿ ಇದರ ಹಾವಳಿ ಹೆಚ್ಚಿದೆ ಅಂತಾನೇ ಹೇಳಬಹುದು.

ಇಲ್ಲೊಬ್ಬಾಕೆ ಮಾಡೆಲ್ ತಾನು ನಟಿ ಕಿಮ್ ಕಾರ್ದಶಿಯಾನ್ ನಂತೆ ಕಾಣಬೇಕೆಂದು ಶಸ್ತ್ರಚಿಕಿತ್ಸೆ ಮೂಲಕ ತನ್ನನ್ನು ತಾನು ಬದಲಾಯಿಸಿಕೊಂಡಿದ್ದು, ಈಗ ಈ ಲುಕ್ ನನಗೆ ಬೇಡ, ತಾನು ಮೊದಲಿನಂತೆಯೇ ಕಾಣಬೇಕು ಎಂದು ಮತ್ತೊಮ್ಮೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಿದ್ದಾಳೆಯಂತೆ.

29 ವರ್ಷದ ಬ್ರೆಜಿಲಿಯನ್ ಮಾಡೆಲ್ ಜೆನ್ನಿಫರ್ ಪ್ಯಾಂಫ್ಲೋನಾ ತನ್ನನ್ನು ಕಿಮ್ ಕಾರ್ದಶಿಯಾನ್ ಅವಳಂತೆ ಕಾಣಬೇಕು ಎಂದು ಕಳೆದ 12 ವರ್ಷಗಳ ಅವಧಿಯಲ್ಲಿ 40 ಕಾಸ್ಮೆಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡಿದ್ದು, ಅದಕ್ಕಾಗಿ ಈಕೆ ಸುಮಾರು 600 ಸಾವಿರ ಡಾಲರ್ ಖರ್ಚು ಮಾಡಿದ್ದಾಳಂತೆ. ಆದರೆ ಈಗ ಮತ್ತೊಮ್ಮೆ ತನ್ನ ಮನಸ್ಸನ್ನು ಬದಲಾಯಿಸಿದ ಜೆನ್ನಿಫರ್ ಪ್ಯಾಂಪ್ಲೋನಾ, ಇದೀಗ ತಾನು ಮೊದಲಿನಂತೆಯೇ ಕಾಣಬೇಕು ಎಂದು 120 ಸಾವಿರ ಡಾಲರ್, ಖರ್ಚು ಮಾಡುತ್ತಿದ್ದಾಳೆ.

ಇನ್ನು ಜನರು ನನ್ನನ್ನು ಕಿಮ್ ಕರ್ದಾಶಿಯನ್ ಎಂದು ಕರೆಯುತ್ತಾರೆ ಮತ್ತು ಅದು ಕಿರಿಕಿರಿಯಾಗುತ್ತಿದೆ. ನಾನು ತುಂಬಾ ಒಳ್ಳೆಯ ಕೆಲಸಗಳನ್ನು ಮಾಡಿದ್ದು, ನನ್ನ ವೈಯಕ್ತಿಕ ಜೀವನಲ್ಲೂ ನಾನು ಸಾಧನೆಗಳನ್ನು ಮಾಡಿದ್ದೇನೆ. ಆದರೆ ನಾನು ಕಾರ್ದಶಿಯನ್‌ನಂತೆ ಕಾಣುತ್ತಿದ್ದರಿಂದ ಮಾತ್ರ ನನ್ನನ್ನು ಗುರುತಿಸಲಾಗುತ್ತಿದೆ. ಆದ್ದರಿಂದ ನಾನು ಮೊದಲಿನಂತೆಯೇ ಕಾಣಬೇಕೆಂದು ನಿರ್ಧರಿಸಿದ್ದೇನೆ ಎಂದು ಜೆನ್ನಿಫರ್ ಪ್ಯಾಂಫ್ಲೋನಾ ಹೇಳಿದ್ದಾಳೆ.

ಮಾಡೆಲ್ ಜೆನ್ನಿಫರ್ ಪ್ಯಾಂಪ್ಲೋನಾ ನಿತಂಬ ದುಂಡಗಾಗಿಸಲು ಕೊಬ್ಬಿನ ಚುಚ್ಚುಮದ್ದು ಸೇರಿದಂತೆ ಮೂರು ರೈನೋಪ್ಲಾಸ್ಟಿಗಳು ಮತ್ತು ಎಂಟು ಆಪರೇಷನ್‌ಗಳನ್ನು ಕೂಡ ಮಾಡಿಸಿಕೊಂಡಿದ್ದಾಳೆ.

ಈಗ ಈಕೆಗೆ ಬಹುಶಃ ತನ್ನ ಒರಿಜಿನಲ್ ಸೌಂದರ್ಯವೇ ಬೆಸ್ಟ್ ಎಂದು ಅನಿಸಿರಬಹುದು. ಹಾಗಾಗಿ ಮತ್ತೊಮ್ಮೆ ತನ್ನ ಸಹಜ ಸೌಂದರ್ಯವನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಮತ್ತೊಮ್ಮೆ ಪಡೆಯಲು ಅಪರೇಷನ್ ಗೆ ರೆಡಿಯಾಗಿದ್ದಾಳೆ.