Home Entertainment ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾದಲ್ಲಿ ” ನಾಯಿ” ಗೆ ದೊರಕಿದ ಸಂಭಾವನೆ ಎಷ್ಟು?...

ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾದಲ್ಲಿ ” ನಾಯಿ” ಗೆ ದೊರಕಿದ ಸಂಭಾವನೆ ಎಷ್ಟು? ಇಲ್ಲಿದೆ ಆಶ್ಚರ್ಯಪಡೋ ಉತ್ತರ!

Hindu neighbor gifts plot of land

Hindu neighbour gifts land to Muslim journalist

ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾ ಸಾಕಷ್ಟು ಗಳಕೆ ಮಾಡುತ್ತಿದೆ. ಈ ಸಿನಿಮಾ ರೆಡಿ ಮಾಡೋಕೆ ಇಡೀ ಟೀಂ ಸಾಕಷ್ಟು ಸಮಯದ ತೆಗೆದುಕೊಂಡಿತ್ತು. ಇದಕ್ಕೆ ಕೊವಿಡ್ ಒಂದು ಕಾರಣ ಆದರೆ, ಮತ್ತೊಂದು ಕಾರಣ ಶ್ವಾನದ ಮೂಡ್.

ಸಿನಿಮಾದಲ್ಲಿ ನಟಿಸಿದ ಪ್ರತಿ ಪಾತ್ರಗಳೂ ಹೈಲೈಟ್ ಆಗಿವೆ. ಶ್ವಾನ ಹಾಗೂ ಮನುಷ್ಯನ ನಡುವಿನ ಫ್ರೆಂಡ್‌ಶಿಪ್ ಕಥೆ ‘777 ಚಾರ್ಲಿ’ ಸಿನಿಮಾದ ಹೈಲೈಟ್. ಈ ಚಿತ್ರದಲ್ಲಿ ಚಾರ್ಲಿ ಶ್ವಾನದ ಪಾತ್ರ ತುಂಬಾನೇ ಮುಖ್ಯವಾದುದು. ‘ಸಿನಿಮಾದಲ್ಲಿ ಅತ್ಯುತ್ತಮವಾಗಿ ನಟಿಸಿದ್ದು ಚಾರ್ಲಿ ಎಂದು ಅನೇಕರು ಮೆಚ್ಚುಗೆ ಕೂಡಾ ನೀಡಿದ್ದಾರೆ. ಹಾಗಾದರೆ ಈ ಶ್ವಾನ ಪಡೆದ ಸಂಭಾವನೆ ಎಷ್ಟು? ಇದಕ್ಕೆ ರಕ್ಷಿತ್ ಶೆಟ್ಟಿ ಅವರಿಂದಲೇ ಉತ್ತರ ದೊರಕಿದೆ‌.

ತರಬೇತಿ ಪಡೆದ ನಾಯಿಗಳು ನಮ್ಮ ಮಾತನ್ನು ಕೇಳುತ್ತವೆಯಾದರೂ ಅವುಗಳ ಮೂಡ್ ತುಂಬಾನೇ ಮುಖ್ಯವಾಗುತ್ತದೆ. ಹೀಗಾಗಿ, ಸಿನಿಮಾ ಶೂಟಿಂಗ್‌ಗೆ ಹೆಚ್ಚು ಸಮಯ ಹಿಡಿದಿದೆ. ಈ ಚಿತ್ರದಲ್ಲಿ ಶ್ವಾನ ಪಡೆದ ಸಂಭಾವನೆ ಬಗ್ಗೆ ರಕ್ಷಿತ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ರಕ್ಷಿತ್‌ಗೆ ‘ಚಾರ್ಲಿ ಎಷ್ಟು ಸಂಭಾವನೆ ಪಡೆದಿದೆ’ ಎಂದು ಕೇಳಲಾಯಿತು. ಇದಕ್ಕೆ ರಕ್ಷಿತ್ ಉತ್ತರಿಸಿದ್ದಾರೆ. ‘ಚಾರ್ಲಿಗೆ ಸಂಭಾವನೆ ಒಂದಷ್ಟಾಗಿದೆ. ಅದು ಕೋಟಿ ಮೊತ್ತದಲ್ಲಿದೆ’ ಎಂದರು ರಕ್ಷಿತ್. ಈ ವಿಚಾರ ಕೇಳಿ ಫ್ಯಾನ್ಸ್ ನಿಜಕ್ಕೂ ಅಚ್ಚರಿ ಹೊರಹಾಕಿದ್ದಾರೆ. ಇದು ಚಾರ್ಲಿಯ ಮೊದಲ ಹಾಗೂ ಕೊನೆಯ ಸಿನಿಮಾ. ಈ ಬಗ್ಗೆಯೂ ರಕ್ಷಿತ್ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.