ಪತ್ನಿಯನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿ ಹೊಂಡಕ್ಕೆ ಎಸೆದ ಪತಿ, ಕಾರಣ?

ಬೆಂಗಳೂರು: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಮಾತಿದೆ. ಆದರೆ ಇದೀಗ ಈ ಮಾತಿಗೆ ತದ್ವಿರುದ್ಧವಾಗಿ ಅದೆಷ್ಟೋ ಘಟನೆಗಳು ನಡೆಯುತ್ತಿದೆ. ಸಾಂಬಾರಿಗೆ ಉಪ್ಪು ಜಾಸ್ತಿ ಆಗಿದೆ ಎಂಬೆಲ್ಲಾ ಕ್ಷುಲ್ಲಕ ಕಾರಣಕ್ಕೆ ಪತಿ ತನ್ನ ಪತ್ನಿಯನ್ನು ಕೊಂದಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದೆ. ಇದೀಗ ಅದೇ ಸಾಲಿಗೆ ಇನ್ನೊಂದು ಪ್ರಕರಣವು ಸೇರಿಕೊಂಡಿದ್ದು, ಪತಿ ರಾತ್ರಿ ಮನೆಗೆ ಬಂದಾಗ ಪತ್ನಿ ಬಾಗಿಲು ತೆಗೆಯಲು ತಡ ಮಾಡಿದ್ದಕ್ಕೆ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ತನ್ನ ಪತ್ನಿಯನ್ನು ಕೊಂದಿರುವ ಘಟನೆ ನಗರದಲ್ಲಿ ನಡೆದಿದೆ.

ಮೃತರು ಮಂಜುಳಾ ಎಂದು ತಿಳಿದುಬಂದಿದೆ.

ಮಂಜುಳಾ ತನ್ನ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ ಎಂಬ ಕಾರಣಕ್ಕೆ ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಜೂನ್ 11 ರಂದು, ಆರೋಪಿ ಸಿನಿಮಾ ವೀಕ್ಷಿಸಿ ತಡವಾಗಿ ಮನೆಗೆ ಮರಳಿದ್ದ. ಈ ವೇಳೆ ಮಂಜುಳಾ ಬಾಗಿಲು ತೆರೆಯಲು ಸ್ವಲ್ಪ ಸಮಯ ತೆಗೆದುಕೊಂಡಳು ಮತ್ತು ಏನೂ ಅಡುಗೆ ಮಾಡದೆ ಮಲಗಿದ್ದಳು. ಇದರಿಂದ ಕುಪಿತಗೊಂಡ ಆತ ಅಕೆಯ ತಲೆಗೆ ಬಲವಾದ ಆಯುಧದಿಂದ ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ಹಾವೇರಿ ಮೂಲದ ತನ್ನ ಸ್ನೇಹಿತ ಬಸವ ಗೌಡ ಎಂಬಾತನಿಗೆ ಕರೆ ಮಾಡಿದ್ದಾನೆ. ಮರುದಿನ ಮಧ್ಯಾಹ್ನ 3 ಗಂಟೆಗೆ ಇಬ್ಬರು, ಕಾಮಾಕ್ಷಿಪಾಳ್ಯದ ಮನೆಯಿಂದ ಮೃತ ಮಂಜುಳಾ ಶವವನ್ನು ದ್ವಿ ಚಕ್ರ ವಾಹನದಲ್ಲಿರಿಸಿಕೊಂಡು ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿರುವ ದಾಬಸ್ ಪೇಟೆ ಬಳಿ ಕ್ವಾರಿ ಹೊಂಡದಲ್ಲಿ ಸೂಟ್ ಕೇಸ್ ಬಿಸಾಕಿ ಚೆನ್ನೈಗೆ ಪರಾರಿಯಾಗಿದ್ದ. ನಂತರ ಬಸವೇ ಗೌಡ ತಮ್ಮ ಊರಿಗೆ ತೆರಳಿದ್ದ.

ಹೊನ್ನೇನಹಳ್ಳಿ ಬಳಿ ಆಕೆಯ ಪೋಷಕರ ನಿವಾಸದ ಸಮೀಪವೇ ಹಳ್ಳವಿದ್ದ ಕಾರಣ ಪೊಲೀಸರು ಹುಡುಕಾಟ ನಡೆಸಿದಾಗ ಶವವನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೂನ್ 14 ರಂದು ಪೊಲೀಸರಿಗೆ ಸೂಟ್‌ಕೇಸ್‌ನಲ್ಲಿ ಕೊಳೆತ ಶವ ಪತ್ತೆಯಾಗಿತ್ತು. ನಗರಕ್ಕೆ ವಾಪಸಾದ ನಂತರ ಬಾರ್‌ಗೆ ಹೋಗಿ ಮೊಬೈಲ್ ಸ್ವಿಚ್ ಆನ್ ಮಾಡಿದ ಬಳಿಕ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆತನ ಟವರ್ ಸ್ಥಳದ ಆಧಾರದ ಮೇಲೆ ಆತನನ್ನು ಬಂಧಿಸಲಾಯಿತು.

ಮಂಜುಳಾ ಮೊದಲ ಪತಿ ವಿರೂಪಾಕ್ಷ ಅವರನ್ನು ತೊರೆದು ತಮ್ಮ ಇಬ್ಬರು ಮಕ್ಕಳೊಂದಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿಗೆ ಹೋದ ನಂತರ ಮಂಜುಳಾ ಒಂಟಿಯಾಗಿದ್ದರು. ಮಂಜುಳಾ ರಾಮುನನ್ನು ಪೀಣ್ಯದಲ್ಲಿರುವ ತಾನು ಕೆಲಸ ಮಾಡುವ ಸ್ಥಳದಲ್ಲಿ ಭೇಟಿಯಾಗಿದ್ದಳು.

Leave A Reply

Your email address will not be published.