ಆ್ಯಂಟಿ ಬಯೋಟಿಕ್ ಇಂಜೆಕ್ಷನ್ ಪಡೆದ ಹದಿನಾಲ್ಕು ಮಕ್ಕಳು ತೀವ್ರ ಅಸ್ವಸ್ಥ!

ಶಿವಮೊಗ್ಗ: ಆ್ಯಂಟಿ ಬಯೋಟಿಕ್ ಇಂಜೆಕ್ಷನ್ ಪಡೆದ ಹದಿನಾಲ್ಕು ಮಕ್ಕಳು ತೀವ್ರ ಅಸ್ವಸ್ಥಗೊಂಡ ಘಟನೆ ಸಾಗರ ಉಪವಿಭಾಗಿಯ ಆಸ್ಪತ್ರೆಯಲ್ಲಿ ನಡೆದಿದೆ.

 

ಶೀತ, ಜ್ವರ ಸಂಬಂಧಸಿದಂತೆ 14 ಮಕ್ಕಳು ಆಸ್ಪತ್ರೆಗೆ
ದಾಖಲಾಗಿದ್ದರು. ಭಾನುವಾರ ಸಂಜೆ ಆಸ್ಪತ್ರೆಯ ನರ್ಸ್ ಗಳು ಈ ಮಕ್ಕಳಿಗೆ ಆ್ಯಂಟಿ ಬಯೋಟಿಕ್ ಇಂಜೆಕ್ಷನ್ ನೀಡಿದ್ದರು ಎನ್ನಲಾಗುತ್ತಿದೆ. ಈ ಇಂಜೆಕ್ಷನ್ ಪಡೆದ ಮಕ್ಕಳಲ್ಲಿ ಒಂದೇ ಸಮನೆ ಜ್ವರ ತೀವ್ರಗೊಂಡು ಮಕ್ಕಳಲ್ಲಿ ನಡುಕ ಪ್ರಾರಂಭವಾಗಿದೆ. ಇದರಲ್ಲಿ ನಾಲ್ಕು ಮಕ್ಕಳ ಸ್ಥಿತಿ ಗಂಭೀರವಾಗಿದೆ.

ಇದರಿಂದ ಪೋಷಕರು ತೀವ್ರ ಆತಂಕಕ್ಕೀಡಾಗಿದ್ದು, ತಕ್ಷಣ
ಆಸ್ಪತ್ರೆಯ ಕರ್ತವ್ಯನಿರತ ವೈದ್ಯರಿಗೆ ತಿಳಿಸಿದ್ದಾರೆ. ತದನಂತದ ವೈದ್ಯರ ಜೊತೆ ಸಮಾಲೋಚಿಸಿ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Leave A Reply

Your email address will not be published.